Karnataka news paper

ಈ ವರ್ಷದಲ್ಲೇ ಶಿವಮೊಗ್ಗದಿಂದ ವಿಮಾನ ಹಾರಾಟ, 11 ನಗರಗಳಿಗೆ ಸಂಪರ್ಕಕ್ಕೆ ಪ್ರಸ್ತಾಪ


ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಡಿಸೆಂಬರ್‌ನಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಲೋಕಸಭೆ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ, ಜೂನ್ ಒಳಗೆ ರನ್ ವೇ ಕಾರ್ಯ ಪೂರ್ಣವಾಗಲಿದ್ದು, ಜುಲೈನಲ್ಲಿ ಟರ್ಮಿನಲ್ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಡಿಸೆಂಬರ್ ಕೊನೆಯೊಳಗೆ ವಿಮಾನ ಸಂಚಾರ ಆರಂಭವಾಗಲಿದೆ ಎಂದರು.

75 ವರ್ಷಕ್ಕೆ ನಿವೃತ್ತಿ ನಿಯಮ..! ಯಡಿಯೂರಪ್ಪ – ಈಶ್ವರಪ್ಪ ಉತ್ತರಾಧಿಕಾರಿ ಯಾರಪ್ಪ..?

ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾಗಿ ಚರ್ಚೆನಡೆಸಿದ್ದೇನೆ. ವಿಮಾನಗಳ ಮಾರ್ಗ ಕುರಿತು ಪಟ್ಟಿಯನ್ನು ಸಿದ್ಧಪಡಿಸಿಕೊಟ್ಟಿದ್ದೇನೆ. ಇದರಿಂದ ಜಿಲ್ಲೆಯ ಜನತೆಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ವಿಮಾನಗಳ ಹಾರಾಟದ ಮಾರ್ಗಗಳು ಕೂಡ ಶೀಘ್ರ ನಿರ್ಧಾರವಾಗಲಿದ್ದು,ಈ ಸಂಬಂಧ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದರು.

ಕೇಂದ್ರ ಸಚಿವರು ತಕ್ಷಣ ದೂರವಾಣಿ ಮೂಲಕ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದಾರೆ. ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಚರ್ಚೆ ನಡೆಯುತ್ತಿದೆ. ನಿರ್ವಹಣೆ ಜವಾಬ್ದಾರಿಯನ್ನು ರಾಜ್ಯ ಸರಕಾರ ಹೊತ್ತುಕೊಳ್ಳಬೇಕೋ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರ ವಹಿಸಿಕೊಳ್ಳಬೇಕೆನ್ನುವ ಕುರಿತು ಚರ್ಚೆ ನಡೆದಿದೆ. ಮುಂದಿನ ವಾರ ಈ ಸಂಬಂಧ ಡ್ರಾಫ್ಟ್ ಸಿದ್ಧವಾಗಲಿದೆ ಎಂದು ತಿಳಿಸಿದರು.

ಸೋಮವಾರ ಅಥವಾ ಮಂಗಳವಾರ ಈ ಕುರಿತಾದ ಕರುಡು ಕೈ ಸೇರಲಿದೆ. ಇದಾದ ನಂತರ ನಮಗೆ ಒಪ್ಪಿಗೆ ಆಗುವ ವಿಷಯಗಳು ಅಥವಾ ಒಪ್ಪಿಗೆಯಾಗದ ವಿಷಯಗಳ ಕುರಿತು ಕೂಲಂಕಷವಾಗಿ ಪರಿಶೀಲನೆ ಮಾಡಲಾಗುತ್ತೆ. ನಂತರ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ಇದನ್ನ ಫಾಲೋ ಅಪ್‌ ಮಾಡುತ್ತೆ. ಈಗಾಗಲೇ ಹನ್ನೊಂದು-ಹನ್ನೆರಡು ಮಾರ್ಗಗಳ ಕುರಿತು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. ಹೊಸದಿಲ್ಲಿ, ಕಲಬುರಗಿ, ಹೈದರಾಬಾದ್‌, ಕೊಚ್ಚಿನ್‌, ಮಂಗಳೂರು, ತಿರುಪತಿ ನಗರಗಳನ್ನ ಬೆಸೆಯುವ ಬಗ್ಗೆ ಟೆಂಟರ್‌ ಕರೆಯಲು ಸಚಿವರಿಗೆ ಮನವಿ ಮಾಡಲಾಗಿದೆ . ಈ ಎಲ್ಲಾ ಮಾರ್ಗಗಳು ಕೇಂದ್ರ ವಿಮಾನಯಾನ ಸಚಿವಾಲಯದಿಂದ ಅನುಮೋದನೆಗೊಳ್ಳುವ ಭರವಸೆ ಇದೆ ಎಂದರು.

ಇನ್ನು ಕೇಂದ್ರ ಬಜೆಟ್‌ ಹೊಗಳಿದ ಸಂಸದ 2022-23ನೇ ಸಾಲಿನ ಕೇಂದ್ರ ಬಜೆಟ್ ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷ ವಾಕ್ಯದಡಿ ದೇಶದ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾದ ಹಾಗೂ ಮುಂದಿನ 25 ವರ್ಷಗಳ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ನೀಲ ನಕ್ಷೆ ಸಿದ್ಧಪಡಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನ್ನು ಮಂಡಿಸಿದ್ದಾರೆ ಎಂದರು.

ಧರ್ಮಕ್ಕಿಂತ ವಿದ್ಯೆ ಮೇಲು: ನ್ಯಾಯಾಲಯದ ತೀರ್ಪು ಪಾಲಿಸಿ: ಬಸವ ಮರುಳಸಿದ್ದ ಸ್ವಾಮೀಜಿ ಮನವಿ

ದೇಶದ ಆರ್ಥಿಕ ಭದ್ರತೆಗೆ ಭದ್ರ ಬುನಾದಿ ಈ ಬಜೆಟ್ ಹಾಕಲಿದ್ದು, 36.5 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ. ಅತ್ಯಂತ ದೂರದೃಷ್ಟಿಯುಳ್ಳ ಬಜೆಟ್ ಇದಾಗಿದ್ದು, ರೈತರು, ಮಧ್ಯಮ ವರ್ಗದವರು ಸೇರಿದಂತೆ ಎ ವಲಯಕ್ಕೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಕೃಷಿಕರಿಂದ ಕೈಗಾರಿಕೋದ್ಯಮಿಗಳವರೆಗೆ ಈ ಬಜೆಟ್‌ ಸಹಕಾರಿಯಾಗಿದೆ ಎಂದು ಬಿವೈ ರಾಘವೇಂದ್ರ ಹೊಗಳಿದರು.



Read more

[wpas_products keywords=”deal of the day sale today offer all”]