Karnataka news paper

ಚಾಮುಂಡೇಶ್ವರಿ ಕ್ಷೇತ್ರದಿಂದ ಹೆಚ್‌ಡಿಕೆ ಸ್ಪರ್ಧೆ : ಈ ಬಗ್ಗೆ ಕುಮಾರಸ್ವಾಮಿ ಹೇಳುವುದೇನು?


ರಾಮನಗರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್‌ಡಿಕೆ ಅವರೇ ಅಭ್ಯರ್ಥಿ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ನಾನು ಚುನಾವಣೆಯ ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ ಹೊರತು ಚುನಾವಣೆಗೆ ನಿಲ್ಲುತ್ತೇನೆ ಎಂಬ ಅರ್ಥವಲ್ಲ ಅಂತ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ನಾನು ಮೊನ್ನೆ ಚಾಮುಂಡೇಶ್ವರಿಯಲ್ಲಿ ಏನು ಹೇಳಿದ್ದೇನೆ ಅಂದರೆ. ನನ್ನ ಕಾರ್ಯಕರ್ತರು ಚಾಮುಂಡೇಶ್ವರಿಗೆ ಯಾರು? ಯಾರನ್ನ ಈ ಕ್ಷೇತ್ರದಲ್ಲಿ ನಾಯಕರನ್ನಾಗಿ ಮಾಡ್ತೀರಿ ಎಂದು ಪ್ರಶ್ನಿಸಿದರು. ಅದಕ್ಕೆ ನಾನೇ ಬರ್ತೀನಿ ನಡೆಯಿರಿ ಅಂತ ಅವರಿಗೆ ಅಂದಿದ್ದೇನೆ. ನಾನೇ ಬರ್ತೀನಿ ನಡೆಯಿರಿ ಅಂದ್ರೆ ಚುನಾವಣೆ ನಿಲ್ಲುತ್ತೇನೆ ಎಂದು ಅರ್ಥವಲ್ಲ. ಈ ಹಿಂದಿನ ಹಾಗೇ ಚುನಾವಣೆ ನಡೆಸಲು ಬರ್ತೀನಿ ಎಂಬುವುದಾಗಿದೆ.

ಈ ಹಿಂದೆ ಹತ್ತು ದಿನಗಳ ಕಾಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗೆ ಭೇಟಿ ನೀಡಿದ ಹಾಗೆ ಈ ಬಾರಿಯು ಕೆಲಸ ಮಾಡುತ್ತೇನೆ ಎಂಬುವುದೇ ಇದರ ಅರ್ಥ ಎಂದಿದ್ದಾರೆ. ನಾನು ನಾಯಕತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ ಎಂದಿದ್ದೇನೆ. ನಾನು ಚುನಾವಣೆಗೆ ಬರ್ತೀನಿ ಅಂತಾ ಹೇಳಿದ್ದೀನಾ. ನಾನೇ ಬರ್ತೀನಿ ನಡೀರಪ್ಪ ಅಂತೇಳಿದ್ದೇನೆ. ಅದನ್ನು ಈ ರೀತಿ ಅರ್ಥೈಸಿಕೊಂಡರೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದ ಎನ್ನುವ ಕುಮಾರಸ್ವಾಮಿಗೆ ಕೋಟ್ಯಂತರ ರೂ. ಆಸ್ತಿ ಎಲ್ಲಿಂದ ಬಂತು: ಮಾಜಿ ಶಾಸಕ ಪ್ರಶ್ನೆ

ರಾಮನಗರದಲ್ಲಿ ಕಾಂಗ್ರೆಸ್ ಬೇರೂರಲು ಸಾಧ್ಯವಿಲ್ಲ!
ರಾಮನಗರದಲ್ಲಿ ಕಾಂಗ್ರೆಸ್ ಬೇರೂರಲು ಸಾಧ್ಯ ಇಲ್ಲ. ಯಾವುದೇ ಕಾರಣಕ್ಕೂ ಇಲ್ಲಿ ಬೇರೂರಲು ಸಾಧ್ಯವಿಲ್ಲ. 24 ರಂದು ಅಧಿವೇಶನ ಮುಗಿಯುತ್ತದೆ. ಬಳಿಕ ರಾಮನಗರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಸ್ಥಳೀಯ ಸಮಸ್ಯೆಗಳು ಸಣ್ಣಪುಟ್ಟ ಸಮಸ್ಯೆಗಳು ಇರ್ತಾವೆ. ಖುದ್ದಾಗಿ ಜನರ ಬಳಿ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚಿಸುವೆ. ನಾವೇನು ತಪ್ಪು ಮಾಡಿದ್ದೇವಾ, ಜನರ ಸಮಸ್ಯೆ ಏನು ಇದೆ. ಎಲ್ಲವನ್ನೂ ಯಾವ ರೀತಿ ಬಗೆಹರಿಸಬಹುದು ಎನ್ನುವುದನ್ನು ಭೇಟಿ ಮೂಲಕ ಪರಿಹರಿಸುತ್ತೇನೆ.

