Karnataka news paper

ಉದ್ಯಮಿ, ಬಜಾಜ್ ಗ್ರೂಪ್‌ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ನಿಧನ


Online Desk

ಪುಣೆ: ಕೈಗಾರಿಕೋದ್ಯಮಿ ಮತ್ತು ಬಜಾಜ್ ಗ್ರೂಪ್‌ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಅವರು ಶನಿವಾರ ಪುಣೆಯಲ್ಲಿ ನಿಧನರಾಗಿದ್ದಾರೆ.

ದಿವಂಗತ ರೂಪಾ ಬಜಾಜ್ ಅವರ ಪತಿ ಮತ್ತು ರಾಜೀವ್/ದೀಪಾ, ಸಂಜೀವ್/ಶೆಫಾಲಿ ಮತ್ತು ಸುನೈನಾ/ಮನೀಶ್ ಅವರ ತಂದೆ ರಾಹುಲ್ ಬಜಾಜ್ ಅವರ ನಿಧನದ ಬಗ್ಗೆ ನಾನು ನಿಮಗೆ ತೀವ್ರ ದುಃಖದಿಂದ ತಿಳಿಸುತ್ತೇನೆ. ಅವರು ಫೆಬ್ರವರಿ 12 ರ ಮಧ್ಯಾಹ್ನ ೨.೩೦ಕ್ಕೆ ನಿಧನರಾದರು. ಹತ್ತಿರದ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಬಜಾಜ್ ಗ್ರೂಪ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಓದಿ: 2021ರಲ್ಲಿ ಕಾರುಗಳ ರಫ್ತಿನಲ್ಲಿ ಹುಂಡೈ ಹಿಂದಿಕ್ಕಿದ ಮಾರುತಿ ಸುಜುಕಿ; ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಬಜಾಜ್ ಮುಂಚೂಣಿಗೆ

ರಾಹುಲ್ ಬಜಾಜ್ ಅವರಿಗೆ ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯೂ ಇತ್ತು. ಕಳೆದ ಒಂದು ತಿಂಗಳಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರೂಬಿ ಹಾಲ್ ಕ್ಲಿನಿಕ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪುರವೇಜ್ ಗ್ರಾಂಟ್ ಹೇಳಿದ್ದಾರೆ.

ಜೂನ್ 10, 1938 ರಂದು ಜನಿಸಿದ ರಾಹುಲ್ ಬಜಾಜ್ ಅವರು 40 ವರ್ಷಗಳ ಕಾಲ ಬಜಾಜ್ ಗ್ರೂಪ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ರಾಹುಲ್ ಬಜಾಜ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಪ್ರಸ್ತುತ ಸಂಸ್ಥೆಯ ಎಮೆರಿಟಸ್ ಅಧ್ಯಕ್ಷರಾಗಿದ್ದರು.

ರಾಹುಲ್ ಬಜಾಜ್ ಅವರಿಗೆ 2001 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ನೀಡಲಾಯಿತು. ಬಜಾಜ್ ಅವರು ರಾಜ್ಯಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು.

ಫೆಬ್ರವರಿ 2021 ರ ಪ್ರಕಾರ, ಫೋರ್ಬ್ಸ್ ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ರಾಹುಲ್ ಬಜಾಜ್ 421 ನೇ ಸ್ಥಾನದಲ್ಲಿದ್ದರು ಮತ್ತು ನಿವ್ವಳ ಮೌಲ್ಯ USD 8.2 ಶತಕೋಟಿ ಇತ್ತು.

ರಾಹುಲ್ ಬಜಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, “ಯಶಸ್ವಿ ಉದ್ಯಮಿ, ಲೋಕೋಪಕಾರಿ ಮತ್ತು ಬಜಾಜ್ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಜಿ ಅವರಿಗೆ ನನ್ನ ಹೃತ್ಪೂರ್ವಕ ನಮನಗಳು ಎಂದು ಸಂತಾಪ ಸೂಚಿಸಿದ್ದಾರೆ.



Read more…

[wpas_products keywords=”deal of the day”]