ಅನಿತಾ ಭಟ್ ನಟನೆಗೂ ಸೈ.. ನಿರ್ಮಾಣಕ್ಕೂ ಜೈ… ಈಗಾಗಲೇ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮುದ್ರಂ ಸಿನಿಮಾ ನಿರ್ಮಾಣ ಮಾಡಿದವರು. ಈಗ ‘ಇಂದಿರಾ’ ಸಿನಿಮಾ ತೆರೆಗೆ ತರಲು ಸಜ್ಜಾಗಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇಂದಿರಾ ಸಿನಿಮಾದ ಫಸ್ಟ್ ಲುಕ್ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಈಗ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿ ಕುತೂಹಲ ಹೆಚ್ಚಿಸಿದೆ.
ಸ್ಟೆಪ್ಸ್ ಟು ಡೆಸ್ಟಿನಿ ಹಾಡು ಕೇಳುಗರ ಗಮನಸೆಳೆಯುತ್ತಿದೆ. ನಿರ್ದೇಶಕ ರಿಷಿಕೇಶ್ ಸಾಹಿತ್ಯ ಬರೆದಿದ್ದಾರೆ. ಲೋಹಿತ್ ನಾಯ್ಕ್ ಸಂಗೀತವಿದೆ. ಸುಪ್ರಿಯ ರಾಮ್ ಹಾಡಿಗೆ ಧನ್ವಿಯಾಗಿದ್ದಾರೆ.
ಇಂದಿರಾ ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಮುಖ್ಯಭೂಮಿಕೆಯಲ್ಲಿ ಅನಿತಾ ಭಟ್ ನಟಿಸಿದ್ದಾರೆ. ಉಳಿದಂತೆ ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಹಾಸನ್, ಚಕ್ರವರ್ತಿ ಚಂದ್ರಚೂಡ್, ನೀತು ಹಾಗೂ ಶಫಿ ಬಣ್ಣ ಹಚ್ಚಿದ್ದಾರೆ.
ಇಂದಿರಾ ಸಿನಿಮಾಕ್ಕೆ ರಿಷಿಕೇಶ್ ನಿರ್ದೇಶನ, ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಲೋಹಿತ್ ಎಲ್.ನಾಯಕ್ ಮ್ಯೂಸಿಕ್, ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಅನಿತಾ ಭಟ್ ಹಾಗೂ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
Read More…Source link
[wpas_products keywords=”deal of the day party wear for men wedding shirt”]