Karnataka news paper

ಜೈಪುರದ ಕಾಲೇಜಿನಲ್ಲಿ ಹಿಜಾಬ್, ಬುರ್ಖಾ ಧರಿಸಿದ ವಿದ್ಯಾರ್ಥಿನಿಯರ ಪ್ರವೇಶಕ್ಕೆ ನಿರ್ಬಂಧ


The New Indian Express

ಜೈಪುರ: ಕರ್ನಾಟಕದಲ್ಲಿ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಈ ಬೆನ್ನಲ್ಲೇ ರಾಜಸ್ಥಾನದ ಜೈಪುರದ ಖಾಸಗಿ ಕಾಲೇಜಿನಲ್ಲಿ ಇಂಥಹದ್ದೇ ಒಂದು ವಿವಾದ ಪ್ರಾರಂಭವಾಗಿದೆ. 

ಹಿಜಾಬ್, ಬುರ್ಖಾ ಧರಿಸಿ ತರಗತಿಗಳಿಗೆ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಕಾಲೇಜು ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಕಳೆದ 4-5 ದಿನಗಳಿಂದಷ್ಟೇ ಯುವತಿಯರು ಈ ರೀತಿಯಾಗಿ ಹಿಜಾಬ್, ಬುರ್ಖಾ ಧರಿಸಿ ಆಗಮಿಸುತ್ತಿದ್ದಾರೆ ಎಂದು ಹೇಳಿದ್ದರೆ, ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಕಾರ ಕಳೆದ 3 ವರ್ಷಗಳಿಂದ ಬುರ್ಖಾ ಧರಿಸಿ ಬರಲಾಗುತ್ತಿದೆ. ಆದರೆ ಯಾರೂ ಆಗೆಲ್ಲಾ ಹಿಜಾಬ್, ಬುರ್ಖಾ ಧರಿಸುತ್ತಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ ಆದರೆ ಈಗ ಏಕಾಏಕಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ನಮ್ಮ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಅಷ್ಟೆ’, ಸೋಷಿಯಲ್ ಮೀಡಿಯಾದಲ್ಲಿ ವಿವರ ಬಹಿರಂಗಗೊಂಡ ವಿದ್ಯಾರ್ಥಿನಿಯರ ಪೋಷಕರ ಬೇಡಿಕೆ

ಪೊಲೀಸರು ಕಾಲೇಜಿಗೆ ಬಂದು ಮಧ್ಯಪ್ರವೇಶಿಸಿದ್ದಾರೆ.  “ವಿದ್ಯಾರ್ಥಿನಿಯರು ಬುರ್ಖಾ ಧರಿಸುವುದು ವಸ್ತ್ರ ಸಂಹಿತೆಯನ್ನು ಉಲ್ಲಂಘಿಸುತ್ತದೆ ಈ ನಿಯಮ ಕಳೆದ 6-7 ವರ್ಷಗಳಿಂದ ಜಾರಿಯಲ್ಲಿದೆ, ಯುವತಿಯರು ಹಿಜಾಬ್ ಧರಿಸಿ ಬರುವುದರಿಂದ ಇತರ ವಿದ್ಯಾರ್ಥಿಗಳಿಗೂ ಸಮವಸ್ತ್ರ ನಿಯಮ ಪಾಲನೆ ಮಾಡದೇ ಇರುವುದಕ್ಕೆ ಉತ್ತೇಜನ ಸಿಗುತ್ತದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. 

ಕೆಲವು ವಿದ್ಯಾರ್ಥಿನಿಯರು 3-4 ದಿನಗಳಿಂದ ಹಿಜಾಬ್, ಬುರ್ಖಾ ಧರಿಸಿ ತರಗತಿಗಳಿಗೆ ಬರಲು ಪ್ರಾರಂಭಿಸಿದರು. ಇದನ್ನು ಕಂಡು ಇನ್ನೂ ಕೆಲವು ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲಿಸದೇ ಬರುವುದಕ್ಕೆ ಪ್ರಾರಂಭಿಸಿದರು ಎಂದು ಕಸ್ತೂರಿ ದೇವಿ ಕಾಲೇಜಿನ ಸಹಾಯಕ ನಿರ್ದೇಶಕರಾಗಿರುವ ಸುಮಿತ್ ಶರ್ಮಾ ಹೇಳಿದ್ದಾರೆ. ಹಿಜಾಬ್, ಬುರ್ಖಾ ಧರಿಸಿ ಬರಲು ಬಿಡದ ಕಾಲೇಜಿನ ವಿರುದ್ಧ ವಿದ್ಯಾರ್ಥಿನಿಯರು, ಪೋಷಕರು ಪ್ರತಿಭಟನೆ ಪ್ರಾರಂಭಿಸಿದ್ದಾರೆ. 



Read more

[wpas_products keywords=”deal of the day”]