Online Desk
ಬೆಂಗಳೂರು: ಐಪಿಎಲ್ ಮೆಗಾ ಹರಾಜಿನ ಮೊದಲ ದಿನ ಮಾರಾಟವಾಗದ ಆಟಗಾರರ ದೊಡ್ಡ ಪಟ್ಟಿಯೇ ಇದೆ. ಆದರೆ ಎಲ್ಲರನ್ನು ಆಶ್ಚರ್ಯಗೊಳಿಸಿದ್ದು ಮಾತ್ರ ಸುರೇಶ್ ರೈನಾರನ್ನ ಕೊಂಡುಕೊಳ್ಳಲು ಯಾರು ಆಸಕ್ತಿ ತೋರದಿದ್ದದ್ದೂ. ಒಂದುಕಾಲದಲ್ಲಿ ಐಪಿಎಲ್ ಆಳಿದ ರೈನಾರನ್ನು ಈ ಬಾರಿ ಎಲ್ಲಾ ಫ್ರಾಂಚೈಸಿಗಳು ಕಡೆಗಣಿಸಿವೆ.
ರೂ. 2 ಕೋಟಿ ಬಿಡ್‌ನೊಂದಿಗೆ ಕಣಕ್ಕಿಳಿದಿದ್ದ ರೈನಾಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಸಿಲ್ಲ. ಮೂಲ ಬೆಲೆಯಲ್ಲಿ ಉಳಿಸಿಕೊಳ್ಳುವ ಅವಕಾಶವಿದ್ದರೂ ಚೆನ್ನೈ ತಲೆಕೆಡಿಸಿಕೊಂಡಿಲ್ಲ. ಯುಎಇಯಲ್ಲಿ ಸೀರಿಸ್‍ನಲ್ಲಿ ಅರ್ಧಕ್ಕೆ ವಾಪಸ್ಸಾಗಿದ್ದೆ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.
ಇದನ್ನು ಓದಿ: ಐಪಿಎಲ್ 2ನೇ ದಿನದ ಹರಾಜು: ಲಿಯಾಮ್ ಲಿವಿಂಗ್ ಸ್ಟೋನ್ 11.50 ಕೋಟಿ ರೂ.ಗೆ ಬಿಕರಿ
ಇನ್ನೂ ಆಡಮ್ ಜಂಪಾ, ಸ್ಟೀವ್ ಸ್ಮಿತ್, ಇಮ್ರಾನ್ ತಾಹಿರ್, ಆದಿಲ್ ರಶೀದ್, ವೇಡ್, ಬಿಲ್ಲಿಂಗ್ಸ್, ಮೊಹಮ್ಮದ್ ನಬಿ, ಡೇವಿಡ್ ಮಿಲ್ಲರ್ ಮತ್ತು ಸಂದೀಪ್ ಲಾಮಿಚಾನ್ ಹಾಗೂ ಭಾರತದ ಉಮೇಶ್ ಯಾದವ್, ಅಮಿತ್ ಮಿಶ್ರಾ ಮತ್ತು ಸಹಾ ಬಗ್ಗೆ ಯಾವುದೇ ಫ್ರಾಂಚೈಸಿಗಳು ಆಸಕ್ತಿ ವಹಿಸಲಿಲ್ಲ.
ಹರಾಜಿನಲ್ಲಿ ಮಾರಾಟವಾಗದ ಈ ಆಟಗಾರರನ್ನು ಮರಳಿ ಖರೀದಿಸಲು ಸಾಧ್ಯವೇ ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದೆ.
ಮಾರಾಟವಾಗದ ಆಟಗಾರರಿಗೆ ಮತ್ತೊಂದು ಅವಕಾಶವಿದೆ. ಹರಾಜಿನ ಸಮಯದಲ್ಲಿ ಅಥವಾ ನಂತರ ಆಕ್ಸಲರೇಟೆಡ್ ರೌಂಡ್ ಅಡಿಯಲ್ಲಿ ಆಯಾ ಫ್ರಾಂಚೈಸಿಗಳು ಅವರನ್ನು ಹಿಂಪಡೆಯಬಹುದು. ಇದ್ಯಾವುದನ್ನೂ ತೆಗೆದುಕೊಳ್ಳದಿದ್ದರೆ ಇನ್ನೊಂದು ಸಾಧ್ಯತೆ ಇದೆ. ಭವಿಷ್ಯದಲ್ಲಿ ಯಾವುದೇ ಫ್ರಾಂಚೈಸಿಯಲ್ಲಿ ಆಟಗಾರ ಗಾಯಗೊಂಡರೆ ಅವರ ಸ್ಥಾನದಲ್ಲಿ ಮಾರಾಟವಾಗದ ಆಟಗಾರರನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಆರ್‌ಸಿಬಿ ಈ ಹಿಂದೆ ವಿಂಡೀಸ್ ಹಿಟ್ಟರ್ ಕ್ರಿಸ್ ಗೇಲ್ ಅವರನ್ನು ಇದೇ ರೀತಿಯಲ್ಲಿ ನೇಮಕ ಮಾಡಿಕೊಂಡಿತ್ತು.
Read more…
[wpas_products keywords=”deal of the day sports items”]