Karnataka news paper

ಫೆ.14 ರಿಂದ ಎಲ್ಲಾ ರೈಲುಗಳಲ್ಲಿ ಬೇಯಿಸಿದ ಆಹಾರ ಸೇವೆ ಪುನರ್ ಆರಂಭ


ANI

ನವದೆಹಲಿ: ದೇಶಾದ್ಯಂತ ಕೋವಿಡ್ ಲಾಕ್ ಡೌನ್ ನಿರ್ಬಂಧ ಇಲ್ಲದಿರುವುದು ಹಾಗೂ ಪ್ರಯಾಣಿಕರಿಗೆ ಆಹಾರದ ಅಗತ್ಯವನ್ನು ಮನಗಂಡಿರುವ ಐಆರ್ ಸಿಟಿಸಿ, ಎಲ್ಲಾ ರೈಲುಗಳಲ್ಲಿ ಬೇಯಿಸಿದ ಆಹಾರ ಸೇವೆ ಪುನರ್ ಆರಂಭಿಸಲು ಸಿದ್ಧತೆ ನಡೆಸಿದೆ. ರೈಲ್ವೆ ಮಂಡಳಿ ಮಾರ್ಗಸೂಚಿಯಂತೆ ಬೇಯಿಸಿದ ಆಹಾರ ಸೇವೆಯನ್ನು ಪುನರ್ ಆರಂಭಿಸಲಾಗುತ್ತಿದೆ. 428 ರೈಲುಗಳಲ್ಲಿ ಈ ಸೇವೆ ಈಗಾಗಲೇ ಪುನರ್ ಆರಂಭಗೊಂಡಿದೆ. 

ಒಟ್ಟಾರೇ ರೈಲುಗಳ ಪೈಕಿ ಶೇಕಡಾ 30 ರಷ್ಟು ರೈಲುಗಳಲ್ಲಿ ಡಿಸೆಂಬರ್ 2021 ರಿಂದ ಬೇಯಿಸಿದ ಆಹಾರ ಪೂರೈಕೆ ಸೇವೆ ಪುನರ್ ಆರಂಭವಾಗಿತ್ತು.  ಜನವರಿ 2022 ರೊಳಗೆ ಇದು ಶೇಕಡಾ 80 ರಷ್ಟು ರೈಲುಗಳಿಗೆ ತಲುಪಿದ್ದು, ಫೆಬ್ರವರಿ 14 ರೊಳಗೆ ಉಳಿದಿರುವ ಶೇಕಡಾ 20 ರೈಲುಗಳಲ್ಲಿ ಬೇಯಿಸಿದ ಆಹಾರ ಪೂರೈಕೆ ಸೇವೆಯನ್ನು ಪುನರ್ ಆರಂಭಿಸಲಾಗುವುದು ಎಂದು ರೈಲ್ವೆ ಮಂಡಳಿ ಅಧಿಕೃತವಾಗಿ ತಿಳಿಸಿದೆ. 

ರಾಜಧಾನಿ, ಶತಾಬ್ದಿ, ದುರೊಂಟೊ ರೈಲುಗಳಲ್ಲಿ ಡಿಸೆಂಬರ್ 2021 ರಿಂದ ಬೇಯಿಸಿದ ಆಹಾರ ಸೇವೆಯನ್ನು ಪುನರ್ ಆರಂಭವಾಗಿದ್ದು, ತಿನ್ನಲು ಸಿದ್ಧ ಆಹಾರ ಪದಾರ್ಥಗಳು  ಸೇವೆ ಕೂಡಾ ಮುಂದುವರೆಯಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಮಾರ್ಚ್ 23, 2020 ರಿಂದ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮವಾಗಿ ಕ್ಯಾಟರಿಂಗ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.ದೇಶದಲ್ಲಿ ಕೋವಿಡ್ ಪಾಸಿಟಿವಿಟಿ ದರ ಕುಸಿತದೊಂದಿಗೆ ಈಗಸ್ಟ್ 5, 2020 ರಿಂದ ಸೇವಿಸಲು ಸಿದ್ಧವಾದ ಆಹಾರ ಸೇವೆ ಪುನರ್ ಆರಂಭಗೊಂಡಿತ್ತು. 



Read more

[wpas_products keywords=”deal of the day”]