Karnataka news paper

ಜಗತ್ತಿನ ಯಾವ ದೇಶಗಳು ಹಿಜಾಬ್ ನಿಷೇಧಿಸಿವೆ ಗೊತ್ತಾ?


Online Desk

ಬೆಂಗಳೂರು: ಕರ್ನಾಟಕದ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಮಸ್ಯೆ ಬಗೆಹರಿಯುವವರೆಗೆ ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆ (ಹಿಜಾಬ್ ಅಥವಾ ಕೇಸರಿ ವಸ್ತ್ರ) ನಿರ್ಬಂಧಿಸಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ತಕ್ಷಣದ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದು ಸಾಂವಿಧಾನಿಕ ಹಕ್ಕು ಎಂದು ಕೆಲವರು ಭಾವಿಸಿದರೆ, ಇನ್ನು ಕೆಲವರು ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಧರಿಸುವುದು ಸೂಕ್ತವಲ್ಲ ಎಂದು ವಾದಿಸುತ್ತಾರೆ.

ಇದನ್ನು ಓದಿ: ‘ನಮ್ಮ ಆಂತರಿಕ ವಿಚಾರಗಳಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಬೇಡಿ’: ಹಿಜಾಬ್ ವಿವಾದ ಕುರಿತು ವಿದೇಶಗಳಿಗೆ ಭಾರತ ಖಡಕ್ ಎಚ್ಚರಿಕೆ!

ಪ್ರಪಂಚದಾದ್ಯಂತ ಹಿಜಾಬ್ ಅಥವಾ ನಿಖಾಬ್ ಮೇಲೆ ವಿವಿಧ ನಿಯಮಗಳು ಮತ್ತು ನಿಷೇಧಗಳಿವೆ. ಕೆಲವು ದೇಶಗಳಲ್ಲಿ ಸಾರ್ವಜನಿಕವಾಗಿ ಮುಖವನ್ನು ವಸ್ತ್ರಗಳಿಂದ ಮುಚ್ಚುವುದು ಅಥವಾ ನಿಖಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳ ಉಲ್ಲಂಘನೆಗೆ ಭಾರೀ ದಂಡವನ್ನು ಸಹ ವಿಧಿಸಲಾಗುತ್ತದೆ.

ಯಾವ ದೇಶಗಳಲ್ಲಿ ಯಾವ ರೀತಿಯ ನಿಯಮಗಳಿವೆ ಎಂದು ನೋಡೋಣ. 

ಫ್ರಾನ್ಸ್ : 
ಏಪ್ರಿಲ್ 11, 2011 ರಂದು, ಸಾರ್ವಜನಿಕ ಸ್ಥಳಗಳಲ್ಲಿ ಮುಖದ ಮುಸುಕುಗಳನ್ನು(ನಿಖಾಬ್) ಧರಿಸುವುದನ್ನು ನಿಷೇಧಿಸುವ ಕಾನೂನನ್ನು ಫ್ರಾನ್ಸ್ ಜಾರಿಗೊಳಿಸಿತು. ನಿಖಾಬ್‌ಗಳನ್ನು ನಿಷೇಧಿಸಿದ ಮೊದಲ ಯುರೋಪಿಯನ್ ದೇಶ ಇದು. ಫ್ರಾನ್ಸ್‍ ಮಹಿಳೆಯರಾದರೂ ಅಥವಾ ವಿದೇಶಿಯ ಮಹಿಳೆಯರಾದರೂ ಮನೆಯಿಂದ ಹೊರಬಂದ ನಂತರ ನಿಕಾಬ್ ಧರಿಸುವುದನ್ನು ಫ್ರಾನ್ಸ್ ನಿಷೇಧಿಸುತ್ತದೆ. ಈ ಕಾನೂನಿನ ಉಲ್ಲಂಘನೆಗೆ ದಂಡವಿಧಿಸಲಾಗುತ್ತದೆ. ಈ ಕಾನೂನು ಜಾರಿ ಸಂದರ್ಭದಲ್ಲಿ ನಿಕೋಲಸ್ ಸರ್ಕೋಜಿ ಫ್ರಾನ್ಸ್ ಅಧ್ಯಕ್ಷರಾಗಿದ್ದರು. ಮುಖವನ್ನು ಪರದೆಯಿಂದ ಮುಚ್ಚಿಕೊಳ್ಳುವುದು ಅತ್ಯಾಚಾರಕ್ಕೆ ಸಮಾನ ಎಂದು ಸರ್ಕೋಜಿ ಸರ್ಕಾರ ಬಹಿರಂಗಪಡಿಸಿತ್ತು. ಅದನ್ನು ತಮ್ಮ ದೇಶದಲ್ಲಿ ಸ್ವಾಗತಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬೆಲ್ಜಿಯಂ:
ಜುಲೈ 2011 ರಲ್ಲಿ ಬೆಲ್ಜಿಯಂನಲ್ಲಿ ಮುಖದ ಮುಸುಕುಗಳನ್ನು ನಿಷೇಧಿಸಲಾಯಿತು. ಕಾನೂನಿನ ಪ್ರಕಾರ, ವ್ಯಕ್ತಿಗಳ ಗುರುತನ್ನು ಮರೆಮಾಚುವ ಯಾವುದೇ ಬಟ್ಟೆಯನ್ನು ಸಾರ್ವಜನಿಕವಾಗಿ ಧರಿಸಬಾರದು ಎಂದು ಆದೇಶಿಸಿತ್ತು. ಈ ಆದೇಶವನ್ನ ಪ್ರಶ್ನಿಸಿ ಬೆಲ್ಜಿಯಂ ಹೈಕೋರ್ಟ್ ಕಾನೂನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿತು. ಜೊತೆಗೆ ಇದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ಸ್ಪಷ್ಟಪಡಿಸಿದರು. 2017 ರಲ್ಲಿ, ಮಾನವ ಹಕ್ಕುಗಳ ಯುರೋಪಿಯನ್ ನ್ಯಾಯಾಲಯವು ಬೆಲ್ಜಿಯಂ ಕಾನೂನನ್ನು ಎತ್ತಿಹಿಡಿದಿದೆ.

