Karnataka news paper

ರಾಹುಲ್ ಗಾಂಧಿ ದೇಹದಲ್ಲಿ ಜಿನ್ನಾ ಭೂತ ಇದೆ: ಅಸ್ಸಾಂ ಸಿಎಂ ಹಿಮಾಂತ ಟೀಕೆ


ಗುವಾಹಟಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆ ವೇಳೆ ಮಾಡಿದ್ದ ಭಾಷಣದ ಕುರಿತು ಬಿಜೆಪಿ ಕುರಿತು ಟೀಕಾಪ್ರಹಾರ ಮುಂದುವರಿಸಿದ್ದು, ”ರಾಹುಲ್‌ ಗಾಂಧಿ ಅವರು ಆಧುನಿಕ ಕಾಲದ ಜಿನ್ನಾ,” ಎಂದು ಟೀಕಿಸಿದೆ.

”ರಾಹುಲ್‌ ಗಾಂಧಿಯವರ ಭಾಷೆ 1947ರ ಮೊದಲು ಮೊಹಮದ್‌ ಅಲಿ ಜಿನ್ನಾ ಅವರು ಬಳಸುತ್ತಿದ್ದ ಭಾಷೆಯಂತೆಯೇ ಇದೆ. ಹೀಗಾಗಿ ಜಿನ್ನಾ ಅವರ ಭೂತ ರಾಹುಲ್‌ ಗಾಂಧಿ ಅವರ ಶರೀರ ಪ್ರವೇಶಿಸಿದೆ ಎಂದು ಅನ್ನಿಸುತ್ತದೆ. ರಾಹುಲ್‌ ಗಾಂಧಿಯವರು ಆಧುನಿಕ ಕಾಲದ ಜಿನ್ನಾ ರೀತಿ ವರ್ತಿಸುತ್ತಿದ್ದಾರೆ,” ಎಂದು ಬಿಜಿಪಿ ಮುಖಂಡ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಟೀಕಿಸಿದ್ದಾರೆ.
ಗೋವಾದಲ್ಲಿ ಈ ಬಾರಿ ಕಾಂಗ್ರೆಸ್‌ ಸರಕಾರ ಬರೋದು ನಿಶ್ಚಿತ; ರಾಹುಲ್ ಗಾಂಧಿ

”ಕಳೆದ 10 ದಿನಗಳಿಂದ ರಾಹುಲ್‌ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ, ಭಾರತವು ರಾಜ್ಯಗಳ ಒಕ್ಕೂಟ ಎನ್ನುತ್ತಾರೆ. ಒಮ್ಮೊಮ್ಮೆ ಭಾರತ ಎಂದರೆ ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಎನ್ನುತ್ತಾರೆ. ಬಹುಶಃ ಅವರ ಪ್ರಕಾರ ಭಾರತ ಎಂದರೆ ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಮಾತ್ರವೇ ಇರಬೇಕು,” ಎಂದೂ ಹಿಮಂತ ವ್ಯಂಗ್ಯವಾಡಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ ಅವರು, ”ಭಾರತವು ರಾಜ್ಯಗಳ ಒಕ್ಕೂಟ ಎಂದು ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಇದೆ. ಭಾರತವು ಒಂದು ರಾಷ್ಟ್ರ ಎಂದು ಸಂವಿಧಾನ ಹೇಳಿಲ್ಲ. ದೇಶದಲ್ಲಿ ಎರಡು ರೀತಿಯ ಭಾರತಗಳಿವೆ,” ಎಂದು ಹೇಳಿದ್ದರು. ವಂದನಾ ನಿರ್ಣಯದ ಚರ್ಚೆಗೆ ಸಂಸತ್‌ನ ಉಭಯ ಸದನಗಳಲ್ಲಿ ಉತ್ತರ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್‌ ಗಾಂಧಿ ಭಾಷಣವನ್ನೇ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು. ಆ ನಂತರವೂ ಬಿಜೆಪಿಯು ಟೀಕೆ ಮುಂದುವರಿಸಿದೆ.
ಬಡತನ ಎನ್ನುವುದು ಮನಸ್ಥಿತಿ: ರಾಹುಲ್ ಗಾಂಧಿ ಹಳೆಯ ಹೇಳಿಕೆ ನೆನಪಿಸಿ ನಿರ್ಮಲಾ ವಾಗ್ದಾಳಿ

2016 ಮತ್ತು 2019ರಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗಳಿಗೆ ಪುರಾವೆ ನೀಡಬೇಕು ಎಂಬ ರಾಹುಲ್ ಗಾಂಧಿ ಒತ್ತಾಯವನ್ನು ಟೀಕಿಸಿರುವ ಹಿಮಾಂತ ಬಿಸ್ವ ಶರ್ಮ, “ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಮಗ ಎಂದು ಸಾಬೀತುಪಡಿಸಲು ಬಿಜೆಪಿ ಎಂದಾದರೂ ಪುರಾವೆ ಕೇಳಿದೆಯೇ?” ಎಂದು ಶುಕ್ರವಾರ ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಭಾರತೀಯ ಸೇನೆಯಿಂದ ಪುರಾವೆ ಕೇಳಕು ರಾಹುಲ್ ಗಾಂಧಿಗೆ ಯಾವುದೇ ಹಕ್ಕು ಇಲ್ಲ ಎಂದು ಅವರು ಹೇಳಿದ್ದರು.



Read more

[wpas_products keywords=”deal of the day sale today offer all”]