Karnataka news paper

ಕೊರೊನಾ ನಂತರ ಹೂ ಬೆಳೆಯುವವರ ಸಂಖ್ಯೆ ಕುಸಿತ; ಪ್ರೇಮಿಗಳ ದಿನಕ್ಕೆ ಗುಲಾಬಿ ಕೊರತೆ!


ಲಕ್ಕೂರು: ರಾಜ್ಯದಲ್ಲೇ ಅತಿ ಹೆಚ್ಚು ಗುಲಾಬಿ ಹೂವು ಬೆಳೆಯುವ ಲಕ್ಕೂರು ಹೋಬಳಿಯಲ್ಲಿ ಕಳೆದ ಎರಡು ವರ್ಷಗಳಿಂದ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಗುಲಾಬಿ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದ್ದು, ಪ್ರೇಮಿಗಳ ದಿನಕ್ಕೆ ಗುಲಾಬಿ ಹೂವಿನ ಕೊರತೆ ಎದುರಾಗಿದೆ.

ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯಲ್ಲಿ 5 ಸಾವಿರ ಎಕರೆ ವಿಸ್ತೀರ್ಣಕ್ಕೂ ಹೆಚ್ಚು ಪ್ರದೇಶದಲ್ಲಿ ರೈತರು ನಾನಾ ಜಾತಿಯ ಗುಲಾಬಿ ಹೂವುಗಳನ್ನು ಬೆಳೆಯುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನಿಂದ ಗುಲಾಬಿ ಹೂವುಗಳನ್ನು ಬೆಳೆದ ರೈತರಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ರೈತರು ಗುಲಾಬಿ ಗಿಡಗಳನ್ನು ಕಿತ್ತು ಪರ್ಯಾಯವಾಗಿ ತರಕಾರಿ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಬೆಳೆಯಲು ಮುಂದಾದ ಕಾರಣ ಪ್ರಸ್ತುತ 250 ಎಕರೆ ವಿಸ್ತೀರ್ಣದಲ್ಲಿ ಮಾತ್ರ ಗುಲಾಬಿ ಬೆಳೆ ಉಳಿದುಕೊಂಡಿದೆ.
Valentine’s Day Special: ನೀವೇನೆ ಹೇಳಿ ವ್ಯಾಲೆಂಟೈನ್ಸ್ ಡೇಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ..!
ಗುಲಾಬಿ ಬಿತ್ತನೆ ಮಾಡಿರುವ 1 ಎಕರೆ ವಿಸ್ತೀರ್ಣದಲ್ಲಿ ಪ್ರತಿನಿತ್ಯ 100 ರಿಂದ 150 ಕಟ್ಟುಗಳವರೆಗೆ ಹೂಗಳು ಸಿಗುತ್ತವೆ. 1 ಕಟ್ಟಿಗೆ 20 ಹೂವುಗಳ ಗೊಂಚಲನ್ನು ಕಟ್ಟಿ ಅದನ್ನು ಕೋಡಿಹಳ್ಳಿ ಗೇಟ್‌ ಬಳಿ ಇರುವ ಮಾರುಕಟ್ಟೆಗೆ ಸಾಗಿಸುತ್ತಾರೆ. ಮಧ್ಯವರ್ತಿಗಳು ಗೋಣಿ ಚೀಲದಿಂದ ಸುಸಜ್ಜಿತವಾಗಿ ಕಟ್ಟಿ ಬಸ್ಸು, ಟೆಂಪೊಗಳ ಮೂಲಕ ತಮಿಳುನಾಡಿನ ಸೇಲಂ, ಚೆನ್ನೈ, ಮಧುರೈ, ಕುಂಭಕೋಣಂ, ತಿರುವಣ್ಣಾಮಲೈ, ತಂಜಾವೂರು, ಆಂಧ್ರಪ್ರದೇಶದ ಒಂಗೋಲು, ಹೈದರಾಬಾದ್‌, ವಿಜಯವಾಡ, ಕೇರಳ ಸೇರಿದಂತೆ ಪ್ರಪಂಚದ ಹಲವು ದೇಶಗಳಿಗೆ ಕಳುಹಿಸಿಕೊಡುತ್ತಾರೆ. ಲಕ್ಕೂರು ಮಾರುಕಟ್ಟೆಯಿಂದ ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚು ಚೀಲಗಳಲ್ಲಿ ನಾನಾ ರೀತಿಯ ಗುಲಾಬಿ ಹೂಗಳು ಇತರೆ ರಾಜ್ಯಗಳಿಗೆ ರವಾನೆಯಾಗುತ್ತಿತ್ತು. ಪ್ರಸ್ತುತ 100 ಚೀಲಗಳಲ್ಲಿ ಗುಲಾಬಿ ಹೂವುಗಳು ರಫ್ತಾಗುತ್ತಿವೆ.

