The New Indian Express
ಬೆಂಗಳೂರು: ನಗರದ ರಸ್ತೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಮತ್ತು ಜನರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಮೂಡಿಸಲು, ಬೆಂಗಳೂರಿನ ಅಗ್ಲಿ ಇಂಡಿಯನ್(Ugly Indian) ತಂಡವು ಮಹದೇವಪುರ ಕ್ಷೇತ್ರದಲ್ಲಿ 500 ಕಿಲೋ ಮೀಟರ್ ಸವಾಲನ್ನು ಆರಂಭಿಸಿದ್ದಾರೆ.
ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಸರಳ ತಂತ್ರಜ್ಞಾನಗಳನ್ನು ಬಳಸಿಕೊಂಡು, 500 ಕಿಲೋ ಮೀಟರ್ ವರೆಗೆ ನಗರದ ರಸ್ತೆಗಳನ್ನು ಗೂಗಲ್ ಮ್ಯಾಪ್ ಮಾಡಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ, 20-30 ಕಿಲೋಮೀಟರ್ ಮುಖ್ಯ ರಸ್ತೆಗಳನ್ನು ಪಟ್ಟಿಗೆ ತೆಗೆದುಕೊಳ್ಳಲಾಗಿದ್ದು, ವಿವರಗಳನ್ನು ಶೀಘ್ರದಲ್ಲೇ ಸಾರ್ವಜನಿಕ ಪರಿಶೀಲನೆ ಮತ್ತು ರೇಟಿಂಗ್‌ಗಾಗಿ ತೆರೆಯಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಅಗ್ಲಿ ಇಂಡಿಯನ್ ತಂಡ ಸದ್ಯಕ್ಕೆ ಬೆಂಗಳೂರಿನ ರಸ್ತೆಗಳನ್ನು ನಗರ ವ್ಯಾಪ್ತಿಯಲ್ಲಿ ಮ್ಯಾಪ್ ಮಾಡಿದ್ದು, ಕ್ರಮೇಣ ರಿಂಗ್ ರೋಡ್‌ನ ಆಚೆಗೂ ವಿಸ್ತರಿಸಲಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಗರವು ಸ್ವಚ್ಛವಾಗಿರುವುದನ್ನು ನಾವು ನೋಡಿದ್ದೇವೆ. ಈಗ ಅದನ್ನು ನಿರ್ವಹಿಸುವುದು ಮುಖ್ಯವಾಗಿದೆ. ನಗರದ ಸಮಸ್ಯೆಯನ್ನು ಸರಿಪಡಿಸಲು ಅಥವಾ ಬೇರೊಬ್ಬರ ಮೇಲೆ ಅವಲಂಬಿತವಾಗಿರುವ ಸಿದ್ಧಾಂತದಿಂದ ನಾವು ದೂರ ಸರಿಯುವ ಸಮಯ ಇದು. ಇದು ಸರ್ಕಾರಿ ಅಧಿಕಾರಿಗಳ ಮೇಲೆ ಒಂದು ರೀತಿಯ ಒತ್ತಡವನ್ನು ಉಂಟುಮಾಡುತ್ತದೆ, ರಸ್ತೆಗಳನ್ನು, ನಗರವನ್ನು ಯಾರೋ ಗಮನಿಸುತ್ತಿರುತ್ತಾರೆ ಎಂಬ ಭಾವನೆ ಸರ್ಕಾರದ ಅಧಿಕಾರಿಗಳಿಗೆ ಬರುತ್ತದೆ ಎಂದು ಅಗ್ಲಿ ಇಂಡಿಯನ್ ತಂಡದ ಸದಸ್ಯರೊಬ್ಬರು ಹೇಳುತ್ತಾರೆ.
ನಗರದ ಬಹುತೇಕ ರಸ್ತೆಗಳು ವಾರ್ಡ್ ಗಳಾಗಿ ವಿಂಗಡಿಸಲಾಗುತ್ತದೆ. ವಿವಿಧ ಇಲಾಖೆಗಳ ಮಧ್ಯೆ ವಿಂಗಡನೆಯಾಗಿರುತ್ತದೆ. ಹೀಗಾಗಿ ಒಬ್ಬ ಮಾಲೀಕರ ಕೈಗೆ ಹೋಗಿ ಸುಗಮವಾಗಿ ನಿರ್ವಹಣೆಯಾಗುತ್ತಿರುವುದಿಲ್ಲ. ರಸ್ತೆಗಳ ಸ್ವಚ್ಛತೆ, ಸುವ್ಯವಸ್ಥೆ ನಿರ್ವಹಣೆಗೆ ನಿಖರತೆ, ದಕ್ಷತೆ, ಮಾಲೀಕತ್ವದ ಜವಾಬ್ದಾರಿಗೆ ಈ 500 ಕಿಲೋ ಮೀಟರ್ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಮತ್ತೊಬ್ಬ ಸದಸ್ಯ ಹೇಳುತ್ತಾರೆ.