ನೆದರ್ಲ್ಯಾಂಡ್ಸ್:
ನವೆಂಬರ್ 2016 ರಲ್ಲಿ, ನೆದರ್ಲ್ಯಾಂಡ್ಸ್ ಸರ್ಕಾರವು ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಬಳಸುವಾಗ ಶಾಲೆಗಳು ಮತ್ತು ಆಸ್ಪತ್ರೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮುಖಕ್ಕೆ ಮುಸುಕುಗಳನ್ನ ಧರಿಸಬಾರದು ಎಂದು ತೀರ್ಮಾನಿಸಿತ್ತು. ಆದರು ನಿರ್ಣಯವು ಕಾನೂನಾಗಬೇಕಾದರೆ, ಮಸೂದೆಯನ್ನು ದೇಶದ ಸಂಸತ್ತು ಅನುಮೋದಿಸಬೇಕು. ಸಂಸತ್ತಿನಲ್ಲಿ ಸುಮಾರು ಎರಡು ವರ್ಷಗಳ ನಂತರ ಜೂನ್ 2018 ರಲ್ಲಿ ಮುಸುಕುಗಳ ಮೇಲಿನ ನಿಷೇಧವು ಕಾನೂನಾಯಿತು.

ಇಟಲಿ:
ಇಟಲಿಯ ನೋವಾರಾದಂತಹ ಕೆಲವು ನಗರಗಳಲ್ಲಿ ನಿಖಾಬ್ ಅನ್ನು ನಿಷೇಧಿಸಲಾಗಿದೆ. ಅಲ್ಲದೆ, ಲೊಂಬಾರ್ಡಿ ಪ್ರದೇಶದಲ್ಲಿ ಬುರ್ಖಾ ನಿಷೇಧವು ಜನವರಿ 2016 ರಿಂದ ಜಾರಿಯಲ್ಲಿದೆ. ಆದಾಗ್ಯೂ, ಈ ಕಾನೂನು ಇಡೀ ದೇಶಕ್ಕೆ ಅನ್ವಯಿಸುವುದಿಲ್ಲ ಎಂಬುದು ಗಮನಾರ್ಹ