ಪ್ರತಿ ವರ್ಷ ಫೆ.14ರಂದು ಪ್ರೇಮಿಗಳ ದಿನ ಆಚರಿಸುತ್ತಾರೆ. ಪ್ರೇಮಿಗಳು ಗುಲಾಬಿ ಹೂವುಗಳನ್ನು ತಮ್ಮ ಪ್ರೇಯಸಿಗೆ ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳುಸುತ್ತಾರೆ. ಆದರೆ ಕೊರೊನಾ ಕಾರಣದಿಂದ ಹೋಬಳಿಯಲ್ಲಿ ಬೆಳೆಯುತ್ತಿದ್ದ ಗುಲಾಬಿ ಹೂಗಳ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ಗುಲಾಬಿ ಹೂಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಹವಾಮಾನ ವೈಪರೀತ್ಯದಿಂದ ಮಂಜು ಹೆಚ್ಚಾಗಿ ಸುರಿಯುತ್ತಿರುವುದರಿಂದ ಇಳುವರಿ ಬಹುತೇಕ ಕುಸಿತವಾಗಿದೆ. ಮಾರುಕಟ್ಟೆಯಲ್ಲಿ ಗುಲಾಬಿ ಹೂಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಹೂವುಗಳ ಕೊರತೆಯಿಂದ ಹೂವಿನ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದು ಪ್ರೇಮಿಗಳು ಹೆಚ್ಚಿನ ಹಣ ನೀಡಿ ಖರೀದಿಸುವಂತಹ ಪರಿಸ್ಥಿತಿ ಉಂಟಾಗಿದೆ.
ಫೆ. 14 ಇಂದು ಪ್ರೇಮಿಗಳ ದಿನ : ಕೆಂಪು ಗುಲಾಬಿ ದರ ಹೆಚ್ಚಳ! ಒಂದರ ಬೆಲೆ ಎಷ್ಟಿದೆ ?
ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿರುವ ರೇಡ್‌ ಗುಲಾಬಿ, ಬ್ಲಾಕ್‌ ಮ್ಯೂಸಿಕ್‌, ಕಾರ್‌ವೆಟ್‌, ಶಕೀರಾ, ರಾಯಲ್‌ ಸ್ಟಾಂಡರ್ಡ್‌, ನೆಬ್‌ಲೆಸ್‌, ಗ್ರಾಂಡ್‌, ಪೈವ್‌ಸ್ಟಾರ್‌ ಸೇರಿದಂತೆ ನಾನಾ ರೀತಿಯ ಗುಲಾಬಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕತ್ತರಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಆದರೆ ಕೊರೊನಾ ವೈರಸ್‌ನ ತೊಂದರೆಯಿಂದ ತಾಲೂಕಿನಲ್ಲಿರುವ ಸುಮಾರು 1500 ಹೆಚ್ಚು ಎಕರೆ ವಿಸ್ತೀರ್ಣದಲ್ಲಿದ್ದ ಗುಲಾಬಿ ಹೂಗಳ ಗಿಡಗಳನ್ನು ಕಿತ್ತು ಹಾಕಿರುವುದರಿಂದ ರೈತರ ಆರ್ಥಿಕ ಪ್ರಗತಿಗೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ಲಕ್ಕೂರಿನ ರೈತ ಎಲ್‌ ಪ್ರಕಾಶ್.



Read more

[wpas_products keywords=”deal of the day sale today offer all”]