ಮುಂಬೈ: ಹಿಂದಿಯ ರಿಯಾಲಿಟಿ ಶೋ ‘ಬಿಗ್ ಬಾಸ್-15’ರ ಚಿತ್ರೀಕರಣ ನಡೆದಿದ್ದ ಸೆಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮುಂಬೈನ ಫಿಲಂ ಸಿಟಿಯಲ್ಲಿರುವ ಸೆಟ್‌ನಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.
ಮುಂಬೈ ಕಾರ್ಪೊರೇಷನ್ ಅಧಿಕಾರಿಗಳ ಪ್ರಕಾರ, ಬೆಂಕಿ ಅವಘಡದಲ್ಲಿ ಯಾರೊಬ್ಬರೂ ಗಾಯಗೊಂಡಿರುವುದು ವರದಿಯಾಗಿಲ್ಲ. ಬೆಂಕಿ ಕಾಣಿಸಿಕೊಳ್ಳಲು ಕಾರಣ ಈವರೆಗೂ ಸ್ಪಷ್ಟವಾಗಿಲ್ಲ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ.
ನಟ ಸಲ್ಮಾನ್ ಖಾನ್ ನಿರೂಪಣೆ ಮಾಡಿದ ಬಿಗ್ ಬಾಸ್ 15ನೇ ಆವೃತ್ತಿಯ ಕೊನೆಯ ಎಪಿಸೋಡ್ ಜನವರಿ 30ರಂದು ಪ್ರಸಾರವಾಗಿತ್ತು. ಬಿಗ್ ಬಾಸ್ 15ರ ವಿಜೇತೆ ನಟಿ ತೇಜಸ್ವಿ ಪ್ರಕಾಶ್ ಅವರಿಗೆ ಟ್ರೋಫಿ ಮತ್ತು ₹40 ಲಕ್ಷ ನಗದು ಬಹುಮಾನ ನೀಡಲಾಗಿದೆ.

ಪ್ರತೀಕ್ ಸೆಹಜ್‌ಪಾಲ್ ಎರಡನೇ ಸ್ಥಾನ ಹಾಗೂ ಕರಣ್ ಕುಂದ್ರಾ ಮೂರನೇ ಸ್ಥಾನ ಪಡೆದಿದ್ದಾರೆ. ತೇಜಸ್ವಿ ಪ್ರಕಾಶ್ ಅವರನ್ನು ಏಕ್ತಾ ಕಪೂರ್ ಅವರ ನಾಗಿನ್ ಆರನೇ ಆವೃತ್ತಿಗೆ ಪ್ರಮುಖ ಪಾತ್ರಧಾರಿಯಾಗಿ ಘೋಷಿಸಲಾಗಿದೆ.
Read More…Source link
[wpas_products keywords=”deal of the day party wear for men wedding shirt”]