ಹಿಜಾಬ್ ಸಂಘರ್ಷದ ಹಿನ್ನೆಲೆ, ಪರಿಸ್ಥಿತಿ ಪರಿಶೀಲಿಸಿ ಪಿಯು ಕಾಲೇಜು ಆರಂಭಿಸಲು ತೀರ್ಮಾನ – ಬೊಮ್ಮಾಯಿ
ಈ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳು, ಎಸ್ಪಿ ಮತ್ತು ಇತರ ಉನ್ನತ ಅಧಿಕಾರಿಗಳು ಕೆಲವು ಕಡೆ ಧಾರ್ಮಿಕ ಮುಖಂಡರ ಸಭೆ ನಡೆಸಿದ್ದಾರೆ. ಹಿಜಾಬ್ ವಿವಾದ ಮರುಕಳಿಸಬಹುದಾದ ಸೂಕ್ಷ್ಮ ಪ್ರದೇಶಗಳ ಮಾಹಿತಿಯನ್ನು ಪಡೆದಿದ್ದಾರೆ. ಜತೆಗೆ ಪ್ರಚೋದನೆ ನೀಡಿದರೆ, ಹಿಂಸೆಗೆ ಕಾರಣವಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಕಠಿಣ ಎಚ್ಚರಿಕೆಯನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಕೆಲವು ಕಡೆ ಭಾನುವಾರ ಸಭೆಗಳನ್ನು ಆಯೋಜಿಸಲಾಗಿದೆ.
ಶಾಲೆ ಕಾಲೇಜುಗಳಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ಹೈಕೋರ್ಟ್ ಆದೇಶವನ್ನು ಪರಿಪೂರ್ಣವಾಗಿ ಜಾರಿ ಮಾಡಲಾಗುವುದು, ಎಲ್ಲರೂ ಸಹಕರಿಸಬೇಕು.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಜಿಲ್ಲೆಗಳ ಪ್ರತಿಯೊಂದು ಪೊಲೀಸ್ ಠಾಣೆಗೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದ್ದು, ಠಾಣೆ ವ್ಯಾಪ್ತಿಯ ಶಾಲೆಗಳ ಮೇಲೆ ಕಣ್ಣಿಡುವಂತೆ ಆದೇಶ ನೀಡಲಾಗಿದೆ.
ಈ ಜಿಲ್ಲೆಯಲ್ಲಿ ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಯಾವನಾದರೂ ಗಲಾಟೆಗೆ ಕಾರಣನಾದ್ರೆ ಯಾಕಾದ್ರೂ ತಪ್ಪು ಮಾಡಿದೆ ಅನ್ನಿಸುವ ರೀತಿ ಮಾಡ್ತೀನಿ. ಧಮ್. ಇದ್ರೆ ಯಾರ ಕೈಲಿ ಹೇಳಿಸ್ತಿರೋ ಹೇಳಿಸಿ, ಅದನ್ನು ಕೂಡ ನೋಡೇಬಿಡ್ತೀನಿ ಎಂದು ರಾಮನಗರ ಜಿಲ್ಲಾ ಎಸ್ಪಿ ಕೆ.ಸಂತೋಷ್ ಬಾಬು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಅಧಿಕಾರಿಗಳ ಮನವಿ
– ಕೋರ್ಟ್ ಸೂಚಿಸಿದಂತೆ ಮುಂದಿನ ಆದೇಶದವರೆಗೆ ನಿಗದಿತ ಸಮವಸ್ತ್ರದಲ್ಲೇ ಬನ್ನಿ. ಧಾರ್ಮಿಕ ಸಂಕೇತಗಳನ್ನು ಧರಿಸಬೇಡಿ
– ಧಾರ್ಮಿಕ ಸಂಕೇತ ಧರಿಸಿ ಬಂದು ವಿವಾದವಾದರೆ ಪೊಲೀಸ್ ನಿಯಮಗಳಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಖಚಿತ
– ಯಾವ ಮುಲಾಜು, ಫೋನ್ ಕರೆ, ವಶೀಲಿಗಳಿಗೂ ಬಾಗುವುದಿಲ್ಲ.
ಹಿಜಾಬ್ ಕೇಸರಿ ಸಂಘರ್ಷ: ಇಕ್ಕಟ್ಟಿನಲ್ಲಿ ಕಾಂಗ್ರೆಸ್, ಮುಖಂಡರಲ್ಲಿ ಭಿನ್ನ ನಿಲುವು!
– ಹೆತ್ತವರು ಶಾಲೆಗೆ ಕಳುಹಿಸುವುದು ಉತ್ತಮ ಭವಿಷ್ಯಕ್ಕಾಗಿ, ನಿಯಮ ಮುರಿದು ಅವರ ಕನಸಿಗೆ ಕೊಳ್ಳಿ ಇಡಬೇಡಿ.
– ಪೊಲೀಸ್ ಕೇಸುಗಳಾದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುವ ಅಪಾಯವಿರುತ್ತದೆ. ಹಾಗಾಗಿ ವಿವೇಚನೆ ಬಳಸಿ.
– ಕುಮ್ಮಕ್ಕು ನೀಡುವವರು, ಜಾಲತಾಣದಲ್ಲಿಪ್ರಚೋದನೆ ನೀಡುವವರ ಮೇಲೆ ರೌಡಿ ಶೀಟ್ ತೆಗೆಯಲಾಗುತ್ತದೆ.
ಹೊಸ ಸಮಸ್ಯೆಗಳೇನು?
– ಕೆಲವು ಶಾಲೆಗಳಲ್ಲಿ ಹಿಜಾಬ್ ಬಗ್ಗೆ ವಿವಾದ ಇರಲಿಲ್ಲ. ಇಲ್ಲಿಈಗ ಹಿಜಾಬ್ ಧರಿಸಬಹುದೇ ಬಾರದೆ ಎಂಬ ಗೊಂದಲ ಕೆಲವು ಕಡೆ ಎದುರಾಗುವ ಸಾಧ್ಯತೆ ಇದೆ.
– ಇಲ್ಲಿವರೆಗೆ ಹೈಸ್ಕೂಲ್ ಮಟ್ಟದಲ್ಲಿಹೆಚ್ಚು ವಿವಾದ ಕಾಣಿಸಿಕೊಂಡಿರಲಿಲ್ಲ. ಸೋಮವಾರ ಶಾಲೆ ಆರಂಭವಾದಾಗ ಪರಿಸ್ಥಿತಿ ಹೇಗಿರುತ್ತದೆ ಎಂಬ ಸ್ಪಷ್ಟತೆ ಇಲ್ಲ.
Read more
[wpas_products keywords=”deal of the day sale today offer all”]