Karnataka news paper

ನಾನು, ಆನಂದ್ ಸಿಂಗ್ ಡಬಲ್ ಇಂಜಿನ್ ಮಂತ್ರಿಗಳು: ಶ್ರೀರಾಮುಲು


ವಿಜಯನಗರ: ಸಚಿವ ಆನಂದ್ ಸಿಂಗ್ ಮತ್ತು ನಾನು ಡಬಲ್ ಇಂಜಿನ್ ಮಂತ್ರಿಗಳಿದ್ದಂತೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ 26 ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗೂ ಚಿನ್ನದ ಪದಕ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

ಕೇಂದ್ರದಲ್ಲಿ ಪ್ರಧಾನಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಿಜೆಪಿಯ ಡಬಲ್ ಇಂಜಿನ್ ಸರಕಾರದಂತೆ ಇಲ್ಲಿ ನಾವಿಬ್ಬರು ಡಬಲ್ ಇಂಜಿನ್ ಮಂತ್ರಿಗಳು. ಸದಾ ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ. ಇಬ್ಬರೂ ಅಣ್ಣ ತಮ್ಮಂದಿರಂತೆ ಸೋದರ ಸಂಬಂಧವಿದೆ. ನಾವಿಬ್ಬರು ಈ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮಿಬ್ಬರ ಮನಸ್ಥಿತಿ ಒಂದೆ. ಅವರ ಎಲ್ಲ ಕೆಲಸಗಳಲ್ಲಿ ಶ್ರೀರಾಮ ಚಂದ್ರನಂತೆ ನಾನಿರುವೆ. ರಾಮ ಲಕ್ಷ್ಮಣರಂತೆ ಕೆಲಸ ಮಾಡುತ್ತೇವೆ. ಕಷ್ಟದಲ್ಲಿದ್ದಾಗ ಇಬ್ಬರು ಜತೆಯಾಗಿ ಕೆಲಸ ಮಾಡುತ್ತೇವೆ ಎಂದರು.

ಹಂಪಿ ಸ್ಮಾರಕಗಳ ಭದ್ರತೆಗೆ ಸಿಬ್ಬಂದಿ ಕೊರತೆ..! ಸರ್ಕಾರದ ಅನಾದರಕ್ಕೆ ಹೊಣೆ ಯಾರು..?

ಅವಳಿ ಜಿಲ್ಲೆಗಳಲ್ಲಿ ಆನಂದ್ ಸಿಂಗ್ ಉಸ್ತುವಾರಿಯಾಗಿದ್ದಾಗ ಉತ್ತಮ ಕೆಲಸ ಮಾಡಿದ್ದಾರೆ. ಅವರು ಬದ್ದತೆ ಹೊಂದಿರುವ ರಾಜಕಾರಣಿ. ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಅಖಂಡ ಮತ್ತು ಅವಳಿ ಜಿಲ್ಲೆಗಳ ಉಸ್ತುವಾರಿ ಇದ್ದಾಗ ಎರಡೂ ಜಿಲ್ಲೆಗಳು ಎಂದಿಗೂ ಅಭಿವೃದ್ಧಿ ಆಗಬೇಕೆಂದು ಪ್ರಸ್ತಾಪಿಸುತ್ತಿದ್ದರು. ಈ ಭಾಗದ ಅಭಿವೃದ್ಧಿ ಕನಸಿನಿಂದ ವಿಜಯನಗರ ಜಿಲ್ಲೆ ಮಾಡಿದ್ದಾರೆ. ಇದರಲ್ಲಿ ಅವರ ಸ್ವಾರ್ಥವಿಲ್ಲ. ಜನರಿಗಾಗಿ ಜಿಲ್ಲೆಗೆ ಬಜೆಟ್‌ನಲ್ಲಿ ಅನುದಾನ ಹೆಚ್ಚಿಗೆ ನೀಡಬೇಕು ಎಂದು ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ. ಅವರಿಗೆ ಜನರು ಶಕ್ತಿ ತುಂಬಬೇಕು ಎಂದರು.

ಸರಕಾರದಲ್ಲಿ ಅವಳಿ ಜಿಲ್ಲೆ ಪ್ರಮುಖ

2008ರಲ್ಲಿ ರಾಜ್ಯ ಬಿಜೆಪಿ ಸರಕಾರ ರಚನೆಗೆ ಬಳ್ಳಾರಿ ಜಿಲ್ಲೆ ಪ್ರಮುಖ ಕಾರಣವಾಗಿತ್ತು. ಈಗಲೂ ಕೂಡ ಬಿಜೆಪಿ ಸರಕಾರ ಬರಲು ಬಳ್ಳಾರಿ-ವಿಜಯನಗರ ಜಿಲ್ಲೆ ಪ್ರಮುಖ ಪಾತ್ರ ವಹಿಸಿವೆ. ಸಿಎಂ ಮತ್ತು ಸಚಿವರು ಆನಂದ್ ಸಿಂಗ್ ಮಾತು ತೆಗೆಯಲ್ಲ. ಅವರು ಕೇಳಿದರೆ ಎಲ್ಲರು ಒಕೆ ಅನ್ನುತ್ತಾರೆ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, ಶ್ರೀರಾಮುಲು ನನ್ನ ರಾಜಕೀಯ ಗುರುಗಳು. ನಾವಿಬ್ಬರು ರಾಮ ಲಕ್ಷ್ಮಣ ಇದ್ದಂತೆ. ಡಬಲ್ ಎಂಜಿನ್ ಸೇರಿದಾಗ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗುತ್ತದೆ. ಇಬ್ಬರು ಜತೆಗೂಡಿ ಅವಳಿ ಜಿಲ್ಲೆಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ ಎಂದರು.

