Karnataka news paper

ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ : ಮೈಸೂರಿನಲ್ಲಿ ಅಯೂಬ್‌ ಖಾನ್‌ ಸೆರೆ


ಮೈಸೂರು : ಜೈನ ಸಮಾಜದ ಆರಾಧ್ಯ ದೈವ ಗೊಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ದಿ ಇಂಡಿಯನ್‌ ನ್ಯೂ ನ್ಯಾಷನಲ್‌ ಪಾರ್ಟಿ ಅಧ್ಯಕ್ಷ ಅಯೂಬ್‌ ಖಾನ್‌ ಅವರನ್ನು ಮೈಸೂರು ನಗರದ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಯೂಬ್‌ ಖಾನ್‌ ವಿರುದ್ಧ ದಿಗಂಬರ ಜೈನ ಸಮಾಜ ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ದೂರು ನೀಡಿತ್ತು. ಗೊಮ್ಮಟೇಶ್ವರ ಕುರಿತು ಅವ ಹೇಳನಕಾರಿ ಹೇಳಿಕೆ ನೀಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಯೂಬ್‌ ಖಾನ್‌ ವಿರುದ್ಧ 295 ಎ ಅಡಿ ಪ್ರಕರಣ ದಾಖಲಿಸಿದ್ದರೆ. ಸುದ್ದಿ ಪ್ರಸಾರ ಮಾಡಿದ ಖಾಸಗಿ ವಾಹಿನಿ ಮುಖ್ಯಸ್ಥ ವಿರುದ್ಧ 505,(2) ಅಡಿ ಪ್ರಕರಣ ದಾಖಲಿಸಿದ್ದಾರೆ. ಬಂಧನದ ಬಳಿಕ ಅಯೂಬ್ನನ್ನು ಮೈಸೂರಿನ 2ನೇ ಜೆಎಂಎಫ್ಸಿ ಕೋರ್ಟ್ ಜಡ್ಜ್ ಶ್ರೀಶೈಲಾ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ, ಫೆಬ್ರವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಬಾಹುಬಲಿಗೆ ಮಾಡಿದ ಅಪಮಾನದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ; ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಆಯೂಬ್ ಖಾನ್ ಹೇಳಿದ್ದೇನು?
ಮೈಸೂರಿನ ಸ್ಥಳೀಯ ನ್ಯೂಸ್ ಚಾನೆಲ್‌ನಲ್ಲಿ ಹಿಜಾಬ್ ಪರ ಹೇಳಿಕೆ ನೀಡುವಾಗ ಆಯೂಬ್ ಖಾನ್ ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಶ್ರವಣಬೆಳಗೊಳದ ಬೆಟ್ಟದ ಮೇಲೆ ಗೊಮ್ಮಟೇಶ್ವರನನ್ನು ನಿಲ್ಲಿಸಿದ್ದೀರಿ, ನೀವು ಮೊದಲು ಗೊಮ್ಮಟೇಶ್ವರಿಗೆ ಚಡ್ಡಿಹಾಕಿ.

ನಿಮಗೇನಾದರೂ ಈ ದೇಶದ ಮೇಲೆ ಅನುಕಂಪ ಇದ್ದರೆ ಮೊದಲು ಅಶ್ಲೀಲವಾಗಿ ನಿಂತಿರತಕ್ಕಂತ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜ ಆಕ್ರೋಶ ಹೊರ ಹಾಕಿದ್ದರು.

ಈ ಹೇಳಿಕೆ ಜೈನ ಧರ್ಮದ ಅನುಯಾಯಿಯಗಳಾದ ನಮಗೆ ನೋವಾಗಿದೆ. ನಾವು ಆರಾಧಿಸುವ ಬಾಹುಬಲಿಸ್ವಾಮಿಗೆ ಅವಹೇಳನಕಾರಿಯಾಗಿ ನಿಂದಿಸಿರುವುದು ಸರಿಯಲ್ಲ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಮೈಸೂರು ನಿವಾಸಿ ಆಯೂಬ್ ಖಾನ್ ಮೇಲೆ ಧಾರ್ಮಿಕ ನಿಂದನೆ, ಜಾತಿನಿಂದನೆ ಅಪರಾಧದಡಿ ಕಾನೂನು ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಜೈನ ಸಮಾಜದ ಮುಖಂಡರು ಮಂಡ್ಯ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಆಯೂಬ್ ಖಾನ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.



Read more

[wpas_products keywords=”deal of the day sale today offer all”]