Classroom
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್ (ಟಿಡಿ) ಅಥವಾ ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್ ಅಕೌಂಟ್ (ಟಿಡಿ) ಒಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಇದನ್ನು ಅಂಚೆ ಇಲಾಖೆಯಿಂದ ನಿರ್ವಹಿಸಲಾಗುತ್ತದೆ. ಭಾರತ ಸರ್ಕಾರದ ಸಚಿವಾಲಯವು ಮೇಲ್ವಿಚಾರಣೆ ಮಾಡುತ್ತದೆ.
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್ (ಟಿಡಿ) ಹಣಕಾಸಿನ ಸಂಪತ್ತನ್ನು ರಚಿಸಲು ಯೋಜಿಸುವ ಸಾಲ ಹೂಡಿಕೆದಾರರಿಗೆ ಸೂಕ್ತವಾಗಿದೆ. ನಿಮ್ಮ ಸ್ಥಳೀಯ ಅಂಚೆ ಕಚೇರಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ನೀವು ಈ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್ (ಟಿಡಿ) ಖಾತೆಯನ್ನು ತೆರೆಯಬಹುದಾಗಿದೆ.
ಚಿನ್ನದ ಬೆಲೆ ಏರಿಕೆ: ದೇಶದ ಪ್ರಮುಖ ನಗರಗಳ ಫೆ.13ರ ದರ ಪರಿಶೀಲಿಸಿ
ನಿಮ್ಮ ಸ್ಥಳೀಯ ಅಂಚೆ ಕಚೇರಿಯಲ್ಲಿ ಅಥವಾ ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ ಈ ಸಣ್ಣ ಉಳಿತಾಯ ಯೋಜನೆಯನ್ನು ತೆರೆಯಬಹುದಾಗಿದೆ. ಟೈಮ್ ಡೆಪಾಸಿಟ್ ಅಕೌಂಟ್ ಅನ್ನು ತೆರೆಯಲು ಗ್ರಾಹಕರು ಅದೇ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ನಿಮ್ಮ ಹತ್ತಿರದ ಶಾಖೆಗೆ ನೀವು ಭೇಟಿ ನೀಡುವ ಮೂಲಕ ಖಾತೆಯನ್ನು ತೆರೆಯಲು ಸಾಧ್ಯವಾಗದಿದ್ದರೆ ನೀವು ಆನ್‌ಲೈನ್ ಮೂಲಕವೂ ಖಾತೆಯನ್ನು ತೆರೆಯಬಹುದು. ನೀವು ಆನ್‌ಲೈನ್ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆಯನ್ನು ಹೇಗೆ ತೆರೆಯುವುದು ಎಂದು ತಿಳಿಯಲು ಮುಂದೆ ಓದಿ..

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್‌ನ ಪ್ರಮುಖ ಮಾಹಿತಿ
* ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆಯನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಕನಿಷ್ಠ ಮೊತ್ತ ರೂ 1000 ಅನ್ನು ಠೇವಣಿ ಮಾಡುವ ಮೂಲಕ ತೆರೆಯಬಹುದು.
* ವಯಸ್ಕರು, ಮೂರು ಜನರ ಜಾಯಿಂಟ್ ಖಾತೆ ಅಥವಾ ಅಪ್ರಾಪ್ತರ ಪರವಾಗಿ ಖಾತೆಯನ್ನು ತೆರೆಯಬಹುದು
* ಖಾತೆಯನ್ನು 1 ವರ್ಷ, 2 ವರ್ಷಗಳು, 3 ವರ್ಷಗಳು ಅಥವಾ 5 ವರ್ಷಗಳ ಅವಧಿಗೆ ತೆರೆಯಬಹುದು
* ಒಂದರಿಂದ ಮೂರು ವರ್ಷಗಳಲ್ಲಿ ಮೆಚ್ಯೂರ್ ಆಗುವ ಪೋಸ್ಟ್ ಆಫೀಸ್ ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿ ದರವು ಶೇಕಡಾ 5.5 ಆಗಿದೆ. ಇನ್ನು ಐದು ವರ್ಷಗಳಲ್ಲಿ ಮೆಚ್ಯೂರ್ ಆಗುವ ಪೋಸ್ಟ್ ಆಫೀಸ್ ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿ ದರವು 6.7 ಶೇಕಡ ಆಗಿದೆ. ಈ ಬಡ್ಡಿದರಗಳನ್ನು ವಾರ್ಷಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ ಆದರೆ ತ್ರೈಮಾಸಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
* ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ, ವಾರ್ಷಿಕ ಬಡ್ಡಿಯನ್ನು ಅದೇ ಅಂಚೆ ಕಛೇರಿಯಲ್ಲಿ ತೆರೆಯಲಾದ ಖಾತೆದಾರರ ಉಳಿತಾಯ ಖಾತೆಗೆ ಜಮಾ ಮಾಡಬಹುದು.
* 5 ವರ್ಷಗಳ ಟಿಡಿಯಲ್ಲಿನ ಹೂಡಿಕೆಯು 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ.
* ಮೆಚ್ಯೂರಿಟಿ ಬಳಿಕ ಖಾತೆದಾರರು ಅರ್ಜಿ ನಮೂನೆ ಮತ್ತು ಪಾಸ್‌ಬುಕ್ ಅನ್ನು ಪೋಸ್ಟ್ ಆಫೀಸ್‌ಗೆ ಸಲ್ಲಿಸುವ ಮೂಲಕ ಟಿಡಿ ಖಾತೆಯ ರಿನಿವಲ್ ಅಂದರೆ ವಿಸ್ತರಣೆ ಮಾಡಬಹುದು.
