Karnataka news paper

IPL 2022: ಮೆಗಾ ಹರಾಜಿನ ಬಳಿಕ ಆರ್‌ಸಿಬಿ ಸಂಪೂರ್ಣ ತಂಡ ಇಂತಿದೆ..


ಬೆಂಗಳೂರು: ಸತತ ಎರಡು ದಿನಗಳ ಕಾಲ ರಾಜಧಾನಿಯಲ್ಲಿ ನಡೆದಿದ್ದ 2022ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಆಟಗಾರರ ಮೆಗಾ ಹರಾಜು ಭಾನುವಾರ ಅಂತ್ಯವಾಗಿದ್ದು, ಎಲ್ಲಾ ತಂಡಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಖರೀದಿಸಿವೆ.

ಅದರಂತೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಕೂಡ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಅತ್ಯುತ್ತಮ ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಿದೆ. ಮೊದಲನೇ ದಿನವಾದ ಶನಿವಾರ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಬಿಡ್‌ ವಾರ್‌ ನಡೆಸಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು 7 ಕೋಟಿ ರೂ. ಗಳಿಗೆ ಸ್ಟಾರ್‌ ಬ್ಯಾಟ್ಸ್‌ಮನ್ ಫಾಫ್‌ ಡು ಪ್ಲೆಸಿಸ್‌ ಅವರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿತ್ತು.

2021ರ ಐಪಿಎಲ್‌ ಟೂರ್ನಿ ಮುಗಿದ ಬಳಿಕ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗೆ ಇಳಿದಿದ್ದರು. ಈ ಹಿನ್ನೆಲೆಯಲ್ಲಿ ನೂತನ ನಾಯಕನ ಹುಡುಕಾಟದಲ್ಲಿರುವ ಬೆಂಗಳೂರು ಫ್ರಾಂಚೈಸಿಯು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್‌ ಡು ಪ್ಲೆಸಿಸ್‌ಗೆ ನಾಯಕತ್ವ ನೀಡುವ ಇಂಗಿತವನ್ನು ಹೊಂದಿದೆ.

ಆರ್‌ಸಿಬಿ ನಾಯಕತ್ವ ಯಾರಿಗೆ ನೀಡಬೇಕೆಂಬ ಬಗ್ಗೆ ಸುಳಿವು ನೀಡಿದ ಹೇಸನ್‌!

ಫಾಫ್‌ ಡು ಪ್ಲೆಸಿಸ್‌ ಅವರನ್ನು ತಮ್ಮ ತಕ್ಕೆಗೆ ಹಾಕಿಕೊಂಡ ಬಳಿಕ ಆರ್‌ಸಿಬಿ ಆಸ್ಟ್ರೇಲಿಯಾ ವೇಗಿ ಜಾಶ್‌ ಹೇಝಲ್‌ವುಡ್‌ ಅವರನ್ನು 7.75ಕೊಟಿ ರೂ. ಗಳಿಗೆ ಖರೀದಿಸಿತ್ತು. ನಂತರ, 2021ರ ಆವೃತ್ತಿಯ ಪರ್ಪಲ್‌ ಕ್ಯಾಪ್ ವಿನ್ನರ್‌ ಹರ್ಷಲ್ ಪಟೇಲ್ ಹಾಗೂ ಶ್ರೀಲಂಕಾ ಸ್ಪಿನ್‌ ಆಲ್‌ರೌಂಡರ್‌ ವಾನಿಂದು ಹಸರಂಗ ಅವರನ್ನು ತಲಾ 10.75 ಕೋಟಿ ರೂ. ಗಳಿಗೆ ಆರ್‌ಸಿಬಿ ತನ್ನ ಕ್ಯಾಂಪ್‌ನಲ್ಲಿ ಉಳಿಸಿಕೊಂಡಿದೆ.

ಬರೋಬ್ಬರಿ 5.5 ಕೋಟಿ ರೂ. ಗಳಿಗೆ ದಿನೇಶ್‌ ಕಾರ್ತಿಕ್ ಅವರನ್ನು ಖರೀದಿಸಿದ ಆರ್‌ಸಿಬಿ ವಿಕೆಟ್‌ ಕೀಪಿಂಗ್‌ ಸ್ಥಾನವನ್ನು ತುಂಬಿದೆ. ಇನ್ನು ಎರಡನೇ ವಿಕೆಟ್‌ ಕೀಪಿಂಗ್‌ ಸ್ಥಾನಕ್ಕೆ ನ್ಯೂಜಿಲೆಂಡ್‌ನ ಫಿನ್‌ ಅಲ್ಲೆನ್‌ ಅವರನ್ನು ಎರಡನೇ ದಿನ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಯುಜ್ವೇಂದ್ರ ಚಹಲ್‌ ಅವರ ಸ್ಥಾನ ತುಂಬಿಸುವ ಸಲುವಾಗಿ ಕರ್ಣ್‌ ಶರ್ಮಾ ಅವರನ್ನು ಬೆಂಗಳೂರು ಫ್ರಾಂಚೈಸಿ ಖರೀದಿಸಿದೆ.