ಜರ್ಮನಿ:
ಡಿಸೆಂಬರ್ 6, 2016 ರಂದು, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು “ಕಾನೂನುಬದ್ಧವಾಗಿ ಸಾಧ್ಯವಿರುವಲ್ಲೆಲ್ಲಾ” ಮುಖದ ಮುಸುಕುಗಳನ್ನು ನಿಷೇಧಿಸುವಂತೆ ಕರೆ ನೀಡಿದರು. ಆದರೆ, ಈ ನಿಟ್ಟಿನಲ್ಲಿ ಇನ್ನೂ ರಾಷ್ಟ್ರಮಟ್ಟದ ಕಾನೂನು ಜಾರಿಯಾಗಿಲ್ಲ ಮತ್ತು ವಾಹನ ಚಲಾಯಿಸುವಾಗ ಮುಖಕ್ಕೆ ಮುಸುಕು ಧರಿಸುವಂತಿಲ್ಲ. ಜರ್ಮನಿಯ ಕೆಲವು ರಾಜ್ಯಗಳಲ್ಲಿ, ಶಿಕ್ಷಕರು ನಿಖಾಬ್ ಧರಿಸಲು ಅನುಮತಿಸುವುದಿಲ್ಲ. ಕೆಲವು ರಾಜ್ಯಗಳಲ್ಲಿ, ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಮುಖದ ಮುಸುಕುಗಳನ್ನು ನಿಷೇಧಿಸಲಾಗಿದೆ. ಅಲ್ಲದೆ, ಜರ್ಮನ್ ಕೆಳಮನೆಯು ನ್ಯಾಯಾಧೀಶರು, ಸೈನಿಕರು ಮತ್ತು ಸರ್ಕಾರಿ ನೌಕರರು ನಿಖಾಬ್ ಧರಿಸುವುದರ ಮೇಲೆ ಭಾಗಶಃ ನಿಷೇಧವನ್ನು ಅನುಮೋದಿಸಿತು. ಆದರೆ, ನಿಖಾಬ್ ಧರಿಸಿರುವ ಮಹಿಳೆಯರು ಅಗತ್ಯವಿದ್ದಾಗ ಮುಖ ತೋರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಆಸ್ಟ್ರಿಯಾ: 
ಅಕ್ಟೋಬರ್ 2017 ರಲ್ಲಿ, ಶಾಲೆಗಳು ಮತ್ತು ನ್ಯಾಯಾಲಯಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಿಖಾಬ್ ಧರಿಸುವುದನ್ನು ನಿಷೇಧಿಸುವ ಕಾನೂನನ್ನು ಆಸ್ಟ್ರಿಯಾ ಸರ್ಕಾರ ಜಾರಿ ಮಾಡಿದೆ.

ನಾರ್ವೆ
ಶಿಕ್ಷಣ ಸಂಸ್ಥೆಗಳಲ್ಲಿ ನಿಖಾಬ್ ಧರಿಸುವುದನ್ನು ನಾರ್ವೆಯಲ್ಲಿ ಜೂನ್ 2018 ರಲ್ಲಿ ನಿಷೇಧಿಸಲಾಯಿತು.

ಸ್ಪೇನ್:
ಸ್ಪೇನ್‌ನಲ್ಲಿ ನಿಕಾಬ್ ಧರಿಸಲು ಯಾವುದೇ ರಾಷ್ಟ್ರೀಯ ಕಾನೂನುಗಳಿಲ್ಲ. ಆದರೂ ಪುರಸಭೆಯ ಕಚೇರಿಗಳು, ಮಾರುಕಟ್ಟೆಗಳು ಮತ್ತು ಗ್ರಂಥಾಲಯಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಿಖಾಬ್ ಧರಿಸುವುದನ್ನು ನಿಷೇಧಿಸುವ ಕಾನೂನು 2010 ರಿಂದ ಬಾರ್ಸಿಲೋನಾದಲ್ಲಿ ಜಾರಿಯಲ್ಲಿದೆ. ಲಿಡಾ ನಗರದಲ್ಲಿ ಇದೇ ರೀತಿಯ ಕಾನೂನನ್ನು ಪರಿಚಯಿಸಲಾಯಿತು. ಆದರೇ ಸ್ಪ್ಯಾನಿಷ್ ಸುಪ್ರೀಂ ಕೋರ್ಟ್ ಫೆಬ್ರವರಿ 2013 ರಲ್ಲಿ ಕಾನೂನನ್ನು ತಿರಸ್ಕರಿಸಿತು, ಇದು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಬ್ರಿಟನ್:
ಬ್ರಿಟನ್‌ನಲ್ಲಿ ಇಸ್ಲಾಮಿಕ್ ಉಡುಗೆಗೆ ಯಾವುದೇ ನಿಷೇಧವಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ನಿರ್ಧರಿಸುವ ಅಧಿಕಾರ ಶಾಲೆಗಳಿಗೆ ಇದೆ. ಆಗಸ್ಟ್ 2016 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ, 57 ಪ್ರತಿಶತ ಬ್ರಿಟನ್ನರು ಬುರ್ಖಾ ನಿಷೇಧದ ಪರವಾಗಿ ಮತ ಚಲಾಯಿಸಿದ್ದಾರೆ.