* ಠೇವಣಿ ಮಾಡಿದ ದಿನಾಂಕದಿಂದ ಆರು ತಿಂಗಳ ನಂತರ ಮಾತ್ರ, ಪೋಸ್ಟ್ ಆಫೀಸ್ ಸಮಯದ ಠೇವಣಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು. ಆರು ತಿಂಗಳ ನಂತರ ಆದರೆ ಒಂದು ವರ್ಷದ ಮೊದಲು ಟಿಡಿ ಖಾತೆಯನ್ನು ಮುಚ್ಚಿದರೆ, ಶೇಕಡ 4 ಉಳಿತಾಯ ಖಾತೆಯ ಬಡ್ಡಿ ದರವು ಅನ್ವಯಿಸುತ್ತದೆ.

ಆನ್‌ಲೈನ್‌ನಲ್ಲಿ ಪೋಸ್ಟ್ ಆಫೀಸ್ ಟಿಡಿ ಖಾತೆಯನ್ನು ತೆರೆಯುವುದು ಹೇಗೆ?
ನೆಟ್ ಬ್ಯಾಂಕಿಂಗ್ ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ಟಿಡಿ ಖಾತೆಯನ್ನು ರಚಿಸಲು ಅನುಮತಿ ನೀಡಲಾಗುತ್ತದೆ. ಠೇವಣಿದಾರರು ನೆಟ್ ಬ್ಯಾಂಕಿಂಗ್ ಹೊಂದಿರಬೇಕು. ಠೇವಣಿದಾರರು ಇನ್ನೂ ಪೋಸ್ಟ್ ಆಫೀಸ್ ನೆಟ್ ಬ್ಯಾಂಕಿಂಗ್‌ಗೆ ಸೈನ್ ಅಪ್ ಮಾಡದಿದ್ದರೆ, ಅವನು ಅಥವಾ ಅವಳು ನೆಟ್ ಬ್ಯಾಂಕಿಂಗ್‌ಗೆ ಸೈನ್ ಇನ್ ಮಾಡಿ ನಂತರ ಪ್ರಕ್ರಿಯೆ ಮುಂದುವರಿಸಬಹುದು.
* ebanking.indiapost.gov.in ಗೆ ಭೇಟಿ ನೀಡಿ ಮತ್ತು ನಿಮ್ಮ ಯೂಸರ್ ಐಡಿ, ಪಾಸ್‌ವರ್ಡ್ ನಮೂದಿಸಿ.
* ‘Login’ ಕ್ಲಿಕ್ ಮಾಡಿ ಮತ್ತು ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರಲಿದೆ
* OTP ಅನ್ನು ನಮೂದಿಸಿ ಮತ್ತು ‘Confirm’ ಮೇಲೆ ಕ್ಲಿಕ್ ಮಾಡಿ
* ಈಗ ನಿಮ್ಮ ನೆಟ್‌ಬ್ಯಾಂಕಿಂಗ್ ಸೈಟ್‌ಗೆ ರಿಡೈಕೆಕ್ಟ್ ಆಗಲಿದೆ
* ಡ್ಯಾಶ್‌ಬೋರ್ಡ್ ಪುಟದಲ್ಲಿ, ‘General Services’ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ‘Service Requests’ ಮೇಲೆ ಕ್ಲಿಕ್ ಮಾಡಿ
* ‘New Requests’ ಆಯ್ಕೆಯ ಅಡಿಯಲ್ಲಿ, ‘TD Account – Open a TD Account’ ಮೇಲೆ ಕ್ಲಿಕ್ ಮಾಡಿ
* ಈಗ ಠೇವಣಿ ಮೊತ್ತ, ಠೇವಣಿ ಅವಧಿ, ಖಾತೆ ತೆರೆಯುವ ದಿನಾಂಕ ಮತ್ತು ಡೆಬಿಟ್ ಖಾತೆಯಂತಹ ಅಗತ್ಯವಿರುವ ವಿವರಗಳನ್ನು ನಮೂದಿಸುವ ಮೂಲಕ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ.
* ‘Submit Online’ ಕ್ಲಿಕ್ ಮಾಡಿ ಮತ್ತು ಮಾಡಿದ ವಿನಂತಿಯನ್ನು ದೃಢೀಕರಿಸಿ.
* ‘Submit’ ಕ್ಲಿಕ್ ಮಾಡಿ ಮತ್ತು ನೀವು ರೆಫರೆನ್ಸ್ ಐಡಿಯೊಂದಿಗೆ ಆನ್‌ಲೈನ್ ರಸೀದಿಯನ್ನು ಪಡೆಯುತ್ತೀರಿ
* ನೀವು ಸೈಬರ್ ರಸೀದಿಯನ್ನು ಪಿಡಿಎಫ್ ಸ್ವರೂಪದಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ನಿಮ್ಮ ಉಳಿತಾಯ ಖಾತೆಯೊಂದಿಗೆ ಲಿಂಕ್ ಮಾಡಲಾದ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನಿಮಗೆ ಖಾತೆ ತೆರೆದ ಬಗ್ಗೆ ಮಾಹಿತಿ ಬರಲಿದೆ.
English summary
How To Open A Post Office Time Deposit (TD) Account Online?, Explained in Kannada
How To Open A Post Office Time Deposit (TD) Account Online?, Explained in Kannada.
Story first published: Sunday, February 13, 2022, 19:45 [IST]
Read more…
[wpas_products keywords=”deal of the day”]