ಈ ಹಿಂದೆ ‘ಗಣಪ’, ‘ಕರಿಯ 2’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಪ್ರಭು ಶ್ರೀನಿವಾಸ್ ಈಗ ‘ಬಾಡಿ ಗಾಡ್’ ಅನ್ನೋ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಬರೀ ಸಿನಿಮಾ ನಿರ್ದೇಶಿಸಿವುದು ಮಾತ್ರವಲ್ಲ, ‘ಬಾಡಿ ಗಾಡ್’ ಮೂಲಕ ಅವರೀಗ ನಿರ್ಮಾಪಕರು ಆಗಿದ್ದಾರೆ. ಈ ಸಿನಿಮಾಕ್ಕೆ ಅಪ್ಪು ಹಾಡಿದ್ದಾರೆ. ‘ಆರೇಸ ಡಂಕಣಕ..’ ಎಂದು ಶುರುವಾಗುವ ಈ ಹಾಡನ್ನು ಅವರು ಹಾಡಿದ್ದಾರೆ. ‘ಗಣಪ’ ಚಿತ್ರದ ‘ಮುದ್ದಾಗಿ ನೀನು ನನ್ನ ಕೂಗಿದೇ..’ ಹಾಗೂ ‘ಕರಿಯ 2’ ಚಿತ್ರದ ‘ಅನುಮಾನವೇ ಇಲ್ಲ ಅನುರಾಗಿ ನಾನೀಗ..’ ಮುಂತಾದ ಹಾಡುಗಳಿಂದ ಫೇಮಸ್ ಆಗಿರುವ ಸಂಗೀತ ನಿರ್ದೇಶಕ ಕರಣ್ ಬಿ. ಕೃಪಾ ಅವರು ಅಪ್ಪು ಹಾಡಿರುವ ಈ ಹಾಡನ್ನು ಸಂಯೋಜನೆ ಮಾಡಿದ್ದಾರೆ.
ಮುಖ್ಯಭೂಮಿಕೆಯಲ್ಲಿ ‘ಮಠ’ ಗುರು ಪ್ರಸಾದ್
‘ಮಠ’, ‘ಎದ್ದೇಳು ಮಂಜುನಾಥ’ ಚಿತ್ರಗಳ ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಈ ಹಿಂದೆ ‘ಮೊಗ್ಗಿನ ಮನಸ್ಸು’, ‘ಓ ಪ್ರೇಮವೇ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಮನೋಜ್ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ಇದೊಂದು ಬ್ಲಾಕ್ ಹ್ಯೂಮರ್ ವಿಥ್ ಥ್ರಿಲ್ಲರ್ ಕಥೆಯಾಗಿದ್ದು, ಕಥೆಯೇ ಈ ಚಿತ್ರದ ಹೀರೋ. ಸತ್ತ ಮೇಲೂ ಮಾತನಾಡುವ ಪಾತ್ರವನ್ನು ಗುರು ಪ್ರಸಾದ್ ನಿಭಾಯಿಸಿದ್ದಾರೆ. ಗುರು ಪ್ರಸಾದ್ ಅವರನ್ನು ನೋಡಿಕೊಳ್ಳಲೂ ಬಂದ ಮನೋಜ್‌ಗೆ ಹಣದ ಸಮಸ್ಯೆ ಇರುತ್ತದೆ. ಅಲ್ಲಿಂದ ಸುಳ್ಳುಗಳನ್ನು ಹೇಳುತ್ತ ಸುಳ್ಳುಗಳ ಸರಮಾಲೆ ಕಟ್ಟಿ ಬದುಕು ಸಮಸ್ಯೆಗಳಿಂದ ತುಂಬಿ ಹೋಗುತ್ತದೆ. ಇದು ಈ ಸಿನಿಮಾದ ಕಥೆಯ ಸಾರಾಂಶ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ನಿರ್ದೇಶಕ ಪ್ರಭು ಶ್ರೀನಿವಾಸ್. ಈ ಸಿನಿಮಾದ ಒಂದು ಮುಖ್ಯ ಪಾತ್ರಕ್ಕೆ ಪದ್ಮಜಾ ರಾವ್ ಬಣ್ಣ ಹಚ್ಚಿದ್ದು, ನಾಯಕಿಯಾಗಿ ದೀಪಿಕಾ ಆರಾಧ್ಯ ನಟಿಸಿದ್ದಾರೆ.
Allu Arjun: ಶಿವಣ್ಣ & ಪುನೀತ್ ಮನೆಗೆ ಭೇಟಿ ನೀಡಿದ ಅಲ್ಲು ಅರ್ಜುನ್; ಇಲ್ಲಿವೆ ಫೋಟೋಗಳು
‘ಯೆಲ್ಲೋ ಬೋರ್ಡ್’ಗೂ ಹಾಡಿರುವ ಪುನೀತ್
‘ಟೈಗರ್’ ಸಿನಿಮಾ ಖ್ಯಾತಿಯ ಪ್ರದೀಪ್ ನಟಿಸಿರುವ ‘ಯೆಲ್ಲೋ ಬೋರ್ಡ್’ ಸಿನಿಮಾದಲ್ಲೂ ಪುನೀತ್ ಹಾಡಿದ್ದರು. ಆ ಸಿನಿಮಾದಲ್ಲಿ ಕ್ಯಾಬ್ ಡ್ರೈವರ್‌ಗಳ ಕುರಿತಾಗಿರುವ ಒಂದು ಹಾಡನ್ನು ಹಾಡಿದ್ದರು. ಅಲ್ಲದೆ, ಹಾಡಿದ್ದಕ್ಕಾಗಿ ಅವರು ಯಾವುದೇ ರೀತಿಯ ಸಂಭಾವನೆ ಪಡೆದುಕೊಂಡಿರಲಿಲ್ಲ.
‘ಜೇಮ್ಸ್‌ನಲ್ಲಿ ನಟಿಸಿದ್ದು ಗಿಮಿಕ್ ಅಲ್ಲ, ಅಪ್ಪು ಸಿನಿಮಾಗೆ ಪ್ರಮೋಷನ್ ಮಾಡೋ ಯೋಗ್ಯತೆ ಯಾರಿಗೆ ಇದೆ’- ರಾಘಣ್ಣ
Read more
[wpas_products keywords=”deal of the day party wear dress for women stylish indian”]