ಅಂದು ಕೆ.ಎಲ್‌, ಇಂದು ಪಡಿಕ್ಕಲ್‌; ಸ್ಟಾರ್‌ಗಳನ್ನು ಕಳೆದುಕೊಂಡ ಆರ್‌ಸಿಬಿ!

ಜೇಸನ್‌ ಬೆಹ್ರನ್‌ಡ್ರಾಫ್‌, ಋದರ್‌ಫೋರ್ಡ್, ಅಂಡರ್‌ 19 ಭಾರತ ತಂಡದ ಆಟಗಾರ ಹಾಗೂ ಸ್ಥಳೀಯ ಹುಡುಗ ಅನೀಶ್ವರ್‌ ಗೌತಮ್ ಹಾಗೂ ಡೇವಿಡ್‌ ವಿಲ್ಲೀ ಅವರನ್ನು ಭಾನುವಾರ ಆರ್‌ಸಿಬಿ ತನ್ನತ್ತ ಸೆಳೆಯಿತು. ಮೆಗಾ ಹರಾಜಿಗೂ ಮುನ್ನ ಬೆಂಗಳೂರು ಫ್ರಾಂಚೈಸಿ ವಿರಾಟ್‌ ಕೊಹ್ಲಿ(15 ಕೋಟಿ), ಗ್ಲೆನ್‌ ಮ್ಯಾಕ್ಸ್‌ವೆಲ್‌(11 ಕೋಟಿ) ಹಾಗೂ ಮೊಹಮ್ಮದ್‌ ಸಿರಾಜ್‌(7 ಕೋಟಿ ರೂ.) ಅವರನ್ನು ಉಳಿಸಿಕೊಂಡಿತ್ತು. ಈ ಮೂವರು ಆಟಗಾರರಿಂದ ಆರ್‌ಸಿಬಿ ಪರ್ಸ್‌ನಲ್ಲಿ 33 ಕೋಟಿ ರೂ. ಗಳು ಕಡಿಮೆಯಾಗಿತ್ತು. ಒಟ್ಟು 57 ಕೋಟಿ ರೂ. ಗಳೊಂದಿಗೆ ಆರ್‌ಸಿಬಿ ಮೆಗಾ ಹರಾಜಿಗೆ ಬಂದಿತ್ತು.


ಐಪಿಎಲ್‌ 2022ರ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ಅಂತಿಮ ಪಟ್ಟಿ

  1. ಫಾಫ್ ಡು ಪ್ಲೆಸಿಸ್ (7 ಕೋಟಿ ರೂ.)
  2. ಹರ್ಷಲ್ ಪಟೇಲ್ (10.75 ಕೋಟಿ ರೂ.)
  3. ವನಿಂದು ಹಸರಂಗ (10.75 ಕೋಟಿ ರೂ.)
  4. ದಿನೇಶ್ ಕಾರ್ತಿಕ್ (5.50 ಕೋಟಿ ರೂ.)
  5. ಜಾಶ್ ಹ್ಯಾಜಲ್‌ವುಡ್ (7.75 ಕೋಟಿ ರೂ.)
  6. ಶಹಬಾಜ್ ಅಹಮದ್ (2.4 ಕೋಟಿ ರೂ.)
  7. ಅನುಜ್ ರಾವತ್ (3.4 ಕೋಟಿ ರೂ.)
  8. ಆಕಾಶ್ ದೀಪ್ (20 ಲಕ್ಷ ರೂ.)
  9. ಮಹಿಪಾಲ್ ಲೊಮ್ರೋರ್ (95 ಲಕ್ಷ ರೂ.)
  10. ಫಿನ್ ಅಲೆನ್ (80 ಲಕ್ಷ ರೂ.)
  11. ಶೆರ್ಫೇನ್ ಋದರ್‌ಫೋರ್ಡ್ (1 ಕೋಟಿ ರೂ.)
  12. ಜೇಸನ್ ಬೆಹ್ರಾನ್‌ಡ್ರಾಫ್‌ (75 ಲಕ್ಷ ರೂ.)
  13. ಸುಯಶ್ ಪ್ರಭುದೇಸಾಯಿ (30 ಲಕ್ಷ ರೂ.)
  14. ಚಾಮಾ ಮಿಲಿಂದ್ (25 ಲಕ್ಷ ರೂ.)
  15. ಅನೀಶ್ವರ್ ಗೌತಮ್ (20 ಲಕ್ಷ ರೂ.)
  16. ಕರ್ಣ್ ಶರ್ಮಾ (50 ಲಕ್ಷ ರೂ.)
  17. ಸಿದ್ಧಾರ್ಥ್ ಕೌಲ್ (75 ಲಕ್ಷ ರೂ.)
  18. ಲವ್ನಿತ್ ಸಿಸೋಡಿಯಾ (20 ಲಕ್ಷ ರೂ.)
  19. ಡೇವಿಡ್ ವಿಲ್ಲೀ (2 ಕೋಟಿ ರೂ.)



Read more

[wpas_products keywords=”deal of the day gym”]