ಮೈಸೂರಲ್ಲಿ ಮಾತಾಡಿದ ಅವರು, ಜೆಡಿಎಸ್ ಕೋರ್ ಕಮಿಟಿಯಲ್ಲಿ ಸ್ಥಾನಮಾನ ಸಿಗದ ವಿಚಾರಕ್ಕೂ ಪ್ರತಿಕ್ರಿಯೆ ಕೊಟ್ರು. ನಾನೇ ಕೈ ಮುಗಿದು ಮನವಿ ಮಾಡಿದ್ದೆ. ನನಗೆ ಯಾವುದೇ ಸ್ಥಾನಮಾನ ಬೇಡ ಅಂತ. ನಾನು ಯಾರನ್ನ ಪಕ್ಷಕ್ಕೆ ಕರೆ ತಂದಿದ್ನೋ ಅವರೇ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನನಗೆ ಪಕ್ಷದ ಸ್ಥಾನಮಾನ ಸಿಕ್ಕರೆ ಅವರಿಗೆ ಸಹಿಸಲು ಆಗಲ್ಲ. ಹೀಗಾಗಿ ನಾನು ನಿಮ್ಮ ಜೊತೆಯಲ್ಲೇ ಇರ್ತೀನಿ, ನನಗೆ ಯಾವುದೇ ಸ್ಥಾನಮಾನ ಬೇಡ ಅಂತ ಮನವಿ ಮಾಡಿದ್ದೆ. ಹೀಗಾಗಿ ನನ್ನನ್ನ ಕೋರ್ ಕಮಿಟಿಗೆ ಸೇರಿಸಿಲ್ಲ ಅಂತ ಸಾರಾ ಮಹೇಶ್ ಸ್ಪಷ್ಟನೆ ನೀಡಿದರು.
ಇನ್ನು, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಎಚ್. ಡಿ. ಕುಮಾರಸ್ವಾಮಿ ಅಭ್ಯರ್ಥಿ ಆಗುವುದಿಲ್ಲ. ರಾಮನಗರ ಬಿಟ್ಟು ಚಾಮುಂಡೇಶ್ವರಿಗೆ ಕುಮಾರಸ್ವಾಮಿ ಬರಲ್ಲ ಅಂತ ಶಾಸಕ ಸಾರಾ ಮಹೇಶ್ ಸ್ಪಷ್ಟನೆ ಕೊಟ್ರು. ಕುಮಾರಸ್ವಾಮಿಯವರ ಜೊತೆ ಚರ್ಚೆ ಮಾಡಿಯೇ ಈ ಮಾತನ್ನು ನಾನು ಹೇಳುತ್ತಿದ್ದೇನೆ. ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಒತ್ತಾಯ ಮಾಡುತ್ತಿರುವುದು ನಿಜ. ಆದರೆ ಚಾಮುಂಡೇಶ್ವರಿಯಿಂದ ಕುಮಾರಸ್ವಾಮಿ ಅಭ್ಯರ್ಥಿ ಆಗುವುದಿಲ್ಲ ಎಂಬುದು ಕೂಡ ನಿಜ. ಚಾಮುಂಡೇಶ್ವರಿಯಲ್ಲಿ ನಮ್ಮ ಪಕ್ಷದ ಶಾಸಕರೇ ಇದ್ದಾರೆ. ಹೀಗಾಗಿ ಕುಮಾರಸ್ವಾಮಿ ಬರುವ ಅಗತ್ಯ ಇಲ್ಲ ಅಂತ ತಿಳಿಸಿದ್ರು.
ಶಾಲೆಗಳು ದೇಗುಲ ಇದ್ದಂತೆ..!
ಶಾಲೆಗಳು ದೇಗುಲ ಇದ್ದಂತೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ. ಮಕ್ಕಳ ಮನಸ್ಸಿನಲ್ಲಿ ಕೋಮು ವೈಮನಸ್ಸು ಬಿತ್ತುವುದು ಬೇಡ. ಅಂತಹ ಕೆಲಸ ಮಾಡುವ ಎಲ್ಲಾ ಕೊಳಕು ಮನಸ್ಸುಗಳಿಗೆ ನನ್ನ ವಿರೋಧವಿದೆ. ಯಾರೇ ಇರಲಿ, ಯಾವ ಪಕ್ಷವೇ ಇರಲಿ ಈ ವಿಚಾರದಲ್ಲಿ ನನ್ನ ವಿರೋಧ ಇದೆ ಅಂತ ತಿಳಿಸಿದ್ರು.
ಇದೇ ವೇಳೆ ಎಂಎಲ್‌ಸಿ ಮರಿ ತಿಬ್ಬೇಗೌಡ, ಶಾಸಕ ಸಿ. ಎಸ್. ಪುಟ್ಟರಾಜು, ಕೀಲಾರ ಜಯರಾಮು ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯವುದಿಲ್ಲ. ಮರಿ ತಿಬ್ಬೇಗೌಡರು ಮುಂದಿನ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಲಿದ್ದಾರೆ. ಪುಟ್ಟರಾಜು, ನಾವೆಲ್ಲಾ ಸೇರಿಕೊಂಡು ಪಕ್ಷ ಸಂಘಟನೆ ಮಾಡುತ್ತೇವೆ. ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಎಚ್. ಕೆ. ರಾಮುರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಕೀಲಾರ ಜಯರಾಮು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಾರಾ ಮಹೇಶ್ ಹೇಳಿದರು.
ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ 2023ರ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಹೋರಾಟ ಆರಂಭಿಸಿದ್ದೀವಿ. 2023ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆಲ್ಲಲಿದೆ. ಜನರು ಇದುವರೆಗಿನ ಸರ್ಕಾರಗಳನ್ನೆಲ್ಲಾ ನೋಡಿದ್ದಾರೆ. ರಾಜ್ಯ ಉಳಿಯಬೇಕಾದರೆ ಎಚ್. ಡಿ. ಕುಮಾರಸ್ವಾಮಿ ಹಾಗೂ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎಂಬುದು ಜನರಿಗೆ ಮನದಟ್ಟಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ಸಾರಾ ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Read more
[wpas_products keywords=”deal of the day sale today offer all”]