Karnataka news paper

ಚಿತ್ರೋದ್ಯಮದಲ್ಲಿ 26 ವರ್ಷಗಳು: ಕನಸುಗಳನ್ನು ಬೆನ್ನಟ್ಟಿ ಹೋಗಲು ಇನ್ನೂ ಸಾಕಷ್ಟಿದೆ ಎಂದ ಕಿಚ್ಚ ಸುದೀಪ್


The New Indian Express

ಸೆಪ್ಟೆಂಬರ್ ಬಂತೆಂದರೆ ಬೆಂಗಳೂರಿನ ಪ್ರತಿಷ್ಠಿತ ಜೆ ಪಿ ನಗರ ಬಡಾವಣೆಯ ಇಲ್ಲಿಗೆ ಸುಮಾರು 30 ಸಾವಿರ ಜನರು ಸೇರುತ್ತಾರೆ. ಅವರು ಯಾವುದೋ ಜಾತ್ರೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸೇರುವುದಲ್ಲ. ಅವರು ಜಮಾಯಿಸುತ್ತಿರುವುದು ಕನ್ನಡದ ಸೂಪರ್ ಸ್ಟಾರ್ ಸುದೀಪ್(Kichcha Sudeepa)ಮನೆ ಮುಂದೆ.ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದಕ್ಕೆ ಹಬ್ಬಕ್ಕೆ ಸಂಭ್ರಮದಿಂದ ಸೇರಿದಂತೆ ಸೇರುತ್ತಾರೆ.

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಾಯಕನನನ್ನು ಒಂದು ನಿಮಿಷ ಕಂಡು ಶುಭ ಹಾರೈಕೆ ಮಾಡುವುದೊಂದೇ ಆಸೆ.
ಸುದೀಪ್ ಅವರಿಗೆ ತಾವು ಸಾಗಿಬಂದ ಹಾದಿಯ ಅರಿವಿದೆ. ಜೀವನದಲ್ಲಿ ಏಳುಬೀಳುಗಳನ್ನು ಕಂಡಿದ್ದಾರೆ. ಜನರು ಹುಟ್ಟುಹಬ್ಬಕ್ಕೆ ನನ್ನ ಮನೆ ಮುಂದೆ ಬಂದು ನಿಲ್ಲುವಾಗ ಜನರು ಗುರುತಿಸುತ್ತಿದ್ದಾರೆ ಅನಿಸತೊಡಗಿತು. ಜನದಟ್ಟಣೆ ಮನೆಮುಂದೆ ಹೆಚ್ಚುತ್ತಿದ್ದಾಗ ನಾನು ಜನಪ್ರಿಯನಾಗುತ್ತಿದ್ದೇನೆ ಅನಿಸತೊಡಗಿತು. ಆಗ ನಾನು ಸ್ಟಾರ್ ಎಂದು ನಂಬತೊಡಗಿದೆ. ಇಂದು ವರುಷಗಳುರುತ್ತಾ ಹೋದಂತೆ ನನ್ನ ಬೆಲೆ ನನಗೆ ಗೊತ್ತಾಗತೊಡಗಿದೆ. ಇದು ನನ್ನ ಆಸ್ತಿ ಎಂದು 48 ವರ್ಷದ ವಿಕ್ರಾಂತ್ ರೋಣ(Vikrant Rona) ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಸುದೀಪ್ ಹೇಳುತ್ತಾರೆ.

