Karnataka news paper

ಗಮನಿಸಿ: ಮುಂದಿನ ವಾರ ನಾಲ್ಕು ದಿನ ಬ್ಯಾಂಕ್‌ ರಜೆ: ಇಲ್ಲಿದೆ ಮಾಹಿತಿ


Personal Finance

|

ಯಾವುದೇ ಅಗತ್ಯ ಬ್ಯಾಂಕ್‌ ವಹಿವಾಟು ಇದ್ದರೆ ಮುಂದಿನ ವಾರಕ್ಕೂ ಮುನ್ನವೇ ಅಥವಾ ಮುಂದಿನ ವಾರದ ಆರಂಭದಲ್ಲೇ ಮುಗಿಸಿಬಿಡಿ. ಯಾಕೆಂದರೆ ಮುಂದಿನ ವಾರದಲ್ಲಿ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇದೆ. ದೇಶದಾದ್ಯಂತ ಹಲವಾರು ಪ್ರದೇಶದಲ್ಲಿ ಮುಂದಿನ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್‌ ಮುಚ್ಚಿರಲಿದೆ.

ಈ ಸಮಯದಲ್ಲಿ ಎಲ್ಲಾ ಬ್ಯಾಂಕುಗಳ ಆನ್‌ಲೈನ್‌ ವಹಿವಾಟು ಅಥವಾ ಮೊಬೈಲ್‌ ವಹಿವಾಟು ಎಂದಿನಂತೆಯೇ ನಡೆಯಲಿದೆ. ಆದರೆ ಬ್ಯಾಂಕುಗಳಿಗೆ ಹೋಗಿಯೇ ಮಾಡಬೇಕಾದ ಕಾರ್ಯಗಳು ಇದ್ದಲ್ಲಿ ಜನರು ಇಂದು ಅಥವಾ ಮುಂದಿನ ವಾರದ ಆರಂಭದಲ್ಲೇ ಮುಗಿಸಿಬಿಡಿ. ಯಾಕೆಂದರೆ ಹಲವಾರು ಬ್ಯಾಂಕುಗಳು ಮುಂದಿನ ವಾರ ಮುಚ್ಚಲಿದೆ.

ಬ್ಯಾಂಕುಗಳ ಖಾಸಗೀಕರಣದ ವಿರುದ್ಧವಾಗಿ ಬ್ಯಾಂಕುಗಳ ಸಂಘಟನೆಯು ಎರಡು ದಿನಗಳ ಮುಷ್ಕರವನ್ನು ಆಯೋಜಿಸಿದೆ. ಈ ಬ್ಯಾಂಕುಗಳ ಮುಷ್ಕರ ಹಿನ್ನೆಲೆಯಿಂದಾಗಿ ಡಿಸೆಂಬರ್‌ 16 ಹಾಗೂ ಡಿಸೆಂಬರ್‌ 17 ರಂದು ಬ್ಯಾಂಕುಗಳು ಬಂದ್‌ ಆಗಿರಲಿದೆ. ಇನ್ನು ಈ ನಾಲ್ಕು ದಿನಗಳ ಕಾಲವೂ ಬ್ಯಾಂಕ್‌ಗಳು ಬಂದ್‌ ಆಗಿರಲಾರದು ಎಂಬುವುದನ್ನು ಗ್ರಾಹಕರು ತಿಳಿದಿರಬೇಕು. ಆದರೆ ಈ ಎರಡು ದಿನಗಳನ್ನು ಹೊರತು ಪಡಿಸಿ ಬ್ಯಾಂಕ್‌ಗಳು ಹಲವಾರು ರಾಜ್ಯಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಬಂದ್‌ ಆಗಿ ಇರಲಿದೆ. ಹಾಗಾದರೆ ಬ್ಯಾಂಕ್‌ ಯಾವ ದಿನಗಳು ಬಂದ್‌ ಆಗಿರಲಿದೆ, ಕಾರಣ ಏನು ಎಂದು ತಿಳಿಯಲು ಮುಂದೆ ಓದಿ..

ಗಮನಿಸಿ: ಮುಂದಿನ ವಾರ ನಾಲ್ಕು ದಿನ ಬ್ಯಾಂಕ್‌ ರಜೆ: ಇಲ್ಲಿದೆ ಮಾಹಿತಿ

ಮುಂದಿನ ವಾರ ಬ್ಯಾಂಕ್‌ ರಜೆಗಳ ಪಟ್ಟಿ

* ಡಿಸೆಂಬರ್‌ 16: ಬ್ಯಾಂಕ್‌ ಖಾಸಗೀಕರಣದ ವಿರುದ್ಧ ಬ್ಯಾಂಕ್‌ ಯೂನಿಯನ್‌ ಮುಷ್ಕರ
* ಡಿಸೆಂಬರ್‌ 17: ಬ್ಯಾಂಕ್‌ ಖಾಸಗೀಕರಣದ ವಿರುದ್ಧ ಬ್ಯಾಂಕ್‌ ಯೂನಿಯನ್‌ ಮುಷ್ಕರ
* ಡಿಸೆಂಬರ್‌ 18: ಯು ಸೊಸೊ ಥಾಮ್‌ ಪುಣ್ಯ ಸ್ಮರಣೆ/ಗುರುಘಿಸಿದಾಸ್‌ ಜಯಂತಿ
* ಡಿಸೆಂಬರ್‌ 19: ಭಾನುವಾರ

ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ವಿರೋಧ ಮಾಡಿ ಡಿಸೆಂಬರ್ 16 ರಿಂದ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ ವೇಳೆ ತನ್ನ ಹೂಡಿಕೆಯ ಯೋಜನೆಯ ಭಾಗವಾಗಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು (ಪಿಎಸ್‌ಬಿ) ಖಾಸಗೀಕರಣಗೊಳಿಸುವುದಾಗಿ ಘೋಷಿಣೆ ಮಾಡಿದ್ದರು. ಈಗ ಹಲವಾರು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲಾಗಿದೆ. ಇದನ್ನು ವಿರೋಧ ಮಾಡಿ ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.

