FY22ರ ಎರಡನೇ ತ್ರೈಮಾಸಿಕದಲ್ಲಿ ಜಮ್ನಾ ಆಟೋದ ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ (MHCV) ಉತ್ಪಾದನೆಯು Q2FY21ರ 28,810 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡ 99ರಷ್ಟು ಅಂದರೆ 57,220 ಯುನಿಟ್‌ಗಳಷ್ಟು ಬೆಳೆದಿದೆ. ಇದರ ಪರಿಣಾಮ ಕಂಪನಿಯ ಒಟ್ಟು ಆದಾಯವು ಶೇಕಡ 88.62 YoYನಿಂದ ರೂ. 351.90 ಕೋಟಿಗೆ ಹೆಚ್ಚಾಗಿದೆ. ಕಚ್ಚಾ ವಸ್ತುಗಳ ಪೂರೈಕೆಯ ತೊಡಕುಗಳ ಹೊರತಾಗಿಯೂ ಕಂಪನಿಯು ಒಟ್ಟು ಮಾರ್ಜಿನ್‌ಗಳನ್ನು ಅನುಕ್ರಮವಾಗಿ ಶೇಕಡ 37ರಲ್ಲಿ ಉಳಿಸಿಕೊಂಡಿದೆ. ಇದರಿಂದ ಗ್ರಾಹಕರಿಗೆ ಬೆಲೆಗಳನ್ನು ಪೂರೈಸಲು ಸಾಧ್ಯವಾಗಿದೆ. ಕಂಪನಿಯ PBIDT (Ex OI) ರೂ. 44.42 ಕೋಟಿಯಲ್ಲಿದ್ದು ಶೇಕಡ 167 ವಾರ್ಷಿಕ ಏರಿಕೆ ಕಂಡಿದೆ. ಇದಕ್ಕೆ ಅನುಗುಣವಾಗಿ 371 bps ನಿಂದ ಶೇಕಡ 12.62ರವರೆಗೆ ಮಾರ್ಜಿನ್ ವಿಸ್ತರಿಸಿದೆ. ಸಶಕ್ತ ಕಾರ್ಯಾಚರಣೆಯ ಕಾರ್ಯಕ್ಷಮತೆಯ ಹಿನ್ನೆಲೆಯ ತ್ರೈಮಾಸಿಕದಲ್ಲಿ PAT ಶೇಕಡ 233ಕ್ಕೆ ಏರಿಕೆಯಾಗಿ ರೂ. 27.07 ಕೋಟಿ ಮೌಲ್ಯ ಸಾಧಿಸಿದೆ. ಕಂಪನಿಯು ತನ್ನ ಋಣಮುಕ್ತ ಸ್ಥಿತಿಯನ್ನು Q2FY22ರ ಅಂತ್ಯದಲ್ಲಿ ಸಮರ್ಕಪವಾಗಿ ನಿರ್ವಹಿಸುತ್ತದೆ ಮತ್ತು 58.3 ಕೋಟಿ ರೂಪಾಯಿಗಳ ಹೆಚ್ಚುವರಿ ನಗದು ಸ್ಥಾನವನ್ನು ಹೊಂದಿದೆ.
ಕೋವಿಡ್ ಕಾರಣ ಇಳಿಮುಖಗೊಂಡ ವಾಹನ ಮಾರಾಟವು ಆಟೋ ಅನ್ಸಲರಿ ಕಂಪನಿಗಳ ಮೇಲೆ ನೇರ ಪರಿಣಾಮ ಬೀರಿದೆ. ಜಮ್ನಾ ಆಟೋ ಕೂಡಾ ಇದಕ್ಕೆ ಹೊರತಾಗಿಲ್ಲ. ಇದರ ನಡುವೆಯೂ ಪ್ರಾಥಮಿಕ ವಾಣಿಜ್ಯ ಬಳಕೆಯ ವಾಹನಗಳ ಮಾರಾಟದಲ್ಲಿ ಚೇತರಿಕೆ ಕಂಡುಬಂದಿರುವುದರಿಂದ ಕಂಪನಿಯ ವಹಿವಾಟು ಮತ್ತೆ ವೇಗ ಕಂಡುಕೊಂಡಿದೆ. ನಿರ್ಮಾಣ ಮತ್ತು ಗಣಿಗಾರಿಕೆ ವಲಯದಲ್ಲಿ ಚೇತರಿಕೆ ಹಾಗೂ ಇ-ಕಾಮರ್ಸ್‌ನಿಂದ ವಾಣಿಜ್ಯ ಬಳಕೆಯ ವಾಹನಗಳ ಬೇಡಿಕೆ ಹೆಚ್ಚಾಗಿರುವುದರಿಂದ ವಾಹನ ಮಾರುಕಟ್ಟೆ ಸುಧಾರಣೆ ಕಂಡಿದೆ.
