Karnataka news paper

ಸಾಮೂಹಿಕ ಅತ್ಯಾಚಾರ ಎಸಗಿ, ಮೂರನೇ ಮಹಡಿಯಿಂದ ಎಸೆದ ದುಷ್ಕರ್ಮಿಗಳು


ಚುರು: ಕೆಲಸ ನೀಡುವ ಭರವಸೆ ನೀಡಿದ್ದ ನಾಲ್ವರು ವ್ಯಕ್ತಿಗಳು 25 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ದಾರುಣ ಘಟನೆ ರಾಜಸ್ಥಾನದ ಚುರು ನಗರದಲ್ಲಿ ನಡೆದಿದೆ. ಅತ್ಯಾಚಾರ ನಡೆಸಿದ ಬಳಿಕ ದುಷ್ಕರ್ಮಿಗಳು ಆಕೆಯ ಕೈಕಾಲುಗಳನ್ನು ಕಟ್ಟಿ ಕಟ್ಟಡವೊಂದರ ಮೂರನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಾರೆ. ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಯುವತಿ ಅಸ್ಸಾಂ ಮೂಲದವರಾಗಿದ್ದು, ಪಶ್ಚಿಮ ದಿಲ್ಲಿಯ ರೋಹಿಣಿ ಭಾಗದಲ್ಲಿ ಕೆಲವು ಸಮಯದಿಂದ ನೆಲೆಸಿದ್ದರು. ಈ ಘಟನೆ ಚುರು ನಗರದ ರೈಲ್ವೆ ನಿಲ್ದಾಣದ ಸಮೀಪ ಶುಕ್ರವಾರ ನಡೆದಿದೆ. ನಾಲ್ವರು ವ್ಯಕ್ತಿಗಳು ಆಕೆಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಆಕೆ ದಿಲ್ಲಿಯಿಂದ ರಾಜಸ್ಥಾನಕ್ಕೆ ತೆರಳಿದ್ದರು. ಆರೋಪಿಗಳು ಸಾಮಾಜಿಕ ಮಾಧ್ಯಮ ಹಾಗೂ ಫೋನ್ ಮೂಲಕ ಆಕೆಯ ಸಂಪರ್ಕ ಸಾಧಿಸಿದ್ದರು.
ಕ್ರೂರ ಕೃತ್ಯ: ಎಂಟು ವರ್ಷದ ಬಾಲಕಿ ಮೇಲೆ 11 ವರ್ಷ ಬಾಲಕರಿಂದ ಸಾಮೂಹಿಕ ಅತ್ಯಾಚಾರ

ನಾಲ್ವರು ಸೇರಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳೆಲ್ಲರೂ ಅವಿವಾಹಿತರಾಗಿದ್ದು, ವಿದ್ಯಾರ್ಥಿಗಳಾಗಿದ್ದಾರೆ. ಅವರೆಲ್ಲರೂ ಚುರು ಜಿಲ್ಲೆಯ ನಿವಾಸಿಗಳು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮಮತಾ ಸಾರಸ್ವತ್ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಆಕೆಯ ಗೆಳೆತನ ಸಂಪಾದಿಸಿದ್ದ ನಾಲ್ವರು ಆರೋಪಿಗಳು, ಬಳಿಕ ಫೋನ್ ಸಂಪರ್ಕ ಪಡೆದುಕೊಂಡಿದ್ದರು. ಚುರುಗೆ ಬಂದರೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ಆಕೆ ಶುಕ್ರವಾರ ಮಧ್ಯಾಹ್ನ ಚುರುಗೆ ತಲುಪಿದ್ದರು. ಬಸ್‌ ಸ್ಟ್ಯಾಂಡ್‌ನಿಂದ ಕೊಠಡಿಯೊಂದಕ್ಕೆ ಆಕೆಯನ್ನು ಕರೆದೊಯ್ದರು. ಅಲ್ಲಿ ಎಲ್ಲರೂ ಮದ್ಯ ಸೇವನೆ ಮಾಡಿದ್ದರು. ಆಕೆ ಕೆಲಸದ ಬಗ್ಗೆ ಪ್ರಶ್ನಿಸಿದಾಗ ಅವರು, ಶನಿವಾರ ಬೆಳಿಗ್ಗೆ ಮೀಟಿಂಗ್ ಆಯೋಜನೆ ಮಾಡುವುದಾಗಿ ಭರವಸೆ ನೀಡಿದ್ದರು.

ನಂತರ ಆಕೆ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಅತ್ಯಾಚಾರ ನಡೆಸಿದ್ದರು. ಕೈಗಳನ್ನು ಹಿಂದೆ ತಿರುಗಿಸಿ ಕಟ್ಟಿ, ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ತಳ್ಳಿದ್ದರು. ಅದೃಷ್ಟವಶಾತ್ ಆಕೆ ಕಂಬವೊಂದರಲ್ಲಿ ಸಿಲುಕೊಂಡಿದ್ದರು. ಸುಮಾರು ಒಂದು ಗಂಟೆ ಅಲ್ಲಿಯೇ ನೇತಾಡಿದ್ದರು. ಅದನ್ನು ಕಂಡ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಕೆಯನ್ನು ರಕ್ಷಿಸಿದರು. ಯುವತಿಯ ಕೈ ಮೂಳೆ ಮುರಿದಿದ್ದು, ತರುಚಿದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.



Read more

[wpas_products keywords=”deal of the day sale today offer all”]