“ಪ್ರಧಾನಿ ಮೋದಿ ಅವರೇ, ತಮ್ಮ ತಂದೆಯ ಗುರುತಿನ ಬಗ್ಗೆ ಸಂಸದರೊಬ್ಬರನ್ನು ಪ್ರಶ್ನಿಸುವ ಸಂಸ್ಕಾರ ಅಥವಾ ಹಿಂದೂ ಸಂಪ್ರದಾಯದ ರೀತಿಯೇ ಇದು? ವೇದ, ಮಹಾಭಾರತ, ರಾಮಾಯಣ ಮತ್ತು ಭಗವದ್ಗೀತೆಗಳಲ್ಲಿ ಕಲಿಸುವುದು ಇದನ್ನೇ? ಇದನ್ನು ಮಾಡಿರುವುದು ನಿಮ್ಮ ಬಿಜೆಪಿ ಮುಖ್ಯಮಂತ್ರಿ. ಇದನ್ನು ಕೇಳಿದ ಬಳಿಕ ನಾಚಿಕೆಯಿಂದ ನನ್ನ ತಲೆ ತಗ್ಗಿದೆ ಮತ್ತು ಕಣ್ಣುಗಳಲ್ಲಿ ನೀರು ಸುರಿದಿದೆ. ಇದು ದೇಶಕ್ಕೆ ಒಳ್ಳೆಯದಲ್ಲ” ಎಂದು ಕೆಸಿಆರ್ ಅವರು ಶನಿವಾರ ಸಾರ್ವಜನಿಕ ಸಮಾವೇಶವೊಂದರಲ್ಲಿ ವಾಗ್ದಾಳಿ ನಡೆಸಿದ್ದಾರೆ.
“ಈ ರೀತಿ ಮಾತನಾಡುವವರು ಅಸ್ಸಾಂನ ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ? ತಾಳ್ಮೆ ಹೊಂದುವುದಕ್ಕೂ ಒಂದು ಮಿತಿ ಇರುತ್ತದೆ” ಎಂದು ಖಂಡಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಹಿಮಾಂತ, “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ನಾನು ನೀಡಿದ ಹೇಳಿಕೆಯಿಂದ ತೆಲಂಗಾಣ ಮುಖ್ಯಮಂತ್ರಿ ಕೆರಳಿದ್ದಾರೆ. ಆದರೆ ನಮ್ಮ ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಅವರಿಗೆ ಏನೂ ಅನಿಸಿಲ್ಲ. ಗಾಂಧಿ ಕುಟುಂಬವನ್ನು ಟೀಕಿಸಲು ಸಾಧ್ಯವಿಲ್ಲ ಎಂಬ ಈ ಮನಸ್ಥಿತಿಯನ್ನು ಬದಲಿಸುವ ಅಗತ್ಯವಿದೆ” ಎಂದು ಹೇಳಿದ್ದಾರೆ.
“ನಾವು ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದೇವೆ ಎಂದು ನಮ್ಮ ಸೇನೆ ಹೇಳಿದ್ದರೆ, ಅದರ ಅರ್ಥ ಅವರನ್ನು ಅದನ್ನು ಮಾಡಿದ್ದಾರೆ ಎಂದು. ಅದರಲ್ಲಿ ವಿವಾದ ಏನಿದೆ? ನೀವು ಜನರಲ್ ಬಿಪಿನ್ ರಾವತ್ ಅವರನ್ನು ನಂಬುವುದಿಲ್ಲವೇ? ಸೇನೆಯು ದಾಳಿ ನಡೆಸಿದರೆ ಎಂದು ಅವರು ಹೇಳಿದ್ದರೆ, ಅದು ನಡೆದಿದೆ ಎಂದೇ ಅರ್ಥ. ಅದಕ್ಕೆ ನಿಮಗೆ ದಾಖಲೆ ಏಕೆ ಬೇಕು? ಸೈನಿಕರನ್ನು ಅಗೌರವಿಸಬೇಡಿ. ಜನರು ಈ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಜನರು ಬೇರೆಯವರಿಗಾಗಿ ಬದುಕುತ್ತಿರುವುದಲ್ಲ, ಆದರೆ ಈ ದೇಶಕ್ಕಾಗಿ ಬದುಕುತ್ತಿರುವವರು” ಎಂದು ಹಿಮಾಂತ ಕಿಡಿಕಾರಿದ್ದಾರೆ.
“ಸರ್ಜಿಕಲ್ ದಾಳಿ ನಡೆಸಿದ್ದಕ್ಕೆ ಪುರಾವೆ ನೀಡುವಂತೆ ರಾಹುಲ್ ಗಾಂಧಿ ಕೇಳುತ್ತಿದ್ದಾರೆ. ಜನರಲ್ ಬಿಪಿನ್ ರಾವತ್ ಅವರ ನೇತೃತ್ವದಲ್ಲಿ ಪಾಕಿಸ್ತಾನದ ಮೇಲೆ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ನೀವು ರಾಜೀವ್ ಗಾಂಧಿ ಅವರ ಮಗ ಎಂದು ಸಾಬೀತುಪಡಿಸಲು ಬಿಜೆಪಿ ಎಂದಾದರೂ ಪುರಾವೆ ಕೇಳಿದೆಯೇ?” ಎಂದು ಹಿಮಾಂತ ವಾಗ್ದಾಳಿ ನಡೆಸಿದ್ದರು.
“ಸೇನೆಯನ್ನು ಪ್ರಶ್ನಿಸುವುದಕ್ಕಿಂತ ದೊಡ್ಡ ಅಪರಾಧ ಬೇರೆ ಇಲ್ಲ ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ. ನಾನು ರಾಹುಲ್ ಗಾಂಧಿ ಬಗ್ಗೆ ಹೇಳಿದ ಒಂದು ಮಾತು ಈಗ ವಿವಾದ ಸೃಷ್ಟಿಸಿದೆ. ಆದರೆ ಸರ್ಜಿಕಲ್ ದಾಳಿಯನ್ನು ರಾಹುಲ್ ಗಾಂಧಿ ಪ್ರಶ್ನಿಸಿದಾಗ ಈ ಜನರು ಏಕೆ ಮೌನವಾಗಿ ಇದ್ದರು? ಈಗ ಏಕೆ ಅವರು ಟ್ವೀಟ್ ಮಾಡುತ್ತಿದ್ದಾರೆ?” ಎಂದು ಹಿಮಾಂತ ಕೇಳಿದ್ದಾರೆ.
‘ರಾಹುಲ್ ಗಾಂಧಿಯವರ ಭಾಷೆ 1947ರ ಮೊದಲು ಮೊಹಮದ್ ಅಲಿ ಜಿನ್ನಾ ಅವರು ಬಳಸುತ್ತಿದ್ದ ಭಾಷೆಯಂತೆಯೇ ಇದೆ. ಹೀಗಾಗಿ ಜಿನ್ನಾ ಅವರ ಭೂತ ರಾಹುಲ್ ಗಾಂಧಿ ಅವರ ಶರೀರ ಪ್ರವೇಶಿಸಿದೆ ಎಂದು ಅನ್ನಿಸುತ್ತದೆ. ರಾಹುಲ್ ಗಾಂಧಿಯವರು ಆಧುನಿಕ ಕಾಲದ ಜಿನ್ನಾ ರೀತಿ ವರ್ತಿಸುತ್ತಿದ್ದಾರೆ,” ಎಂದು ಹಿಮಾಂತ ಅವರು ಟೀಕಿಸಿದ್ದರು.
Read more
[wpas_products keywords=”deal of the day sale today offer all”]