ಸರ್ಕಾರವು ಕಳೆದ ಹಲವಾರು ವರ್ಷಗಳಿಂದ ಹಲವಾರು ಬ್ಯಾಂಕುಗಳನ್ನು ಖಾಸಗೀಕರಣ ಮಾಡಿದೆ. ಸರ್ಕಾರವು 2019 ರಲ್ಲೇ ಐಡಿಬಿಐ ಬ್ಯಾಂಕ್‌ ಅನ್ನು ಖಾಸಗೀಕರಣ ಮಾಡಿದೆ. ಎಲ್‌ಐಸಿಗೆ ಸರ್ಕಾರದ ಬಹು ಪಾಲನ್ನು ಮಾರಾಟ ಮಾಡುವ ಮೂಲಕ ಸರ್ಕಾರವು 2019 ರಲ್ಲೇ ಐಡಿಬಿಐ ಬ್ಯಾಂಕ್‌ ಅನ್ನು ಖಾಸಗೀಕರಣ ಮಾಡಿದೆ. ಇನ್ನು ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕರ ಹಾಗೂ ಬ್ಯಾಂಕ್‌ ಒಕ್ಕೂಟಗಳ ಆಕ್ರೋಶದ ನಡುವೆಯೂ 14 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಬ್ಯಾಂಕುಗಳನ್ನು ವಿಲೀನ ಮಾಡುವುದು ಹಾಗೂ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಸಾರ್ವಜನಿಕ ವಲಯ ಹಾಗೂ ಬ್ಯಾಂಕುಗಳ ಒಕ್ಕೂಟದಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಆಕ್ರೋಶಗಳ ನಡುವೆಯೂ ಸರ್ಕಾರವು 14 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಹಾಗೆಯೇ ಖಾಸಗೀಕರಣವನ್ನು ಮಾಡಿದೆ. ಈ ನಡುವೆ ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಬ್ಯಾಂಕಿಂಗ್‌ ಕಾನೂನು ತಿದ್ದುಪಡಿ ಮಸೂದೆ (2021) ಮಂಡಿಸಲು ಕೇಂದ್ರ ಸರ್ಕಾರವು ಮುಂದಾಗಿದೆ.

ಡಿಸೆಂಬರ್‌ನಲ್ಲಿ ಇನ್ನೆಷ್ಟು ರಜಾದಿನಗಳು ಇದೆ?

* ಡಿಸೆಂಬರ್‌ 11: ಎರಡನೇ ಶನಿವಾರ ಭಾರತದೆಲ್ಲೆಡೆ ರಜೆ
* ಡಿಸೆಂಬರ್‌ 18: ಯು ಸೊಸೊ ಥಾಮ್‌ ಪುಣ್ಯ ಸ್ಮರಣೆ/ಗುರುಘಿಸಿದಾಸ್‌ ಜಯಂತಿ (ಮೇಘಾಲಯ/ಚಂಡೀ‌ಗಢ)
* ಡಿಸೆಂಬರ್‌ 19: ಭಾನುವಾರ ದೇಶದೆಲ್ಲೆಡೆ
* ಡಿಸೆಂಬರ್‌ 24: ಕ್ರಿಸ್‌ಮಸ್‌ ಹಬ್ಬ ಆರಂಭ (ಮಿಜೋರಾಂ ಹಾಗೂ ಮೇಘಾಲಯ)
* ಡಿಸೆಂಬರ್‌ 25: ಡಿಸೆಂಬರ್‌, ನಾಲ್ಕನೇ ಶನಿವಾರ (ಭಾರತದೆಲ್ಲೆಡೆ)
* ಡಿಸೆಂಬರ್‌ 26: ಭಾನುವಾರ, ಭಾರತದೆಲ್ಲೆಡೆ
* ಡಿಸೆಂಬರ್‌ 27: ಕ್ರಿಸ್‌ಮಸ್‌ (ಐಜ್ವಾಲ್‌)
* ಡಿಸೆಂಬರ್‌ 30: ತಮು ಲೊಸಾರ್‌/ಯು ಕಿಯಾಂಗ್‌ ನಂಗ್ಬಾ (ಸಿಕ್ಕಿಂ ಹಾಗೂ ಮೇಘಾಲಯ)
* ಡಿಸೆಂಬರ್‌ 31: ಹೊಸ ವರ್ಷಾಚರಣೆ (ಮಣಿಪುರ)

English summary

Bank Holidays in December: Banks to remain closed for 4 days next week- Check list Here

Banks to remain closed for 4 days next week- Check list Here.



Read more…

Leave a Reply

Your email address will not be published. Required fields are marked *