ಬಹುನಿರೀಕ್ಷಿತ ಎಲ್‌ಐಸಿ ಐಪಿಒಗೆ ಸಂಬಂಧಿಸಿದ ಕರಡು ದಾಖಲೆಯನ್ನು ಸರ್ಕಾರವು ಭಾನುವಾರ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸಲ್ಲಿಸಿದೆ. ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಪ್ರಕಾರ, 2021ರ ಸೆಪ್ಟೆಂಬರ್ 30ರ ವೇಳೆಗೆ ಎಲ್‌ಐಸಿಯ ಎಂಬೆಡೆಡ್ ಮೌಲ್ಯವನ್ನು ಸುಮಾರು 5.4 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಇದುವರಗೆ ಸರ್ಕಾರದ ಅತ್ಯಂತ ಮೌಲ್ಯಯುತ ಕಂಪನಿ ಎಂದು ಪರಿಗಣಿಸಲಾದ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)ನ ಮಾರುಕಟ್ಟೆ ಬಂಡವಾಳೀಕರಣವು ಪ್ರಸ್ತುತ ಸುಮಾರು ಐದೂವರೆ ಲಕ್ಷ ಕೋಟಿ ರೂಪಾಯಿಯಷ್ಟಿದೆ.
ಎಲ್ಐಸಿ ಷೇರುಗಳು OFS ರೂಪದಲ್ಲಿ ಮಾರಾಟ
LIC IPO ಭಾರತ ಸರ್ಕಾರದಿಂದ ಔಟ್‌ರೈಟ್ ಆಫರ್ ಫಾರ್ ಸೇಲ್ (OFS) ರೂಪದಲ್ಲಿದೆ. ಕೇಂದ್ರ ಹಣಕಾಸು ಸಚಿವಾಲಯದ ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಅವರ ಪ್ರಕಾರ, 2021ರ ಮಾರ್ಚ್ 31ರಂತೆ ಹೊಸ ಪ್ರೀಮಿಯಂ ವ್ಯವಹಾರದಲ್ಲಿ 28.3 ಕೋಟಿ ಪಾಲಿಸಿಗಳು ಮತ್ತು 13.5 ಲಕ್ಷ ಏಜೆಂಟ್‌ಗಳೊಂದಿಗೆ ಎಲ್‌ಐಸಿಯು ವಿಮಾ ಮಾರುಕಟ್ಟೆಯಲ್ಲಿ ಶೇ.66ರಷ್ಟು ಪಾಲು ಹೊಂದಿದೆ. ಆದರೆ, ಸರ್ಕಾರವು ಸೆಬಿಗೆ ಸಲ್ಲಿಸಿರುವ ಕರಡಿನಲ್ಲಿ LICಯ ಮಾರುಕಟ್ಟೆ ಮೌಲ್ಯ ಅಥವಾ ಐಪಿಒನಲ್ಲಿ ಪಾಲಿಸಿದಾರರಿಗೆ ಅಥವಾ LIC ಉದ್ಯೋಗಿಗಳಿಗೆ ಯಾವುದಾದರೂ ರಿಯಾಯಿತಿ ನೀಡಿದೆಯೇ ಎಂಬ ಕುರಿತು ಬಹಿರಂಗಪಡಿಸಿಲ್ಲ.
ಷೇರುಗಳಲ್ಲಿ ಮೀಸಲಾತಿ
IPO ನ ಒಂದು ಭಾಗವನ್ನು ಆಂಕರ್ ಹೂಡಿಕೆದಾರರಿಗೆ ಕಾಯ್ದಿರಿಸಲಾಗುತ್ತದೆ. ಅಲ್ಲದೆ, ಎಲ್‌ಐಸಿಯ ಐಪಿಒ ವಿತರಣೆಯ ಶೇ.10 ರವರೆಗೆ ಪಾಲಿಸಿದಾರರಿಗೆ ಕಾಯ್ದಿರಿಸಲಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಹೂಡಿಕೆಯ ಗುರಿಯು ₹78,000 ಕೋಟಿ ಕಡಿಮೆಯಾಗುವ ಸಾಧ್ಯತೆಯಿದೆ ಎಂಬ ಅಂದಾಜಿನ ನಡುವೆ LIC ಯ IPO ಸರ್ಕಾರಕ್ಕೆ ಮಹತ್ವ ಪಡೆದುಕೊಂಡಿದೆ. ಏರ್ ಇಂಡಿಯಾದ ಖಾಸಗೀಕರಣ ಮತ್ತು ಇತರ ಪಿಎಸ್‌ಯುಗಳಲ್ಲಿನ ಷೇರು ಮಾರಾಟದ ಮೂಲಕ ಸರ್ಕಾರ ಬಂಡವಾಳ ಸಂಗ್ರಹಿಸಿದೆ. ಕ್ರಿಸಿಲ್ ವರದಿಯ ಪ್ರಕಾರ, ಜೀವ ವಿಮಾ ಕಂತುಗಳ ವಿಷಯದಲ್ಲಿ ಎಲ್ಐಸಿ ವಿಶ್ವದ ಮೂರನೇ ಅತಿದೊಡ್ಡ ಕಂಪನಿಯಾಗಿದೆ.
ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.
Read more
[wpas_products keywords=”deal of the day sale today offer all”]