Karnataka news paper

ಪ್ಯಾನ್ ಇಂಡಿಯಾ ಡ್ರಗ್ಸ್ ಜಾಲ ಮೇಲೆ ದಾಳಿ: ಬೆಂಗಳೂರಿನ ಮೆಡಿಕಲ್ ವಿದ್ಯಾರ್ಥಿ ಸೇರಿದಂತೆ 22 ಮಂದಿಯನ್ನು ಬಂಧಿಸಿದ ಎನ್ ಸಿಬಿ


The New Indian Express

ಬೆಂಗಳೂರು: ಎಂಬಿಬಿಎಸ್ ವಿದ್ಯಾರ್ಥಿ ಆದಿತ್ಯ ರೆಡ್ಡಿ ಸೇರಿದಂತೆ 22 ಮಂದಿಯನ್ನು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ)ಬಂಧಿಸಿದೆ. ಕ್ರಿಪ್ಟೋಕರೆನ್ಸಿಯನ್ನು ಬಳಸಿಕೊಂಡು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಇವರು ತೊಡಗಿದ್ದರು ಎಂದು ಮೂಲಗಳು ತಿಳಿಸುತ್ತವೆ.

ಬಂಧಿತರಲ್ಲಿ ಮುಖ್ಯ ಆರೋಪಿಯನ್ನು ರಘುನಾಥ್ ಕುಮಾರ್ ಅಲಿಯಾಸ್ ಎಲ್ ಸಿಡಿ ಕಿಂಗ್ ಎಂದು ಗುರುತಿಸಲಾಗಿದ್ದು, ಈತನನ್ನು ಪ್ರಸ್ತುತ ಬಳ್ಳಾರಿ ಕಾರಾಗೃಹದಲ್ಲಿ ಇರಿಸಲಾಗಿದೆ. ಜೈಲಿನಲ್ಲಿದ್ದುಕೊಂಡೇ ಸಾಗರೋತ್ತರ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದನು ಎಂದು ಕಾರಾಗೃಹ ಅಧಿಕಾರಿಗಳು ಹೇಳುತ್ತಾರೆ.

ಎನ್‌ಸಿಬಿ, ಕೋಲ್ಕತ್ತಾ ವಲಯ ಘಟಕದಿಂದ ಪ್ರಾರಂಭವಾದ ಮಾದಕ ಜಾಲವನ್ನು ಪತ್ತೆಹಚ್ಚಲು ಆರಂಭಿಸಿದ ಎನ್ ಸಿಬಿ ತಂಡ ಕಳೆದ ನಾಲ್ಕು ತಿಂಗಳುಗಳಿಂದ ಭೇದಿಸಲು ಎನ್‌ಸಿಬಿ ಕೆಲಸ ಮಾಡುತ್ತಿದೆ. ಬಂಧಿತರಲ್ಲಿ ನಾಲ್ವರು ಮಹಿಳೆಯರು, ಸಾಫ್ಟ್‌ವೇರ್ ಎಂಜಿನಿಯರ್, ಸಂಗೀತಗಾರ, ಹಣಕಾಸು ವಿಶ್ಲೇಷಕ ಮತ್ತು ಫ್ಯಾಷನ್ ಡಿಸೈನರ್ ಸೇರಿದ್ದಾರೆ.

ಅಮೇರಿಕಾ, ಇಂಗ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಪೋಲೆಂಡ್‌ನಿಂದ ಇಂಡಿಯಾ ಪೋಸ್ಟ್ ಪಾರ್ಸೆಲ್ ಸೇವೆಯ ಮೂಲಕ ಡಾರ್ಕ್‌ನೆಟ್‌ನಲ್ಲಿ ಡ್ರಗ್ಸ್ ಗಳನ್ನು ಸಂಗ್ರಹಿಸಿದ್ದು ವರದಿಯಾಗಿದೆ. ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಅಸ್ಸಾಂ, ದೆಹಲಿ ಮತ್ತು ಎನ್‌ಸಿಆರ್ ಸೇರಿದಂತೆ 11 ರಾಜ್ಯಗಳಲ್ಲಿ ಎನ್‌ಸಿಬಿ ದಾಳಿ ನಡೆಸಿದೆ.



Read more

[wpas_products keywords=”deal of the day”]