ವಿಕ್ರಾಂತ್ ರೋಣ ಈ ತಿಂಗಳು ಬಿಡುಗಡೆಯಾಗಬೇಕಿತ್ತು. ಈಗಷ್ಟೇ ಥಿಯೇಟರ್ ಗಳಲ್ಲಿ ಶೇಕಡಾ 100ರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶವನ್ನು ನೀಡಿದೆ. ದುಬೈನ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಿತ್ರ ವಿಕ್ರಾಂತ್ ರೋಣಾ. ಕಳೆದ ವರ್ಷ ಸುದೀಪ್ ನಟನಾಗಿ 25 ವರ್ಷಗಳನ್ನು ಪೂರೈಸಿದ ದಿನದಂದು ಬಿಡುಗಡೆಯಾಯಿತು.
 “ನನಗಾಗಿ ಚಿತ್ರಕಥೆ, ಸ್ಕ್ರಿಪ್ಟ್ ಬರೆಯಲು ಬಯಸುವ ನಿರ್ದೇಶಕರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ. ನನ್ನ ಕನಸುಗಳನ್ನು ಬೆನ್ನಟ್ಟಲು ಸಾಕು, ನನ್ನ ನಿರ್ದೇಶಕರ ಕನಸುಗಳನ್ನು ನನಸಾಗಿಸಲು ನಾನು ಬಯಸುತ್ತೇನೆ ಎಂದು ಹೇಳುತ್ತಾರೆ ಅಭಿನಯ ಚಕ್ರವರ್ತಿ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಕಿಚ್ಚ ಸುದೀಪ್.

2001ರಲ್ಲಿ ಹುಚ್ಚ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ನಾಯಕನಾಗಿ ಗುರುತಿಸಿಕೊಂಡ ಸುದೀಪ್ ಅವರ ಹೆಸರಿನ ಮೊದಲು ಕಿಚ್ಚ ಬಿರುದು ಸಿಕ್ಕಿದ್ದು ಈ ಚಿತ್ರದ ಮೂಲಕವೇ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಕಿಚ್ಚ. ಹುಚ್ಚ, 2002ರಲ್ಲಿ ನಂದಿ, 2003ರಲ್ಲಿ ಸ್ವಾತಿ ಮುತ್ತು ಚಿತ್ರಗಳಿಗೆ ಉತ್ತಮ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿ ಗಳಿಸಿದರು. 2013ರಿಂದ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋವನ್ನು ನಡೆಸಿಕೊಂಡು ಬರುತ್ತಾ 8 ಆವೃತ್ತಿಗಳನ್ನು ಪೂರೈಸಿದೆ.

ಗಿಫ್ಟ್, ಶಾಪಿಂಗ್ ಅಂದರೆ ಬಲು ಪ್ರೀತಿ: ಸುದೀಪ್ ಅವರಿಗೆ ಶಾಪಿಂಗ್ ಮಾಡುವುದು, ಗಿಫ್ಟ್ ಕೊಡುವುದು, ಸ್ವೀಕರಿಸುವುದು ಎಂದರೆ ಎಲ್ಲಿಲ್ಲದ ಪ್ರೀತಿಯಂತೆ. ಆನ್ ಲೈನ್ ನಲ್ಲಿ ಶಾಪಿಂಗ್ ನ್ನು ಕೂಡ ಇಷ್ಟಪಡುತ್ತಾರೆ. ಈ ಬಗ್ಗೆ ಮಾತನಾಡುವ ಸುದೀಪ್ ತಂದೆಯಿಂದ ಹಣ ಕೇಳುವುದನ್ನು 16 ವರ್ಷದಲ್ಲಿಯೇ ಬಿಟ್ಟುಬಿಟ್ಟಿದ್ದೆ. ಬದುಕಿಗೆ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದೆ. ಗಿಫ್ಟ್ ಗಳಿಲ್ಲದೆ ಬೆಳೆದಿದ್ದರ ಬಗ್ಗೆ ನನಗೆ ಗೊತ್ತಿದೆ. ಈಗ ನನಗೆ ಏನೆಲ್ಲಾ ಇಷ್ಟ ಅದನ್ನು ಖರೀದಿಸುತ್ತೇನೆ. ಜೊತೆಗೆ ಯಾರಿಗೆಲ್ಲಾ ಗಿಫ್ಟ್ ಕೊಡಬೇಕೆಂದು ಅನಿಸುತ್ತದೋ ಅವರಿಗೆ ನೀಡುತ್ತೇನೆ, ನನಗೆ ಬೇಕಾಗಿದ್ದು ಜೀವನದಲ್ಲಿ ನನಗೆ ಸಿಕ್ಕಿದೆ ಎನ್ನುತ್ತಾರೆ.