ಆಫ್ರಿಕಾ:
2015 ರಿಂದ ಆಫ್ರಿಕಾದಲ್ಲಿ ಕೆಲವು ಬುರ್ಖಾ ಧರಿಸಿದ ಮಹಿಳೆಯರು ಆತ್ಮಾಹುತಿ ದಾಳಿಗೊಳಪಟ್ಟಿದ್ದರಿಂದ ಚಾಡ್, ಉತ್ತರ ಕ್ಯಾಮರೂನ್, ನೈಜರ್‌ನ ಕೆಲವು ಭಾಗಗಳಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಚಾಡ್ ಮುಸುಕುಗಳನ್ನು ನಿಷೇಧಿಸಿದೆ.

ಟರ್ಕಿ:
ಟರ್ಕಿ 85 ವರ್ಷಗಳಿಂದ ಜಾತ್ಯತೀತ ರಾಷ್ಟ್ರವಾಗಿದೆ. ರಿಪಬ್ಲಿಕ್ ಆಫ್ ಟರ್ಕಿಯ ಸಂಸ್ಥಾಪಕ ಮುಸ್ತಫಾ ಕೆಮಾಲ್ ಅಟಾತುರ್ಕ್ ಅವರು ಹಿಜಾಬ್ ಅನ್ನು ತಿರಸ್ಕರಿಸಿದರು. ಹಿಜಾಬ್ ಧರಿಸುವುದರಿಂದ ನಮ್ಮ ರಾಷ್ರ್ಟ ಹಿಂದುಳಿದಂತೆ ಎಂದು ಅಭಿಪ್ರಾಯಪಟ್ಟಿದ್ದರು. ಟರ್ಕಿಯಲ್ಲಿ ಅಧಿಕೃತ ಕಟ್ಟಡಗಳು ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ. ಈ ಹಿಜಾಬ್ ಮೇಲಿನ ನಿಷೇಧದ ಬಗ್ಗೆ ದೇಶದಲ್ಲಿ ಬಹುಸಂಖ್ಯಾತ ಮುಸ್ಲಿಂರಲ್ಲಿ ಭಿನ್ನಾಭಿಪ್ರಾಯವಿದೆ. ಪ್ರಧಾನಿ, ಅಧ್ಯಕ್ಷರ ಪತ್ನಿಯರು ಮತ್ತು ಹೆಣ್ಣುಮಕ್ಕಳು ಸೇರಿದಂತೆ ಟರ್ಕಿಯ ಮೂರನೇ ಎರಡರಷ್ಟು ಮಹಿಳೆಯರು ತಮ್ಮ ತಲೆಯನ್ನು ಮಾತ್ರ ವಸ್ತ್ರಗಳಿಂದ ಮುಚ್ಚಿಕೊಳ್ಳುತ್ತಾರೆ.

2008ರಲ್ಲಿ, ವಿಶ್ವವಿದ್ಯಾನಿಲಯಗಳ ಮೇಲಿನ ಕಟ್ಟುನಿಟ್ಟಾದ ನಿಯಮಗಳ ಕೆಲವು ಸಡಿಲಿಕೆಗಳಿಂದಾಗಿ ಟರ್ಕಿಶ್ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು. ಅದರೊಂದಿಗೆ, ಹಿಜಾಬ್ ಅನ್ನು ಸಡಿಲವಾಗಿ ಕಟ್ಟಲು ಅನುಮತಿ ನೀಡಲಾಯಿತು. ಆದರೆ, ಕುತ್ತಿಗೆ ಮತ್ತು ಇಡೀ ಬಾಯಿಯನ್ನು ಮುಚ್ಚುವ ನಿಖಾಬ್‌ಗಳ ಮೇಲಿನ ನಿಷೇಧವು ಮುಂದುವರೆಯಿತು.

2013 ರಲ್ಲಿ, ರಾಷ್ಟ್ರೀಯ ಸಂಸ್ಥೆಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತು. ಆದರೆ, ನ್ಯಾಯಾಲಯಗಳು, ಸೈನಿಕರು, ಪೊಲೀಸರು ಮುಂತಾದ ಕರ್ತವ್ಯಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. 2016 ರಲ್ಲಿ, ಟರ್ಕಿಯು ಪೊಲೀಸ್ ಪಡೆಗಳಲ್ಲಿ ಮಹಿಳೆಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿತು.

