Karnataka news paper

ಉಕ್ರೇನ್ ಗಡಿ ಸಂಘರ್ಷ: ‘ತೀವ್ರ ಬೆಲೆ ತೆರಬೇಕಾಗುತ್ತದೆ’ ಎಂದು ಪುಟಿನ್‌ಗೆ ಎಚ್ಚರಿಕೆ ಕೊಟ್ಟ ಬೈಡನ್


ಮಾಸ್ಕೋ: ಉಕ್ರೇನ್ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ಸಲುವಾಗಿ ಶನಿವಾರ ನಡೆದ ದೂರವಾಣಿ ರಾಜತಾಂತ್ರಿಕತೆ ಪ್ರಯತ್ನ ವಿಫಲವಾಗಿದೆ. ರಷ್ಯಾ ಪಡೆಗಳು ಉಕ್ರೇನ್ ಒಳಗೆ ನುಸುಳಲು ಪ್ರಯತ್ನಿಸಿದರೆ ಅದಕ್ಕೆ ತಕ್ಷಣ ಮತ್ತು ತೀವ್ರ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಎಚ್ಚರಿಕೆ ನೀಡಿದ್ದಾರೆ.

ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಜತೆ ಸಂಘರ್ಷಕ್ಕೆ ಎಡೆಮಾಡಿಕೊರುವಂತಹ ಪ್ರಚೋದನಾಕಾರಿ ನಡೆಯನ್ನು ಅನುಸರಿಸಲು ಮಾಸ್ಕೋ ಯೋಚಿಸುತ್ತಿದೆ ಎಂಬ ಪಶ್ಚಿಮದ ದೇಶಗಳ ಆರೋಪದ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹರಿಹಾಯ್ದಿದ್ದಾರೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರಾನ್ ಜತೆ ಮಾತುಕತೆಯ ಕುರಿತು ರಷ್ಯಾ ಪತ್ರಿಕೆಯೊಂದು ವರದಿ ಮಾಡಿದೆ.
ಯುದ್ಧ ನಡೆದರೆ ಎಲ್ಲ ಅಲ್ಲೋಲಕಲ್ಲೋಲ! ಉಕ್ರೇನ್ ಅನ್ನು ನಿಭಾಯಿಸಲು ರಷ್ಯಾ ಮುಂದಿವೆ 3 ಆಯ್ಕೆಗಳು

ಪುಟಿನ್ ಮತ್ತು ಬೈಡನ್ ಜತೆ ಶನಿವಾರ ನಡೆದ ಸಂಭಾಷಣೆ ಬಳಿಕ ಮಾತನಾಡಿದ ಕ್ರಿಮಿಯಾದ ಉನ್ನತ ವಿದೇಶಾಂಗ ನೀತಿ ಸಲಹೆಗಾರ ಯುರಿ ಉಶಾಕೋವ್, “ಉನ್ಮಾದವು ಅದರ ತುತ್ತತುದಿಗೆ ತಲುಪಿದೆ” ಎಂದು ಟೀಕಿಸಿದ್ದಾರೆ.

ತನ್ನ ಪಶ್ಚಿಮ ಭಾಗದಲ್ಲಿರುವ ನೆರೆಯ ದೇಶ ಉಕ್ರೇನ್ ಗಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಸೇನಾ ಪಡೆಗಳನ್ನು ನಿಯೋಜನೆ ಮಾಡಿದೆ. ರಷ್ಯಾ ಸೇನೆಯು ಯಾವಾಗ ಬೇಕಾದರೂ ಒಳ ನುಸುಳುವಿಕೆ ಆರಂಭಿಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಕಪ್ಪು ಸಮುದ್ರದಲ್ಲಿ ರಷ್ಯಾ ತನ್ನ ಅತ್ಯಂತ ದೊಡ್ಡ ನೌಕಾ ಸಮರಾಭ್ಯಾಸವನ್ನು ಆರಂಭಿಸಿರುವುದು ಆತಂಕವನ್ನು ಹೆಚ್ಚಿಸಿದೆ.

“ರಷ್ಯಾವು ಉಕ್ರೇನ್ ಒಳಗೆ ಮತ್ತಷ್ಟು ಅತಿಕ್ರಮಣ ನಡೆಸಿದರೆ, ಅಮೆರಿಕವು ನಮ್ಮ ಮಿತ್ರ ದೇಶಗಳು ಹಾಗೂ ಪಾಲುದಾರರ ಜತೆಗೆ ನಿರ್ಣಾಯಕವಾಗಿ ಪ್ರತಿಕ್ರಿಯೆ ನೀಡಲಿದೆ. ರಷ್ಯಾ ಮೇಲೆ ತ್ವರಿತ ಮತ್ತು ತೀವ್ರ ಬೆಲೆಯನ್ನು ಹೊರಿಸುತ್ತೇವೆ” ಎಂದು ಬೈಡನ್ ಅವರು ಪುಟಿನ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ಶ್ವೇತಭವನ ತಿಳಿಸಿದೆ.
ಉಕ್ರೇನ್‌ ಮೇಲೆ ಆಕ್ರಮಮಣಕ್ಕೆ ರಷ್ಯಾ ಸನ್ನದ್ಧ : ಎಚ್ಚರಿಕೆ ನೀಡಿದ ಅಮೆರಿಕ