ಭಾರತದಲ್ಲಿ ಟ್ರಕ್ ಫ್ಲೀಟ್‌ನ ಸರಾಸರಿ ಆಯಸ್ಸು 9.5 ವರ್ಷ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟದ್ದಾಗಿದೆ. ಇದರ ಪರಿಣಾಮ ಬಿಡಿಭಾಗಗಳ ಬದಲಿಕೆಯ ಬೇಡಿಕೆಯು ಹೆಚ್ಚಾಗಿರುವುದರಿಂದ ಜಮ್ನಾ ಆಟೋ ವಾಣಿಜ್ಯ ಬಳಕೆಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಅಪ್‌ಸೈಕಲ್‌ನ ಫಲಾನುಭವಿಯಾಗುವ ಸಾಧ್ಯತೆಯಿದೆ. ಫ್ಲಿಪ್ ಸೈಡ್‌ನಲ್ಲಿ ಓಮಿಕ್ರಾನ್ ರೂಪಾಂತರದ ಕಾರಣದಿಂದಾಗಿ ಆರ್ಥಿಕ ಚೇತರಿಕೆಯಲ್ಲಿ ಸಂಭವನೀಯ ಅಡ್ಡಿಯು ವಾಣಿಜ್ಯ ಬಳಕೆಯ ಮಾರುಕಟ್ಟೆ ಸೈಕಲ್‌ನ ಚೇತರಿಕೆಗೆ ಅಪಾಯವನ್ನುಂಟುಮಾಡುವ ಸಾಧ್ಯತೆ ಇದೆ.
ಇದರ ಮಧ್ಯೆ ಜಮ್ನಾ ಆಟೋ ಹಲವಾರು ಹೊಸ ಉತ್ಪನ್ನಗಳನ್ನು ಆಫ್ಟರ್ ಮಾರ್ಕೆಟ್‌ನಲ್ಲಿ ಬಿಡುಗಡೆ ಮಾಡಿದೆ. ಇದು ಪ್ರತಿ ವಾಹನದ ಮೌಲ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಈ ಉತ್ಪನ್ನಗಳಲ್ಲಿ ಸ್ಪ್ರಿಂಗ್ಸ್ ಸಂಬಂಧಿತ ಉತ್ಪನ್ನಗಳು U-ಬೋಲ್ಟ್, ಸೆಂಟರ್ ಬೋಲ್ಟ್, ಬುಷ್, ಹ್ಯಾಂಗರ್ ಶಕಲ್ ಮತ್ತು ಸ್ಪ್ರಿಂಗ್ ಪಿನ್ ಸೇರಿವೆ. ಲಿಫ್ಟ್ ಆಕ್ಸಲ್ ಸಂಬಂಧಿತ ಉತ್ಪನ್ನಗಳು – ಮುಖ್ಯವಾಗಿ ಏರ್ ಬೆಲ್ಲೋ/ ಸ್ಪ್ರಿಂಗ್ ಮತ್ತು ಟ್ರೈಲರ್ ಸಸ್ಪೆನ್ಷನ್ ವ್ಯವಸ್ಥೆಗಳಾಗಿವೆ.
ಇಂದು ಬೆಳಗ್ಗೆ 10 ಗಂಟೆಗೆ ಜಮ್ನಾ ಆಟೋ ಇಂಡಸ್ಟ್ರೀಸ್ ರೂ. 108.55ರಲ್ಲಿ ವಹಿವಾಟು ಆರಂಭಿಸಿದೆ. ಕಂಪನಿಯ ಸ್ಟಾಕ್ ಬೆಂಚ್‌ಮಾರ್ಕ್ ಸೂಚ್ಯಂಕದಲ್ಲಿನ 0.21% ಗಳಿಕೆಗೆ ಎದುರು ಪ್ರತಿ ಷೇರಿಗೆ 0.46% ಅಥವಾ ರೂ. 0.50 ರಷ್ಟು ಕಡಿಮೆಯಾಗಿದೆ. ಬಿಎಸ್‌ಇಯಲ್ಲಿ ಸ್ಕ್ರಿಪ್‌ನ 52 ವಾರದ ಗರಿಷ್ಠ ಮೌಲ್ಯವು ರೂ. 117.80 ಮತ್ತು 52 ವಾರದ ಕನಿಷ್ಠ ರೂ. 50.05 ದಾಖಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು.
ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.