ಐಪಿಎಲ್ 2022 ಟೂರ್ನಿ ಸಲುವಾಗಿ ನಡೆಯುತ್ತಿರುವ 2 ದಿನಗಳ ಮೆಗಾ ಆಕ್ಷನ್‌ನ ಮೊದಲ ದಿನವಾದ ಶನಿವಾರ (ಫೆ.12) ಲಖನೌ ಸೂಪರ್ ಜಯಂಟ್ಸ್ ತಂಡ ಬರೋಬ್ಬರಿ 10 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಅವೇಶ್ ಖಾನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.
ಇದರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗರಿಷ್ಠ ಬೆಲೆ ಪಡೆದ ಅನ್ ಕ್ಯಾಪ್ಡ್ ಪ್ಲೇಯರ್ (ರಾಷ್ಟ್ರೀಯ ತಂಡದ ಪರ ಈವರೆಗೆ ಆಡದೇ ಇರುವ ಆಟಗಾರ) ಎಂಬ ಹೆಗ್ಗಳಿಕೆಗೆ ಅವೇಶ್ ಖಾನ್ ಭಾಜನರಾಗಿದ್ದಾರೆ. ಅಂದಹಾಗೆ ಇದೇ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದ ಆಲ್‌ರೌಂಡರ್ ಶಾರುಖ್ ಖಾನ್ ಅವರಿಗೆ ಬರೋಬ್ಬರಿ 9 ಕೋಟಿ ರೂ. ಲಭ್ಯವಾಗಿತ್ತು. ಆದರೆ, ಕೆಲ ಸಮಯದ ನಂತರ ಅವೇಶ್ ಖಾನ್ ಈ ದಾಖಲೆ ಮುರಿದಿದ್ದಾರೆ.
‘ಕ್ರೀಸ್ ಒಳಗೇ ಇದ್ದೇನೆ ಅಶ್ವಿನ್’, ಬಟ್ಲರ್ ಸಂದೇಶ!
ಐಪಿಎಲ್ 2021 ಟೂರ್ನಿಯಲ್ಲಿ ಆಡಿದ 16 ಪಂದ್ಯಗಳಿಂದ 24 ವಿಕೆಟ್‌ಗಳನ್ನು ಪಡೆದು ಲೀಗ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದ ಅವೇಶ್ ಖಾನ್ ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಮುಗಿಬಿದ್ದವು. 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಕೂಡ ಅಂತ್ಯದವರೆಗೂ ಬಿಡ್ಡಿಂಗ್ ವಾರ್ ನಡೆಸಿತ್ತು. ಆದರೆ, ಮುಲಾಜಿಲ್ಲದೆ ಕಿಸೆಯಿಂದ ಹಣ ಬಿಚ್ಚಿದ ಲಖನೌ ಸೂಪರ್ ಜಯಂಟ್ಸ್ ಯುವ ವೇಗಿಯನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
ಕಳೆದ ವರ್ಷ ಆಟಗಾರರ ಹರಾಜಿನಲ್ಲಿ ಕೃಷ್ಣಪ್ಪ ಗೌತಮ್ ದಾಖಲೆಯ 9.25 ಕೋಟಿ ರೂ.ಗಳ ಭಾರಿ ಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಸೇರಿದ್ದರು. ಈಗ ಅವೇಶ್ ಖಾನ್ ರಾಷ್ಟ್ರೀಯ ತಂಡದ ಪರ ಆಡದ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂದಹಾಗೆ ಐಪಿಎಲ್ 2022 ಆಕ್ಷನ್‌ನಲ್ಲಿ ಅವೇಶ್ ಖಾನ್ ಅವರ ಮೂಲ ಬೆಲೆ 20 ಲಕ್ಷ ರೂ. ಆಗಿತ್ತು.
ಮೊದಲ ದಿನ ಮಾರಾಟವಾದ 74 ಆಟಗಾರರ ಪಟ್ಟಿ ಇಲ್ಲಿದೆ!
ಲಖನೌ ಸೂಪರ್ ಜಯಂಟ್ಸ್ ತಂಡ ಹೀಗಿದೆ
- ಅಂಕಿತ್ ರಜಪೂತ್ (50 ಲಕ್ಷ ರೂ.)
- ಅವೇಶ್ ಖಾನ್ (10 ಕೋಟಿ ರೂ.)
- ಮಾರ್ಕ್ ವುಡ್ (7.5 ಕೋಟಿ ರೂ.)
- ಕೃಣಾಲ್ ಪಾಂಡ್ಯ (8.25 ಕೋಟಿ ರೂ.)
- ದೀಪಕ್ ಹೂಡ (5.75 ಕೋಟಿ ರೂ.)
- ಜೇಸನ್ ಹೋಲ್ಡರ್ (8.75 ಕೋಟಿ ರೂ.)
- ಮನೀಶ್ ಪಾಂಡೆ (4.6 ಕೋಟಿ ರೂ.)
- ಕ್ವಿಂಟನ್ ಡಿ’ಕಾಕ್ (6.75 ಕೋಟಿ ರೂ.)
ಹರಾಜಿಗೂ ಮುನ್ನ ಒಪ್ಪಂದ ಮಾಡಿಕೊಂಡ ಆಟಗಾರರು
- ಕೆ.ಎಲ್. ರಾಹುಲ್ (17 ಕೋಟಿ ರೂ.)
- ಮಾರ್ಕಸ್ ಸ್ಟೊಯ್ನಿಸ್ (9.2 ಕೋಟಿ ರೂ.)
- ರವಿ ಬಿಷ್ಣೋಯ್ (4 ಕೋಟಿ ರೂ.)
Read more
[wpas_products keywords=”deal of the day gym”]