Karnataka news paper

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದೀರಾ? ತೆರಿಗೆಯಿಂದ ಆದಾಯ ಇಳಿಕೆಯಾಗದಿರಲಿ ಎಚ್ಚರ!


ಹೊಸದಿಲ್ಲಿ: ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಣ್ಣ ಉಳಿತಾಯ ಯೋಜನೆ (Small savings schemes) ಗಳಲ್ಲಿ ಹೂಡಿಕೆ ಮಾಡುತ್ತಾರೆ. ಈ ಯೋಜನೆಗಳು ಆದಾಯದ ಖಾತರಿ (Guaranteed return) ನೀಡುವುದೇ ಇದಕ್ಕೆ ಪ್ರಮುಖ ಕಾರಣ. ಅಲ್ಲದೆ, ಹೆಚ್ಚಿನ ಸಣ್ಣ ಉಳಿತಾಯ ಯೋಜನೆಗಳು ಹಣದುಬ್ಬರಕ್ಕಿಂತ ಹೆಚ್ಚಿನ ಆದಾಯ ನೀಡುತ್ತವೆ. ಆದರೆ, ಗ್ರಾಹಕರು ತಮ್ಮ ಹಣವನ್ನು ಹೂಡಿಕೆ ಮಾಡುವಾಗ ತೆರಿಗೆಯತ್ತ ಗಮನ ಹರಿಸಲು ಮರೆಯುತ್ತಾರೆ. ಈ ತೆರಿಗೆಯು ನಿಮ್ಮ ಆದಾಯವನ್ನು ಕಡಿಮೆ ಮಾಡಬಹುದು. ಹೀಗಾಗಿ, ಹೂಡಿಕೆ ಮಾಡುವಾಗ ಗ್ರಾಹಕರು ಆದಾಯದ ಮೇಲಿನ ತೆರಿಗೆ ಪ್ರಮಾಣದ ಕುರಿತು ತಿಳಿಯಬೇಕು. ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ತೆರಿಗೆ ನಿಯಮಗಳ ಕುರಿತ ಮಾಹಿತಿ ಇಲ್ಲಿದೆ.

1) ಸಾರ್ವಜನಿಕ ಭವಿಷ್ಯ ನಿಧಿ (PPF)
ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ( ಪಿಪಿಎಫ್‌) ನಲ್ಲಿ ಮೂರು ಹಂತಗಳಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ. ಈ ಯೋಜನೆಯಲ್ಲಿ, ಸೆಕ್ಷನ್ 80Cಅಡಿ ವಾರ್ಷಿಕ ₹1.5 ಲಕ್ಷದವರೆಗಿನ ಹೂಡಿಕೆಯ ಮೇಲೆ ತೆರಿಗೆ ಕಡಿತದ ಪ್ರಯೋಜನ ಲಭ್ಯವಿದೆ. ಈ ಹೂಡಿಕೆ ಮೇಲೆ ಗಳಿಸಿದ ಬಡ್ಡಿ ಮತ್ತು ಮುಕ್ತಾಯದ ಸಮಯದಲ್ಲಿ ಹಿಂಪಡೆಯುವಿಕೆ ಹಣವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿವೆ.

ತೆರಿಗೆ ಉಳಿಸಲು ELSS ಮೂಲಕ ಹೂಡಿಕೆ ಮಾಡುವಿರಾ? ಇದರ ಪ್ರಯೋಜನವೇನು? ಇಲ್ಲಿದೆ ವಿವರ

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)
ಸುಕನ್ಯಾ ಸಮೃದ್ಧಿ ಯೋಜನೆ (SSY) ಕೂಡ ಟ್ರಿಪಲ್ ಇ ಸ್ಟೇಟಸ್‌ನೊಂದಿಗೆ ಬರುತ್ತದೆ. ಇಲ್ಲಿ ಮಾಡಿದ ಹೂಡಿಕೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಮುಕ್ತವಾಗಿದೆ. ಜೊತೆಗೆ, ಬಡ್ಡಿ ಮತ್ತು ಹಿಂಪಡೆಯುವ ಮೊತ್ತವೂ ತೆರಿಗೆ ಮುಕ್ತವಾಗಿದೆ. ಈ ಯೋಜನೆಯಲ್ಲಿಯೂ ಸಹ ನೀವು ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು.

ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್‌ (NSC)
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿನ ಹೂಡಿಕೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ. ಈ ಯೋಜನೆಯಲ್ಲಿ ಮೆಚ್ಯೂರಿಟಿಯಲ್ಲಿ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ. ಈ ಬಡ್ಡಿಯನ್ನು ಹೂಡಿಕೆದಾರರ ಒಟ್ಟು ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ.

