ಮೆಗಾ ಹರಾಜಿನಲ್ಲಿ ಮೊದಲನೇ ದಿನ ಫಾಫ್ ಡು ಪ್ಲೆಸಿಸ್ ಅವರಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ ಅಂತಿಮವಾಗಿ ಆರಂಭಿಕ ಬ್ಯಾಟ್ಸ್‌ಮನ್ ಅನ್ನು ಬೆಂಗಳೂರು ಫ್ರಾಂಚೈಸಿ 7 ಕೋಟಿ ರೂ. ಗಳಿಗೆ ಖರೀದಿಸಿತ್ತು.
ಅಂದಹಾಗೆ ಆರಂಭಿಕ ಬ್ಯಾಟ್ಸ್‌ಮನ್ ಫಾಫ್ ಡುಪ್ಲೆಸಿಸ್ ಅವರು 2011 ರಿಂದ 2015ರ ವರೆಗೂ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸಿದ್ದರು. ನಂತರ 2018 ರಿಂದ 2021ರವರೆಗೂ ಮತ್ತೊಮ್ಮೆ ಚೆನ್ನೈ ಫ್ರಾಂಚೈಸಿ ಪರ ಆಡಿದ್ದರು. ಅದರಂತೆ ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಸ್ ಆಗಿತ್ತು. ಫೈನಲ್ ಹಣಾಹಣಿಯಲ್ಲಿ ಡುಪ್ಲೆಸಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
IPL 2022 Auction Live updates: 2ನೇ ದಿನ ಮೆಗಾ ಹರಾಜು ನೇರ ಪ್ರಸಾರದ ವಿವರ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸುತ್ತಿದ್ದಂತೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫಾಫ್ ಡು ಪ್ಲೆಸಿಸ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್, ಆಟಗಾರರಿಗೆ, ಸಹಾಯಕ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು. ವಿಶೇಷವಾಗಿ ಚೆನ್ನೈ ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನಿಸಿದರು.
‘ಸರಿ ಸುಮಾರು ಒಂದು ದಶಕದ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದರಿಂದ ತಕ್ಷಣ ವಿಡಿಯೋ ಸಂದೇಶದ ಮೂಲಕ ಸಿಎಸ್‌ಕೆ, ಮ್ಯಾನೇಜ್‌ಮೆಂಟ್, ಆಟಗಾರರಿಗೆ, ಸಹಾಯಕ ಸಿಬ್ಬಂದಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕೆನಿಸಿತು,” ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಿಳಿಸಿದ್ದಾರೆ.
ಸುದ್ದಿ ಆರ್‌ಸಿಬಿ ನಾಯಕತ್ವ ಯಾರಿಗೆ ನೀಡಬೇಕೆಂಬ ಬಗ್ಗೆ ಸುಳಿವು ನೀಡಿದ ಹೇಸನ್!
“ನೀವು ಸಾಕಷ್ಟು ವಿಶೇಷ ನೆನಪುಗಳನ್ನು ಕೊಟ್ಟಿದ್ದೀರಿ. ಹಾಗಾಗಿ ನಿಮ್ಮೆಲ್ಲರಿಗೂ ಧನ್ಯವಾದ ಹೇಳುವುದು ತುಂಬಾನೇ ಮುಖ್ಯ. ಇಲ್ಲಿ ನನ್ನ ಸಮಯವನ್ನು ತುಂಬಾ ಆನಂದಿಸಿದ್ದೇನೆ. ನಿಜವಾಗಿಯೂ ಪ್ರತಿಯೊಬ್ಬರನ್ನೂ ಕಳೆದುಕೊಳ್ಳುತ್ತಿದ್ದೇನೆ. ಇದೀಗ ಒಂದು ಬಾಗಿಲು ಮುಚ್ಚಿದೆ, ಮತ್ತೊಂದು ಬಾಗಿಲು ತೆರೆದಿದೆ. ಆ ಮೂಲಕ ಅದ್ಭುತ ಅವಕಾಶ ನನ್ನ ಮುಂದೆ ಬಂದಿದೆ. ನನ್ನ ಭವಿಷ್ಯದ ಬಗ್ಗೆ ನನಗೆ ತುಂಬಾ ಉತ್ಸುಕತೆ ಇದೆ. ನನ್ನಿಂದ, ನನ್ನ ಕುಟುಂಬದಿಂದ ನಿಮಗೆ ಧನ್ಯವಾದ,” ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಫಾಫ್ ಡು ಪ್ಲೆಸಿಸ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆರೆಂಜ್ ಕ್ಯಾಪ್ ವಿನ್ನರ್ ಋತುರಾಜ್ ಗಾಯಕ್ವಾಡ್ ಬಳಿಕ 2021ರ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಭಾಜನರಾಗಿದ್ದರು.
IPL 2022 Auction: ಆಲ್‌ರೌಂಡರ್ ಶಿವಂ ದುಬೆಗೆ ಡಬಲ್ ಧಮಾಕ!
ಆರ್‌ಸಿಬಿ ನಾಯಕನ ರೇಸ್‌ನಲ್ಲಿ ಡುಪ್ಲೆಸಿಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ ಸ್ಥಾನ ತುಂಬಬಲ್ಲ ಆಟಗಾರರ ರೇಸ್‌ನಲ್ಲಿ ಫಾಫ್ ಡು ಪ್ಲೆಸಿಸ್ ಮುಂಚೂಣಿಯಲ್ಲಿದ್ದಾರೆ. ಈ ಬಗ್ಗೆ ಮೊದಲನೇ ದಿನದ ಹರಾಜು ಮುಗಿದ ಬಳಿಕ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೇಸನ್ ತಿಳಿಸಿದ್ದರು. ಮೆಗಾ ಹರಾಜು ಮುಗಿದ ಬಳಿಕ ನಾಯಕನ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆಂದು ಅವರು ಹೇಳಿದ್ದರು.
Read more
[wpas_products keywords=”deal of the day gym”]