Karnataka news paper

ಸಹೋದರತ್ವದ ಸಂಕೇತ: ಕಾಶ್ಮೀರದಲ್ಲಿ ಹಿಂದೂ ದೇವಾಲಯಗಳ ರಕ್ಷಿಸುತ್ತಿರುವ ಮುಸ್ಲಿಂ ವ್ಯಕ್ತಿ!


ANI

ಶ್ರೀನಗರ: ಧರ್ಮದ ಭೇದ ಭಾವವಿಲ್ಲದ ಈ ಮುಸ್ಲಿಂ ವ್ಯಕ್ತಿ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಹಿಂದೂ ದೇವಾಲಯಗಳ ರಕ್ಷಣೆ ಮಾಡುತ್ತಿದ್ದಾರೆ. 

ವಾಕ್ ಮತ್ತು ಶ್ರವಣ ದೋಷವನ್ನು ಹೊಂದಿರುವ ನಿಸಾರ್ ಅಹ್ಮದ್ ಅಲೈ ಅವರು, ತಮ್ಮ ತಂದೆಯ ಜವಾಬ್ದಾರಿಯನ್ನು ಹೊತ್ತುಕೊಂಡು ದೇವಾಲಯಗಳನ್ನು ನೋಡಿಕೊಳ್ಳುತ್ತಿದ್ದಾರೆ. 

ನಿಸಾರ್ ಅವರು, ಶ್ರೀನಗರದಲ್ಲಿರುವ ಹಿಂದೂ ದೇವಾಲಯಗಳ ಸಂಪೂರ್ಣ ಕಾರ್ಯಗಳನ್ನು ಕಳೆದ ಆರು ವರ್ಷಗಳಿಂದ ನೋಡಿಕೊಳ್ಳುತ್ತಿದ್ದಾರೆ. ದೇವಾಲಯವನ್ನು ಶುಚಿಗೊಳಿಸುವುದು ಮಾತ್ರವಲ್ಲದೆ, ದೇಗುಲ ರಕ್ಷಣೆಯ ಹೊಣೆಯನ್ನೂ ಕೂಡ ಅವರೇ ಹೊತ್ತಿದ್ದಾರೆ. ಇವರ ಈ ಕಾರ್ಯ ದೇಶದಲ್ಲಿ ಸೌಹಾರ್ದತೆ ಕಾಪಾಡಲು ಉತ್ತಮ ಉದಾಹರಣೆಯಾಗಿದೆ.

ಹಲವು ವರ್ಷಗಳಿಂದಲೂ ನಿಸಾರ್ ಅಹ್ಮದ್ ಅಲೈ ಅವರ ತಂದೆ ದೇವಾಲಯಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಅಹ್ಮದ್ ಅಲೈ ನೋಡಿಕೊಳ್ಳುತ್ತಿದ್ದಾರೆ. ದೇವಾಲಯದ ಜವಾಬ್ದಾರಿ ಕೂಡ ಅವರದ್ದೇ ಆಗಿದೆ. ಇದು ಕಾಶ್ಮೀರದ ಸಹೋದರತ್ವದ ಸಂಕೇತವಾಗಿದೆ ಮತ್ತು ಪ್ರತಿಯೊಬ್ಬ ನಾಗರಿಕನ ನೈತಿಕ ಹೊಣೆಗಾರಿಕೆಯಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.





Read more

[wpas_products keywords=”deal of the day”]