ರಾಜತಾಂತ್ರಿಕತೆಯಲ್ಲಿ ತೊಡಗಲು ಅಮೆರಿಕ ಸಿದ್ಧವಾಗಿತ್ತು ಎಂದಿರುವ ಬೈಡನ್, “ನಾವು ಬೇರೆ ಸನ್ನಿವೇಶಗಳಿಗೂ ಅಷ್ಟೇ ಸಮವಾಗಿ ಸಿದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ. ರಷ್ಯಾ ಮತ್ತು ಅಮೆರಿಕ ನಡುವಿನ ಮಾತುಕತೆ ‘ವೃತ್ತಿಪರ ಮತ್ತು ಅರ್ಥಪೂರ್ಣ’ವಾಗಿತ್ತು. ಒಂದು ಗಂಟೆಗೂ ಹೆಚ್ಚು ಸಮಯ ಈ ಮಾತುಕತೆ ಮುಂದುವರಿದಿತ್ತು. ಆದರೆ ಅದರಿಂದ ಯಾವುದೇ ಮೂಲಭೂತ ಬದಲಾವಣೆಯ ಫಲಿತಾಂಶ ಹೊರಬಂದಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಕ್ರೇನ್ ಒಳಗೆ ನುಸುಳಲು ಸಲುವಾಗಿ ನೆಪ ಹುಡುಕಲು ರಷ್ಯಾ ಯಾವುದಾದರೂ ಸುಳ್ಳು ನಾಟಕವನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅಮೆರಿಕ ನೀಡಿರುವ ಎಚ್ಚರಿಕೆಯನ್ನು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಪುನರುಚ್ಚರಿಸಿದ್ದಾರೆ.

“ರಷ್ಯಾವು ತನ್ನ ಕಡೆಯಿಂದ ಪ್ರಚೋದನೆ ಅಥವಾ ಘಟನೆಯನ್ನು ಸೃಷ್ಟಿಸಿದರೆ ಯಾರೂ ಅಚ್ಚರಿ ಪಡಬೇಕಿಲ್ಲ. ಬಳಿಕ ಅದು ತಾನು ಇದುವರೆಗೂ ಯೋಜಿಸಿರುವ ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುವ ಹೆಜ್ಜೆ ಇರಿಸಲಿದೆ” ಎಂದು ರಷ್ಯಾದ ವಿದೇಶಾಂಗ ಕಾರ್ಯದರ್ಶಿ ಸರ್ಜೈ ಲವ್ರೊವ್ ಜತೆ ಶನಿವಾರ ಮಾತುಕತೆ ನಡೆಸಿದ ಬಳಿಕ ಬ್ಲಿಂಕೆನ್ ಹೇಳಿದ್ದಾರೆ.
ರಷ್ಯಾ- ಉಕ್ರೇನ್ ಗಡಿಯಲ್ಲಿ ಉದ್ವಿಗ್ನತೆ, ಯುದ್ಧದ ಭೀತಿ: ಏನಿದು ಸಂಘರ್ಷ? ಇದಕ್ಕೆ ಕಾರಣವೇನು?

ಉತ್ತರ ಪೆಸಿಫಿಕ್‌ನಲ್ಲಿ ಕುರಿಲ್ ದ್ವೀಪದ ಸಮೀಪ ತನ್ನ ಜಲ ಪ್ರದೇಶದ ಒಳಗೆ ದಾಟಿಬಂದ ಅಮೆರಿಕದ ಜಲಾಂತರ್ಗಾಮಿ ನೌಕೆಯನ್ನು ತಾನು ಬೆನ್ನಟ್ಟಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ಹೇಳಿರುವುದು ವಾತಾವರಣದ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ರಷ್ಯಾ ಜಲ ಗಡಿಯೊಳಗೆ ಪ್ರವೇಶಿಸಿರುವುದನ್ನು ಅಮೆರಿಕದ ಇಂಡೋ- ಪೆಸಿಫಿಕ್ ಕಮಾಂಡ್ ನಿರಾಕರಿಸಿದೆ.

ಬೈಡನ್ ಜತೆಗಿನ ಮಾತುಕತೆ ನಂತರ ಪುಟಿನ್ ಅವರು ಮ್ಯಾಕ್ರಾನ್ ಜತೆ ಸುಮಾರು ಎರಡು ಗಂಟೆ ಸಂಭಾಷಣೆ ನಡೆಸಿದ್ದಾರೆ.



Read more

[wpas_products keywords=”deal of the day sale today offer all”]