ರಾಮನಗರದ ಜನರು, ಕಾರ್ಯಕರ್ತರು ಜೊತೆಗಿನ ಸಂಬಂಧವನ್ನು ನೂರಾರು ಬಾರಿ ಹೇಳಿದ್ದೇನೆ. ದೇವೇಗೌಡರ ಕುಟುಂಬಕ್ಕೂ ರಾಮನಗರ ಕ್ಷೇತ್ರಕ್ಕೂ ತಾಯಿ ಮಗುವಿನ ಸಂಬಂಧ ಇದೆ. ಮಗುವನ್ನು ಬೆಳೆಸಿದ ತಾಯಿಯೇ ಮಗುವಿನ ರಕ್ಷಣೆ ಮಾಡುತ್ತಾಳೆ..ಯಾವುದೇ ಕಾರಣಕ್ಕೂ ಮಗುವಿಗೆ ತೊಂದರೆಯಾಗಲು ಬಿಡಲ್ಲ. ಅಚಲವಾದ ವಿಶ್ವಾಸ ನನಗೆ ರಾಮನಗರ ಕ್ಷೇತ್ರದ ಮೇಲಿದೆ ಎಂದು ಎಚ್.ಡಿ.ಕೆ ತಿಳಿಸಿದ್ದಾರೆ.

ಶಾಲೆ ತೆರೆಯುವ ಬಗ್ಗೆ ಪ್ರತಿಕ್ರಿಯೆ!
ಶಾಲಾ ಕಾಲೇಜುಗಳು ಹಂತ ಹಂತವಾಗಿ ಆರಂಭ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ತೆರೆಯಲಿ. ಶಾಲಾ ಕಾಲೇಜುಗಳಲ್ಲಿ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಲಿ. ಈ ಹಿಂದಿನಂತೆ ಗಲಾಟೆ ನಡೆಯದಂತೆ ನೋಡಿಕೊಳ್ಳಬೇಕು. ಕಳೆದ ವಾರದ ರೀತಿಯಲ್ಲಿ ಮುಂದುವರಿಯಬಾರದು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಸಲಹೆ ನೀಡಿದರು.

ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ: ಎಚ್‌ಡಿ ಕುಮಾರಸ್ವಾಮಿ

ರಾಮನಗರ ಎಸ್ಪಿ ಸಂತೋಷ್ ಬಾಬುಗೆ ಕ್ಲಾಸ್!
ಇನ್ನು ಮದ್ಯದ ಬಾಟಲ್ ಸಂಬಂಧದ ದಾಳಿಗೆ ರಾಮನಗರ ಎಸ್ಪಿ ಸಂತೋಷ್ ಬಾಬುಗೆ ಹೆಚ್.ಡಿ.ಕುಮಾರಸ್ವಾಮಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾರ್ಯಕ್ರಮದ ವೇಳೆ ಫೋನ್ ಮೂಲಕ ಎಸ್ಪಿ ಸಂತೋಷ್ ಬಾಬು ವಿರುದ್ಧ ಗರಂ ಆದರು. ಇವತ್ತು ಮದ್ಯದ ಬಾಟೆಲ್ ಮಾರಾಟ ಮಾಡ್ತಿರುವ ಎಲ್ಲಾ ಅಂಗಡಿಗಳನ್ನ ರೇಡ್ ಮಾಡ್ತೀರಾ? ನಿಮ್ಮ ಇಲಾಖೆಯ ಗೋವಿಂದರಾಜು 500 ಬಾಟೆಲ್ ಸಿಕ್ಕಿದವರನ್ನ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಾನೆ .

20 ಬಾಟೆಲ್ ಇಟ್ಟಿದ್ದ ರೈತರು ಹೊಲಗಳಲ್ಲಿ ಕೆಲಸ ಮಾಡಿ ಕುಡಿಯಲು ಇಟ್ಟುಕೊಂಡಿದ್ದವರನ್ನು ಜೈಲಿಗೆ ಕಳುಹಿಸುತ್ತೀರಿ ಎಂದು ಕಿಡಿಕಾರಿದರು. ಇದನ್ನೆಲ್ಲಾ ನಿಲ್ಲಿಸಲು ಸರ್ಕಾರಕ್ಕೆ ಹೇಳಿ. ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ ನಾನು. ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡಿದ್ದು ನಿಮ್ಮಂತಹವರಿಂದ. ನಾನು ಅವತ್ತು ಆ ಕುಟುಂಬವನ್ನ ಉಳಿಸಿದ್ದು,. ಇಲ್ಲಿ ನನ್ನ ಕ್ಷೇತ್ರದಲ್ಲಿ ಬಂದು ನೀವೇನು ಸೆಕ್ಯೂರಿಟಿ ಕೊಡಬೇಕಿಲ್ಲ.

ನೀವು ಪಕ್ಷಾತೀತವಾಗಿ ಕೆಲಸ ಮಾಡಿ. ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಬೇಡಿ ಎಂದು ಚಾಟಿ ಬೀಸಿದರು. ಎರಡು ದಿನಗಳ ಹಿಂದೆ ಅಂಗಡಿಯಲ್ಲಿ ಮದ್ಯದ ಬಾಟೆಲ್ ಗಳನ್ನು ಜೆಡಿಎಸ್ ಕಾರ್ಯಕರ್ತ ಮಾರಾಟ ಮಾಡಿದ್ದ ಆರೋಪದ ಮೇರೆಗೆ, ಆತನನ್ನ ಅರೆಸ್ಟ್ ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು.



Read more

[wpas_products keywords=”deal of the day sale today offer all”]