ಈ ಅಭಿಯಾನ ಮಹದೇವಪುರ ಕ್ಷೇತ್ರದಲ್ಲಿ ಕಳೆದ ವರ್ಷ ಡಿಸೆಂಬರ್ ನಲ್ಲಿ 9 ಕಿಲೋ ಮೀಟರ್ ಉದ್ದದ ರಸ್ತೆಯೊಂದಿಗೆ ದೊಡ್ಡಾನೆಕುಂಡಿ ಮತ್ತು ಗರುಡಚಾರಪಾಳ್ಯ ವಾರ್ಡ್ ಗಳಲ್ಲಿ ಆರಂಭವಾಯಿತು. ಇಲ್ಲಿ ಒಂದು ಲಕ್ಷ ನಿವಾಸಿಗಳಿದ್ದಾರೆ. ಅದನ್ನು ಜನವರಿ 26ರವರೆಗೆ 26 ಕಿಲೋ ಮೀಟರ್ ವರೆಗೆ ವಿಸ್ತರಿಸಲಾಗಿತ್ತು. ಜನವರಿ ಕೊನೆಯ ವೇಳೆಗೆ 75 ಕಿಲೋ ಮೀಟರ್ ವರೆಗೆ ವಿಸ್ತರಿಸಲಾಗಿತ್ತು. ನಂತರ ಇದನ್ನು ನಗರದ ಬೇರೆ ಭಾಗಗಳಿಗೆ ವಿಸ್ತರಿಸಲು ನಿರ್ಧರಿಸಲಾಯಿತು.
ಇಲ್ಲಿ ಅಗ್ಲಿ ಇಂಡಿಯಾದ ಕಾರ್ಯಕರ್ತರು ಮಾತ್ರವಲ್ಲದೆ ನಿವಾಸಿಗಳು ಮತ್ತು ಸ್ಥಳೀಯರು ಕೂಡ ಭಾಗಿಯಾಗಿದ್ದಾರೆ. ಅವರು ಪ್ರಗತಿಯನ್ನು ಪರಿಶೀಲಿಸುತ್ತಾರೆ. ರಸ್ತೆಗಳ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಾರೆ. ರಸ್ತೆ ನಕ್ಷೆಗಳನ್ನು ನಾವೇ ರಚಿಸಿದ್ದೇವೆ, ಪ್ರತಿ ವಿಸ್ತರಣೆಯನ್ನು ದಾಖಲಿಸಿದ್ದೇವೆ. ಪ್ರಸ್ತುತ ನಗರದ ರಸ್ತೆಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು, ಪ್ರಮುಖ ರಸ್ತೆಗಳು ಮತ್ತು ವಾರ್ಡ್ ರಸ್ತೆಗಳಾಗಿ ವಿಂಗಡಿಸಲಾಗಿದೆ. ಬಿಬಿಎಂಪಿ ವೆಬ್‌ಸೈಟ್‌ನಲ್ಲಿಯೂ ಸಹ, ನಗರದ ಎಲ್ಲಾ ರಸ್ತೆಗಳ ಏಕೀಕೃತ ನಕ್ಷೆ ಇಲ್ಲ, ವಾರ್ಡ್ ವಾರು ನಕ್ಷೆಗಳಿವೆ. ಆದ್ದರಿಂದ 198 ವಾರ್ಡ್‌ಗಳು ಮತ್ತು 27 ವಿಧಾನಸಭಾ ಕ್ಷೇತ್ರಗಳ ಬದಲಿಗೆ, ತಲಾ 10 ಕಿಮೀಗಳ 50 ಲೂಪ್‌ಗಳನ್ನು ರಚಿಸಲಾಗುತ್ತಿದೆ. ಪ್ರತಿ ಕಿಮೀ ಅನ್ನು ಸ್ವಚ್ಛತೆಗಾಗಿ ಮ್ಯಾಪ್ ಮಾಡಲಾಗುತ್ತಿದೆ ಎಂದು ಸ್ವಯಂಸೇವಕರು ವಿವರಿಸುತ್ತಾರೆ.
Read more
[wpas_products keywords=”deal of the day”]