ಶ್ರೀರಾಮುಲು ನನಗೆ ರಾಜಕೀಯಕ್ಕೆ ಬರುವ ಮುಂಚೆ ಆತ್ಮೀಯರು. ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಶ್ರೀರಾಮುಲು ಕಾರಣ. ಜನಾರ್ಧನ ರೆಡ್ಡಿ ಅವರು ಬಂಗಾರ ಕಂಡು ಹಿಡಿಯುವರು ಇದ್ದಂತೆ. ನನ್ನನ್ನು ಗುರುತಿಸಿ ಒತ್ತಾಯ ಮಾಡಿ ರಾಜಕೀಯದಲ್ಲಿ ಬೆಳೆಸಿದ್ದಾರೆ. ವಿರೂಪಾಕ್ಷನ ಕೃಪೆಯಿಂದ ಅಂದಿನಿಂದ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಪುನೀತ್ ಹೆಸರು ನಾಮಕರಣ ಮಾಡಿರುವ ವೃತ್ತವನ್ನು ಅವರ ಹೆಸರಿನಿಂದಲೇ ಕರೆಯಬೇಕು. ರಾಜಕೀಯ ಅಧಿಕಾರ ಶಾಶ್ವತವಲ್ಲ. ಮನುಷ್ಯ ಕೂಡ ಅಲ್ಲ. ಪವರ್ ಸ್ಟಾರ್ ಪುನೀತ್ ಅವರನ್ನು ಕೂಡ ಕಳೆದುಕೊಂಡಿದ್ದೇವೆ ಎಂದು ಸ್ಮರಿಸಿದರು.

ಅಖಂಡ ಜಿಲ್ಲೆ ವಿಭಜನೆಗೆ ರಾಜಕೀಯ ಹಿಡಿತದ ಸಲುವಾಗಿ ಕೆಲವರು ಒಪ್ಪಲ್ಲ. ಆದರೆ, ರಾಮುಲು ಅವರು ವಾಸ್ತವವನ್ನು ಅರ್ಥೈಸಿಕೊಂಡು ಮುಕ್ತವಾಗಿ ಜಿಲ್ಲೆಯ ಜನರಿಗೆ ಆಗುತ್ತಿದ್ದ ತೊಂದರೆ ಬಗ್ಗೆ ಮತಾಡಿದ್ದಾರೆ. ಕೊರೊನಾ ಸಂಕಷ್ಟದ ಮಧ್ಯೆಯೂ ಸಮರ್ಪಕವಾಗಿ ಸಾರಿಗೆ ಇಲಾಖೆ ನಿರ್ವಹಿಸುತ್ತಿದ್ದಾರೆ. ಸದಾ ಓಡಾಡಿ ಕೆಲಸ ಮಾಡುತ್ತಾರೆ. ರಾಮುಲು ಅವರಷ್ಟು ಕಮಿಟ್ ಮೆಂಟ್ ನನಗಿಲ್ಲ. ಸಣ್ಣ ಕಾರ್ಯಕರ್ತರ ಕಾರ್ಯಕ್ರಮಗಳಿಗೂ ಹೋಗುತ್ತಾರೆ. ಜನರೊಂದಿಗೆ ಬೆರೆಯುವ ರಾಮುಲು ಅವರ ಗುಣವನ್ನು ನಾನು ಕಲಿಯಬೇಕಿದೆ. ಎರಡು ಜಿಲ್ಲೆಯ ಈ ರಾಜ್ಯದ ದೊಡ್ಡ ಶಕ್ತಿ. ಒಂದು ಬಂಡಿಗೆ ಎರಡು ಗಾಲಿ. ಒಟ್ಟಾಗಿ ಸೇರಿ ಎರಡು ಜಿಲ್ಲೆಗಾಗಿ ಹೋರಾಡುವ ಶಪಥ ಮಾಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಇಬ್ಬರು ಹಿಂದೆ ಹೋಗಲ್ಲ ಎಂದರು.

ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ತುರ್ತು ಕೆಲಸಗಳತ್ತ ಹೆಚ್ಚಿನ ಆದ್ಯತೆ: ಸಚಿವೆ ಶಶಿಕಲಾ ಜೊಲ್ಲೆ

ಚಾಲಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಪಘಾತ ರಹಿತ ಸೇವೆಯನ್ನು ಗುರುತಿಸಿ ಹೊಸಪೇಟೆ ಘಟಕದ ಕೆ.ಭಾಷಾ ಸಾಹೇಬ್ ಅವರಿಗೆ 2019 ನೇ ಸಾಲಿನ ಮತ್ತು ಹಡಗಲಿ ಘಟಕದ ಟಿ.ಎಚ್.ಶಿವಣ್ಣ ಅವರಿಗೆ 2018ನೇ ಸಾಲಿನ ಚಿನ್ನದ ಪದಕವನ್ನು ಸಚಿವ ಶ್ರೀರಾಮುಲು ಪ್ರದಾನ ಮಾಡಿದರು.



Read more

[wpas_products keywords=”deal of the day sale today offer all”]