Karnataka news paper

ನಿಮ್ಗೆ ಅದೃಷ್ಟ ಇತ್ತು ಸಿಎಂ ಅದ್ರಿ, ನಂಗೂ ನಿಮ್ಮಷ್ಟೇ ಅನುಭವ ಇದೆ, ಟಾರ್ಗೆಟ್ ಮಾಡಬೇಡಿ: ಸಿದ್ದುಗೆ ಸೋಮಣ್ಣ ಗುದ್ದು


ಮೈಸೂರು: ಪದೇಪದೆ ನನ್ನನ್ನು ಕೆಣಕಬೇಡಿ.ನೂರು ಬಾರಿ ಸುಳ್ಳು ಹೇಳಿದರೂ ಅದು ಸತ್ಯ ಆಗಲ್ಲ. ಮನೆ ನೀಡಿರೋ ವಿಚಾರವಾಗಿ ನಿಮ್ಮ ಕ್ಷೇತ್ರ ಬಾದಾಮಿಗೆ ಬಂದು ಚರ್ಚೆ ಮಾಡಲು ನಾನು ಸಿದ್ಧ, ನೀವು ಸಿದ್ದರಿದ್ದೀರಾ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಸತಿ ಸಚಿವ ವಿ ಸೋಮಣ್ಣ ಸವಾಲು ಹಾಕಿದರು.

ಬಿಜೆಪಿ ಸರಕಾರ ಒಂದೂ ಮನೆಯನ್ನು ನೀಡಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ವಿ.ಸೋಮಣ್ಣ ಗರಂ ಆದರು.

ನಾನು ನಿಮ್ಮ ಗರಡಿಯಲ್ಲೇ ಇದ್ದವನು. ನಿಮಗೆ ಅದೃಷ್ಟ ಇತ್ತು ಸಿಎಂ ಆದಿರಿ, ನನಗೂ ಎಲ್ಲಾ ಅರ್ಹತೆ ಇದೆ. ಹಳೆದನ್ನು ಮರೆಯದೆ ಮೆಲುಕು ಹಾಕುತ್ತಿರಿ. ನಾಲಗೆ ಮೇಲೆ ಹಿಡಿತವಿರಲಿ. ಎಲ್ಲರನ್ನೂ ಒಂದೇ ರೀತಿ ನೋಡಬೇಡಿ ಎಂದು ಗದ್ಗದಿತರಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನನ್ನು ಕೆಣಕಿದರೆ ಬಾದಾಮಿಗೆ ಬರುತ್ತೇನೆ: ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಸೋಮಣ್ಣ!

ಸಿದ್ದರಾಮಯ್ಯ ಮಾಡಿದ್ದನ್ನ ನಾವು ಸರಿಮಾಡಿದ್ದೇವಿ. ಅವರ ಕಾಲದಲ್ಲಿ ಬರೀ ಘೋಷಣೆ ಆಗಿತ್ತು. ನಾವು ಮನೆ ಕಟ್ಟಿಕೊಡುತ್ತಿದ್ದೇವೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ರಾಜಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಬೇಡಿ. ನಾವು ಕೊಟ್ಟಿದ್ದು, ನೀವು ಕೊಟ್ಟಿದ್ದು ಅನ್ನೋದಲ್ಲಿ. ಜನರಿಗೆ ಮನೆ ಸಿಗಬೇಕು. ಸಿದ್ದರಾಮಯ್ಯ ಸಹ ಮನೆಯಿಂದು ತಂದು ಕೊಟ್ಟಿಲ್ಲ, ನಾನು ಸಹ ಮನೆಯಿಂದ ತಂದು ಕೊಡಲ್ಲ.ಇನ್ನು ಮುಂದೆಯಾದರೂ ಸೋಮಣ್ಣನನ್ನು ಟಾರ್ಗೆಟ್ ಮಾಡುವುದನ್ನ ಬಿಡಿ ಅಂತ ಖಡಕ್ಕಾಗಿ ತಿಳಿಸಿದರು.

ನಿಮ್ಮಷ್ಟೇ ಅನುಭವ ಇದೆ..!

ಸಿದ್ದರಾಮಯ್ಯ ನನ್ನನ್ನು ಟಾರ್ಗೆಟ್ ಮಾಡೋದನ್ನ ಬಿಡಲಿ. ಸತ್ಯವನ್ನು ಅರಿತು ಮಾತಾಡಲಿ. ಅವರ ಮೇಲೆ ಗೌರವವಿಟ್ಟು ಇಷ್ಟು ದಿನ ಸುಮ್ಮನಿದ್ದೆ. ನನ್ನ ತಾಳ್ಮೆ ಪರೀಕ್ಷೆ ಬೇಡ. ನಾನು ಭ್ರಷ್ಟಾಚಾರ ಮಾಡಿದ್ದರೆ. ಸಂಪೂರ್ಣ ತನಿಖೆ ಆಗಲಿ. ಹಗುರವಾಗಿ ಮಾತಾಡೋದನ್ನ ನಿಲ್ಲಿಸಲಿ. ಇದೆ ಪ್ರವೃತ್ತಿ ಮುಂದುವರಿದರೆ ಸೂಕ್ತ ಉತ್ತರ ಕೊಡುತ್ತೇನೆ. ಹೆದರಿಕೊಂಡು ಮಂತ್ರಿಗಿರಿ ಮಾಡಲ್ಲ ಅಂತ ಕಿಡಿಕಾರಿದರು.

ಹಿಜಾಬ್ ಕೇಸರಿ ಪ್ರಕರಣ ವಿವಾದಕ್ಕೆ ಸೋಮಣ್ಣ ಪ್ರತಿಕ್ರಿಯೆ ನೀಡಿ ಗಲಾಟೆ ಸೃಷ್ಟಿ ಮಾಡೋ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ಕೊಟ್ಟರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರ್ತೇನೆ: ಕುಮಾರಸ್ವಾಮಿ ರಾಜಕೀಯ ದಾಳ

ಯಾರು ಯಾರು ಏನ್ ಮಾಡ್ತಿದ್ದಾರೆ ಅನ್ನೊದನ್ನ ಸರಕಾರ ಗಂಭೀರವಾಗಿ ಗಮನಿಸುತ್ತಿದೆ. ಇಲ್ಲಿ ಯಾರು ದೊಡ್ಡವರಲ್ಲ, ಎಲ್ಲರಿಗಿಂತ ದೊಡ್ಡದು ದೇಶ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಸಂಘಟನೆಗಳನ್ನು ಬಗ್ಗು ಬಡಿಯುವ ಕೆಲಸವನ್ನ ಸರಕಾರ ಮಾಡಲಿದೆ. ಘಜಿನಿ ಮಹಮ್ಮದ್ 17 ಬಾರಿ ದಂಡೆತ್ತಿ ಬಂದ. ಅನೇಕ ರಾಜರ ಮೇಲೆ ದಾಳಿ ಮಾಡಿದರು. ಆದರೂ ಭಾರತ ಭಾರತವಾಗಿಯೇ ಇದೆ ಅಂತ ವಿ ಸೋಮಣ್ಣ ತಿಳಿಸಿದರು.



Read more

[wpas_products keywords=”deal of the day sale today offer all”]