ಮಾಸಿಕ ಆದಾಯ ಯೋಜನೆ (MIS)
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಯಾವುದೇ ಆದಾಯ ತೆರಿಗೆ ವಿನಾಯಿತಿ ಇಲ್ಲ. ಹೂಡಿಕೆಯ ಮೇಲಿನ ಬಡ್ಡಿ ಆದಾಯವು ತೆರಿಗೆಗೆ ಒಳಪಡುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿಗೆ 2022ರಲ್ಲೂ ಶೇ.7.6ರ ಬಡ್ಡಿ ಲಭ್ಯ! ಮಾಹಿತಿ ಇಲ್ಲಿದೆ

ಕಿಸಾನ್ ವಿಕಾಸ್ ಪತ್ರ (ಕೆವಿಪಿ)
ಕಿಸಾನ್ ವಿಕಾಸ್ ಪತ್ರದಲ್ಲಿ ಮಾಡಿದ ಹೂಡಿಕೆಯ ಮೇಲೆ ಆದಾಯ ತೆರಿಗೆ ವಿನಾಯಿತಿಯ ಯಾವುದೇ ಪ್ರಯೋಜನವಿಲ್ಲ. ಈ ಹೂಡಿಕೆಯಲ್ಲಿ ಗಳಿಸಿದ ಬಡ್ಡಿಯನ್ನು ಹೂಡಿಕೆದಾರರ ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ, ಅದರ ಮೇಲೆ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆಯನ್ನು ಲೆಕ್ಕಹಾಕಲಾಗುತ್ತದೆ.

ಮರುಕಳಿಸುವ ಠೇವಣಿ ಯೋಜನೆ (RD)
ಸಣ್ಣ ಉಳಿತಾಯ ಯೋಜನೆಗಳಲ್ಲಿ RD ಬಹಳ ಜನಪ್ರಿಯ ಯೋಜನೆಯಾಗಿದೆ. ಪ್ರತಿ ತಿಂಗಳು ಸಣ್ಣ ಉಳಿತಾಯದ ಮೂಲಕ ದೊಡ್ಡ ಬಂಡವಾಳವನ್ನು ಸೇರಿಸಲು ಇದು ಉತ್ತಮ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಗಳಿಸಿದ ಬಡ್ಡಿಯನ್ನು ಹೂಡಿಕೆದಾರರ ವಾರ್ಷಿಕ ಆದಾಯಕ್ಕೆ ಸೇರಿಸಲಾಗುತ್ತದೆ. ಈ ಹಣಕ್ಕೆ ಸ್ಲ್ಯಾಬ್ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ.

ಸಣ್ಣ ಉಳಿತಾಯಕ್ಕೆ ಹೊಡೆತ ನೀಡಿದ ಕೇಂದ್ರ ಹಣಕಾಸು ಇಲಾಖೆ: ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ!

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿನ ಠೇವಣಿಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತವೆ. ಅದೇ ಸಮಯದಲ್ಲಿ, ಒಂದು ವರ್ಷದಲ್ಲಿ ಬಡ್ಡಿ ಆದಾಯವು ರೂ 50,000 ಮೀರಿದರೆ, ಅದರ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಹಿರಿಯ ನಾಗರಿಕರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTB ಅಡಿಯಲ್ಲಿ 50,000 ರೂ.ವರೆಗಿನ ಬಡ್ಡಿ ಆದಾಯದ ಮೇಲೆ ವಿನಾಯಿತಿ ಪಡೆಯಬಹುದು.

ಟೈಮ್‌ ಡೆಪಾಸಿಟ್‌ (TD)
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (ಟಿಡಿ) ಯೋಜನೆಯು ಬ್ಯಾಂಕ್ ಎಫ್‌ಡಿಯಂತೆ ಕಾರ್ಯನಿರ್ವಹಿಸುತ್ತದೆ. ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಕೇವಲ ಐದು ವರ್ಷಗಳ ಅವಧಿಯ ಠೇವಣಿಯಲ್ಲಿ ಲಭ್ಯವಿದೆ. ಈ ಯೋಜನೆಯಡಿಯಲ್ಲಿ ಪಡೆದ ರಿಟರ್ನ್‌ಗಳು ತೆರಿಗೆಗೆ ಒಳಪಡುತ್ತವೆ.



Read more

[wpas_products keywords=”deal of the day sale today offer all”]