ಭಾನುವಾರ ಕೂಡಾ 5,395 ಕೋವಿಡ್ ಸೋಂಕಿತರು ರಾಜ್ಯಾದ್ಯಂತ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 38,51,298ಕ್ಕೆ ಏರಿಕೆಯಾಗಿದೆ.
ಸದ್ಯ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 35,697ಕ್ಕೆ ಇಳಿಕೆ ಕಂಡಿದೆ. ಆದರೆ, ಕಳೆದ 24 ಗಂಟೆಗಳಲ್ಲಿ ಚಿಕಿತ್ಸೆ ಫಲಿಸದೇ 27 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 39,640ಕ್ಕೆ ಏರಿಕೆ ಕಂಡಿದೆ.
ಕರ್ನಾಟಕ ರಾಜ್ಯಾದ್ಯಂತ ಕೋವಿಡ್ ಪಾಸಿಟಿವಿಟಿ ದರ ಶೇ. 2.31ಕ್ಕೆ ಇಳಿಕೆ ಕಂಡಿದೆ. ಆದಾಗ್ಯೂ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ ಲಕ್ಷಣ ಇದ್ದ 1,02,279 ಮಂದಿಯನ್ನು ಕೋವಿಡ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕೋವಿಡ್ ಅಂಕಿ ಅಂಶ: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಭಾನುವಾರ 1,059 ಕೊರೊನಾ ಹೊಸ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಪಾಸಿಟಿವಿಟಿ ದರ ಶೇ. 2.09ಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಸದ್ಯ 14 ಸಾವಿರಕ್ಕೂ ಹೆಚ್ಚು ಕೊರೊನಾ ಸಕ್ರಿಯ ಪ್ರಕರಣಗಳು ಇದ್ದು, ಕಳೆದ 24 ಗಂಟೆಗಳಲ್ಲಿ 7 ಕೋವಿಡ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಜಿಲ್ಲಾವಾರು ಲೆಕ್ಕಾಚಾರ: ಬಾಗಲಕೋಟೆ 15, ಬಳ್ಳಾರಿ 112, ಬೆಳಗಾವಿ 96, ಬೆಂಗಳೂರು ಗ್ರಾಮಾಂತರ 13, ಬೀದರ್ 20, ಚಾಮರಾಜ ನಗರ 27, ಚಿಕ್ಕಬಳ್ಳಾಪುರ 27, ಚಿಕ್ಕಮಗಳೂರು 35, ಚಿತ್ರದುರ್ಗ 53, ದಕ್ಷಿಣ ಕನ್ನಡ 92, ದಾವಣಗೆರೆ 28, ಧಾರವಾಡ 72, ಗದಗ 30, ಹಾಸನ 59, ಹಾವೇರಿ 07, ಕಲಬುರಗಿ 34, ಕೊಡಗು 69, ಕೋಲಾರ 18, ಕೊಪ್ಪಳ 06, ಮಂಡ್ಯ 51, ಮೈಸೂರು 148, ರಾಯಚೂರು 17, ರಾಮನಗರ 08, ಶಿವಮೊಗ್ಗ 72, ತುಮಕೂರು 74, ಉಡುಪಿ 54, ಉತ್ತರ ಕನ್ನಡ 29, ವಿಜಯಪುರ 41, ಹಾಗೂ ಯಾದಗಿರಿಯಲ್ಲಿ ಭಾನುವಾರ 06 ಕೊರೊನಾ ವೈರಸ್ ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.
Read more
[wpas_products keywords=”deal of the day sale today offer all”]