ಸಿನಿಮಾ, ಫ್ಯಾಮಿಲಿ ಟೂರ್ ಎಂದು ಹಲವು ದೇಶಗಳಿಗೆ ಪ್ರವಾಸ ಹೋಗುವ ಸುದೀಪ್ ಗೆ ಬ್ಯಾಂಕಾಕ್ ಎಂದರೆ ಬಹಳ ಇಷ್ಟವಂತೆ. ನನ್ನ ಸ್ವಂತ ಹಣದಿಂದ ವಿದೇಶಕ್ಕೆ ಮೊದಲು ಹೋಗಿದ್ದು ಬ್ಯಾಂಕಾಕ್ ಗೆ, ಜನರನ್ನು ನೋಡುವುದು, ವಾಹನದ ಕಿಟಿಯ ಬಳಿ ಕುಳಿತು ಹೊರಗೆ ನೋಡುವುದು, ಶಾಪಿಂಗ್ ವೇಳೆ ಬಾರ್ಗೈನ್ (Bargain) ಮಾಡುವುದೆಂದರೆ ನನಗೆ ಇಷ್ಟ. ಭಾರತದಲ್ಲಿ ಹೀಗೆಲ್ಲ ನನಗೆ ಮಾಡಲು ಆಗುವುದಿಲ್ಲ ಎಂದರು.

ಕ್ರಿಕೆಟ್ ಮೇಲಿನ ಅವರ ಪ್ರೀತಿ ಯಾರಿಗೂ ತಿಳಿಯದಿಲ್ಲ. ಅವರು ವಿವಿಧ ಪಂದ್ಯಾವಳಿಗಳಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದಾರೆ. “ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಮೂಲಕ ನನಗೆ ಸುಮಾರು 35,000 ಪ್ರೇಕ್ಷಕರಿಗೆ ಆಡಲು ಅವಕಾಶ ಸಿಕ್ಕಿತು. ರಾಜ್ಯ ಮಟ್ಟದ ಪಂದ್ಯದಲ್ಲೂ ನೀವು ಆ ಪ್ರೇಕ್ಷಕರನ್ನು ನೋಡುವುದಿಲ್ಲ ಎನ್ನುತ್ತಾರೆ.

2019 ರಲ್ಲಿ, ಸುದೀಪ್ ಒಂಬತ್ತು ಪ್ರಮುಖ ಪ್ರಾದೇಶಿಕ ಚಲನಚಿತ್ರ ಉದ್ಯಮಗಳ ಒಂಬತ್ತು ತಂಡಗಳನ್ನು ಒಳಗೊಂಡಿರುವ ಹವ್ಯಾಸಿ ಕ್ರಿಕೆಟ್ ಲೀಗ್ CCL ನ ಭಾಗವಾಗಿದ್ದರು. ಕಾರ್ಪೊರೇಟ್ ಟೂರ್ನಮೆಂಟ್‌ಗಾಗಿ ಲಾರ್ಡ್ಸ್‌ನಲ್ಲಿ ಆಡಿದ ಭಾರತದ ಏಕೈಕ ಪ್ರಸಿದ್ಧ ವ್ಯಕ್ತಿ. . ಆಟದ ಬಗೆಗಿನ ಅವರ ಉತ್ಸಾಹವು ಚಲನಚಿತ್ರದ ಕನ್ನಡ ಹಕ್ಕುಗಳನ್ನು ತೆಗೆದುಕೊಳ್ಳಲು ಕಾರಣವಾಯಿತು, ಇತ್ತೀಚೆಗೆ ತೆರೆಕಂಡ ರಣವೀರ್ ಸಿಂಗ್ ಅಭಿನಯದ ಕಪಿಲ್ ದೇವ್ ಜೀವನಾಧಾರಿತ ಚಿತ್ರ 83ರ ಕನ್ನಡದ ಅವತರಣಿಕೆ ಹಕ್ಕನ್ನು ಪಡೆದಿದ್ದರು. 



Read more…

[wpas_products keywords=”party wear dress for women stylish indian”]