Karnataka news paper

ಫೆ. 14 ಇಂದು ಪ್ರೇಮಿಗಳ ದಿನ : ಕೆಂಪು ಗುಲಾಬಿ ದರ ಹೆಚ್ಚಳ! ಒಂದರ ಬೆಲೆ ಎಷ್ಟಿದೆ ?


ಬೆಂಗಳೂರು : ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಮುನ್ನಾ ದಿನವಾದ ಭಾನುವಾರ ಕೆಂಪು ಗುಲಾಬಿ, ನಾನಾ ಉಡುಗೊರೆಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಹೂವಿನ ವ್ಯಾಪಾರಿಗಳು ಹೆಚ್ಚು ಪ್ರಮಾಣದಲ್ಲಿ ಕೆಂಪು ಗುಲಾಬಿಯನ್ನು ತರಿಸಿದ್ದರು. ಕಳೆದ ವರ್ಷ ಈ ಅವಧಿಯಲ್ಲಿ ಕೆಂಪು ಗುಲಾಬಿ ದರ 25 ರೂ. ಇತ್ತು.

ಈ ಬಾರಿ 30ರಿಂದ 40 ರೂಪಾಯಿ ಆಗಿದೆ. ಪ್ರತಿ ಬಾರಿ ಬೆಂಗಳೂರಿನಿಂದ ವಿದೇಶಕ್ಕೆ ಗುಲಾಬಿ ಹೂಗಳು ಸಾಕಷ್ಟು ಪ್ರಮಾಣದಲ್ಲಿ ರಫ್ತಾಗುತ್ತಿದ್ದವು. ಆದರೆ, ಈ ಬಾರಿ ವಿಮಾನ ಕಾರ್ಗೊದರ ಏರಿಕೆಯಿಂದ ಗುಲಾಬಿ ರಫ್ತಿಗೆ ಹೊಡೆತ ಬಿದ್ದಿದೆ. ಹೀಗಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಿದೆ.

ಐಫ್ಯಾಬ್‌ನಲ್ಲಿ ನಿತ್ಯ ಐದು ಲಕ್ಷ ಗುಲಾಬಿ!
ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ(ಐಫ್ಯಾಬ್‌)ದಲ್ಲಿ ಕಳೆದ ಒಂದು ವಾರದಿಂದ ನಿತ್ಯ ಐದು ಲಕ್ಷ ಕೆಂಗುಲಾಬಿ ಹೂವುಗಳು ಮಾರಾಟವಾಗುತ್ತಿವೆ ಎಂದು ಐಫ್ಯಾಬ್‌ನ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ್‌ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೂವಿನ ಘಮ: ಗುಲಾಬಿ ಬೆಳೆದು ಲಾಭ ಕಂಡ ರೈತರು; ಉತ್ಕೃಷ್ಟ ಇಳುವರಿ, ಉತ್ತಮ ಬೆಲೆ!

ಐಫ್ಯಾಬ್‌ನಲ್ಲಿ ಒಂದು ಹೂವು(ತಾಜ್‌ಮಹಲ್‌ ಕೆಂಪು ಗುಲಾಬಿ) 10-12 ರೂ. ನಂತೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟಗಾರರು 25-30 ರೂ. ವರೆಗೆ ಮಾರಾಟ ಮಾಡುತ್ತಾರೆ. ನಮ್ಮ ಕೇಂದ್ರದಿಂದ ಕೋಲ್ಕತ್ತ, ಹೊಸದಿಲ್ಲಿ, ಮುಂಬಯಿ ಸೇರಿದಂತೆ ರಾಷ್ಟ್ರದ ನಾನಾ ರಾಜ್ಯಗಳು ಮತ್ತು ಸಿಂಗಪುರ ಮತ್ತಿತರ ರಾಷ್ಟ್ರಗಳಿಗೂ ಗುಲಾಬಿ ರಫ್ತಾಗುತ್ತಿದೆ ಎಂದು ಅವರು ತಿಳಿಸಿದರು.

ಗರುಡಾ ಮಾಲ್‌ನಲ್ಲಿ ಐಫೆಲ್‌ ಟವರ್‌ನ ಆಕರ್ಷಣೆ!

ವ್ಯಾಲೆಂಟೈನ್ಸ್‌ ಡೇ ಅಂಗವಾಗಿ ಮ್ಯಾಗ್ರತ್‌ ರಸ್ತೆಯಲ್ಲಿರುವ ಗರುಡಾ ಮಾಲ್‌ ಅವರಣದಲ್ಲಿ 32 ಅಡಿ ಉದ್ದದ ಐಫೆಲ್‌ ಟವರ್‌ ನಿರ್ಮಿಸಲಾಗಿದೆ. ಐಫೆಲ್‌ ಟವರ್‌ ಅನ್ನು ಕೆಂಪು ಗುಲಾಬಿಗಳಿಂದ ನಿರ್ಮಿಸಲಾಗಿದೆ. ಅಲ್ಲದೆ, ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿರುವ ಹಾರ್ಟ್‌ ಸಿಂಬಲ್‌ ಪ್ರದರ್ಶನವು ಪ್ರೇಮಿಗಳನ್ನು ಸೆಳೆಯುತ್ತಿದೆ. ಫೆ.28ರವರೆಗೆ ಐಫೆಲ್‌ ಟವರ್‌ನ ಪ್ರದರ್ಶನವಿರುತ್ತದೆ.



Read more

[wpas_products keywords=”deal of the day sale today offer all”]