Karnataka news paper

IPL 2022 Auction: ಫಿನಿಷರ್‌ ಸ್ಥಾನಕ್ಕೆ ಕಾರ್ತಿಕ್‌ನ ಕರೆತಂದ ಆರ್‌ಸಿಬಿ!


ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ಬೃಹತ್‌ ಮಟ್ಟದ ಆಟಗಾರರ ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ಮೊದಲ ದಿನದ ಆಕ್ಷನ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ ಅವರನ್ನು ಖರೀದಿ ಮಾಡಿದೆ.

ಐಪಿಎಲ್ 2022 ಟೂರ್ನಿ ಸಲುವಾಗಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಫೆ.12-13ರಂದು ಮೆಗಾ ಆಕ್ಷನ್‌ ಆಯೋಜನೆ ಆಗಿದೆ. ಮೊದಲ ದಿನವಾದ ಶನಿವಾರ (ಫೆ.12) ಕೆಲ ಅಚ್ಚರಿಯ ಬಿಡ್‌ ನಡೆಸಿದ ಆರ್‌ಸಿಬಿ, ಫಿನಿಷರ್‌ ಸಲುವಾಗಿ 5.5 ಕೋಟಿ ರೂ.ಗಳ ಭಾರಿ ಬೆಲೆ ನೀಡಿ ದಿನೇಶ್‌ ಕಾರ್ತಿಕ್‌ ಸೇವೆಯನ್ನು ತನ್ನದಾಗಿಸಿಕೊಂಡಿದೆ.

ತಮಿಳುನಾಡು ಮೂಲದ ಅನುಭವಿ ಆಟಗಾರನ ಖರೀದಿ ಸಲುವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಬಿಡ್‌ ಮೇಲೆ ಬಿಡ್‌ ಸಲ್ಲಿಸುತ್ತಿತ್ತು. ಆದರೆ, ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸಲುವಾಗಿ ಕಾರ್ತಿಕ್‌ ಅವರಂತಹ ಅನುಭವಿಯ ಅಗತ್ಯವಿದೆ ಎಂದು ಮನಗಂಡ ಆರ್‌ಸಿಬಿ ಜಿದ್ದಾಜಿದ್ದಿನ ಬಿಡ್ಡಿಂಗ್‌ ನಡೆಸಿ ಐದುವರೆ ಕೋಟಿ ರೂ.ಗಳಿಗೆ ವ್ಯಾಪಾರ ಕುದುರಿಸಿತು.

80 ಲಕ್ಷದಿಂದ 14 ಕೋಟಿ ರೂ., ಚಹರ್‌ಗೆ ‘ಜಾಕ್‌ಪಾಟ್’!

ಇದಕ್ಕೂ ಮುನ್ನ ಶ್ರೀಲಂಕಾದ ಆಲ್‌ರೌಂಡರ್‌ ವಾನಿಂದು ಹಸರಂಗ ಅವರನ್ನು ಆರ್‌ಸಿಬಿ ಬರೋಬ್ಬರಿ 10.75 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಖರೀದಿ ಮಾಡಿತ್ತು. ಕಳೆದ ಬಾರಿ ಬದಲಿ ಆಟಗಾರನಾಗಿ ಆರ್‌ಸಿಬಿ ಸೇರಿದ್ದ ಹಸರಂಗ ಒಂದು ವಿಕೆಟ್‌ ಕೂಡ ಪಡೆಯಲಿಲ್ಲ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಅವರ ಆಲ್‌ರೌಂಡ್‌ ಆಟವನ್ನು ಮನಗಂಡು ಚಾಲೆಂಜರ್ಸ್‌ ಮತ್ತೊಂದು ಅವಕಾಶ ಕೊಟ್ಟಿದೆ.

ಇದೇ ವೇಳೆ ಹಸರಂಗ, ಇಂಡಿಯನ್ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆ ಪಡೆದ ಶ್ರೀಲಂಕಾದ ಆಟಗಾರ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಆರ್‌ಸಿಬಿ, ಹಸರಂಗ ಜೊತೆಗೆ ಹರ್ಷಲ್‌ ಪಟೇಲ್‌ ಅವರನ್ನು ಕೂಡ ಅದೇ ಬೆಲೆಗೆ ಖರೀದಿ ಮಾಡಿದೆ. ಈ ಮೂಲಕ ತನ್ನ ಇಬ್ಬರು ಆಲ್‌ರೌಂಡರ್‌ಗಳ ಸೇವೆಯನ್ನು ಮರಳಿ ಪಡೆಯಲು ಬರೋಬ್ಬರಿ 28.5 ಕೋಟಿ ರೂ.ಗಳನ್ನು ಖರ್ಚು ಮಾಡಿತು.