ಡೆನ್ಮಾರ್ಕ್ :
2018 ರಲ್ಲಿ, ಡ್ಯಾನಿಶ್ ಸರ್ಕಾರವು ಮುಖ ಮುಚ್ಚುವ ನಿಖಾಬ್‌ಗಳ ಮೇಲೆ ನಿಷೇಧವನ್ನು ವಿಧಿಸಿತು. ಈ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಉಲ್ಲಂಘಿಸಿದರೆ 10 ಪಟ್ಟು ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಬುರ್ಖಾ ಧರಿಸುವಂತೆ ಒತ್ತಾಯಿಸುವವರು ದಂಡ ಅಥವಾ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಸಹ ಎದುರಿಸಬೇಕಾಗುತ್ತದೆ.ಇದಲ್ಲದೆ ತಲೆಗೆ ರುಮಾಲು ಅಥವಾ ಇತರ ಧಾರ್ಮಿಕ ಮತ್ತು ರಾಜಕೀಯ ಚಿಹ್ನೆಗಳನ್ನು (ಶಿಲುಬೆಗಳು, ಟೋಪಿಗಳು, ಪಗೋಡಗಳು ಇತ್ಯಾದಿ) ಧರಿಸುವಂತಿಲ್ಲ ಎಂದು ನ್ಯಾಯಾಲಯಗಳಲ್ಲಿ ಕಾನೂನು ಇದೆ.

ರಷ್ಯಾ:
ರಷ್ಯಾದ ಸ್ವಾಟ್ರೋಪೋಲ್ ಪ್ರದೇಶದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ರಷ್ಯಾದಲ್ಲಿ ಇದು ಮೊದಲ ನಿಷೇಧವಾಗಿದೆ. ಜುಲೈ 2013 ರಲ್ಲಿ ರಷ್ಯಾದ ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ಎತ್ತಿಹಿಡಿದಿದೆ.

ಸ್ವಿಟ್ಜರ್ಲೆಂಡ್:
2009 ರಲ್ಲಿ ಸ್ವಿಸ್ ನ್ಯಾಯಾಂಗ ಸಚಿವ ಎವೆಲಿನ್ ವಿಡ್ಮರ್ ಅವರು ಹೆಚ್ಚಿನ ಮಹಿಳೆಯರು ಹಿಜಾಬ್ ಧರಿಸಿದರೆ, ಅದನ್ನು ನಿಷೇಧಿಸುವ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದರು.

ಸೆಪ್ಟೆಂಬರ್ 2013 ರಲ್ಲಿ, 65% ಜನರು ಸ್ವಿಟ್ಜರ್ಲೆಂಡ್‌ನ ಟಿಸಿನೊದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖವನ್ನು ಮುಚ್ಚುವ ಬಟ್ಟೆಗಳ ನಿಷೇಧದ ಪರವಾಗಿ ಮತ ಹಾಕಿದರು. ಈ ಪ್ರದೇಶದಲ್ಲಿ ಅತಿ ಹೆಚ್ಚು ಇಟಾಲಿಯನ್ ಜನಸಂಖ್ಯೆಯನ್ನು ಹೊಂದಿದೆ. 26 ಸ್ವಿಸ್ ಪ್ರಾಂತ್ಯಗಳಲ್ಲಿ ಇಂತಹ ನಿಷೇಧ ಹೇರಿರುವುದು ಇದೇ ಮೊದಲು. ದೇಶದ 80 ಲಕ್ಷ ಜನಸಂಖ್ಯೆಯಲ್ಲಿ ಸುಮಾರು 3 ಲಕ್ಷ 50 ಸಾವಿರ ಮುಸ್ಲಿಮರಿದ್ದಾರೆ.
 
ಬಲ್ಗೇರಿಯಾ:
ಅಕ್ಟೋಬರ್ 2016 ರಲ್ಲಿ ಬಲ್ಗೇರಿಯನ್ ಸರ್ಕಾರವು ಅಂಗೀಕರಿಸಿದ ಕಾನೂನಿನ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಧರಿಸುವ ಮಹಿಳೆಯರಿಗೆ ದಂಡ ವಿಧಿಸಲಾಗುತ್ತದೆ ಅಥವಾ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಡಿತಗೊಳಿಸಲಾಗುತ್ತದೆ.



Read more

[wpas_products keywords=”deal of the day”]