ಈ ನಡುವೆ 7.75 ಕೋಟಿ ರೂ.ಗಳ ಬೆಲೆಗೆ ಆಸ್ಟ್ರೇಲಿಯಾದ ವೇಗದ ಬೌಲರ್‌ ಜಾಶ್‌ ಹೇಝಲ್‌ವುಡ್‌ ಅವರನ್ನು ಖರೀದಿಸಿತು. ಉಳಿದೆಲ್ಲಾ ಖರೀದಿಗಿಂತಲೂ ಹೇಝಲ್‌ವುಡ್‌ ಖರೀದಿ ಅತ್ಯುತ್ತಮ ಎನಿಸಿಕೊಂಡಿತು. ಜಾಶ್‌ ಕಳೆದ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿ ತಂಡದ ನಾಲ್ಕನೇ ಟ್ರೋಫಿ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು.

10 ಕೋಟಿ ರೂ.ಗೂ ಹೆಚ್ಚು ಬೆಲೆ ಪಡೆದ ಟಾಪ್‌ 7 ಆಟಗಾರರು!

ಈ ನಡುವೆ ದೇವದತ್‌ ಪಡಿಕ್ಕಲ್‌, ಯುಜ್ವೇಂದ್ರ ಚಹಲ್‌ ಮತ್ತು ವಾಷಿಂಗ್ಟನ್‌ ಸುಂದರ್‌ ಅವರಂತಹ ತನ್ನ ಸ್ಟಾರ್‌ ಆಟಗಾರರನ್ನು ಮರಳಿ ಖರೀದಿಸುವ ಪ್ರಯತ್ನ ಮಾಡದ ಚಾಲೆಂಜರ್ಸ್‌, ತಂಡದ ನಾಯಕತ್ವ ಸಲುವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಓಪನರ್‌ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್‌ ಡು’ಪ್ಲೆಸಿಸ್‌ ಅವರನ್ನು ಖರೀದಿ ಮಾಡಿದೆ. ಈ ಸಲುವಾಗಿ 7 ಕೋಟಿ ರೂ. ಖರ್ಚು ಮಾಡಿದೆ.

ಆರ್‌ಸಿಬಿ ತಂಡದ ಆಟಗಾರರ ವಿವರ

  1. ಆಕಾಶ್‌ ದೀಪ್‌ (20 ಲಕ್ಷ ರೂ.)
  2. ಅನುಜ್‌ ರಾವತ್‌ (3.4 ಕೋಟಿ ರೂ.)
  3. ಶಹಬಾಝ್‌ ಅಹ್ಮದ್‌ (2.4 ಕೋಟಿ ರೂ.)
  4. ಜಾಶ್‌ ಹೇಝಲ್‌ವುಡ್‌ (7.75 ಕೋಟಿ ರೂ.)
  5. ವಾನಿಂದು ಹಸರಂಗ (10.75 ಕೋಟಿ ರೂ.)
  6. ದಿನೇಶ್‌ ಕಾರ್ತಿಕ್‌ (5.5 ಕೋಟಿ ರೂ.)
  7. ಹರ್ಷಲ್‌ ಪಟೇಲ್‌ (10.75 ಕೋಟಿ ರೂ.)
  8. ಫಾಫ್‌ ಡು’ಪ್ಲೆಸಿಸ್‌ (7 ಕೋಟಿ ರೂ.)

ಉಳಿಸಿಕೊಂಡಿರುವ ಆಟಗಾರರು

  • ವಿರಾಟ್‌ ಕೊಹ್ಲಿ (15 ಕೋಟಿ ರೂ.)
  • ಗ್ಲೆನ್‌ ಮ್ಯಾಕ್ಸ್‌ವೆಲ್‌ (11 ಕೋಟಿ ರೂ.)
  • ಮೊಹಮ್ಮದ್ ಸಿರಾಜ್‌ (7 ಕೋಟಿ ರೂ.)



Read more

[wpas_products keywords=”deal of the day sale today offer all”]