Karnataka news paper

ಇಪಿಎಫ್‌ ಖಾತೆದಾರರು ಆನ್‌ಲೈನ್‌ನಲ್ಲೇ ನಾಮಿನಿ ಬದಲಿಸುವುದು ಹೇಗೆ? ಇಲ್ಲಿದೆ ಮಾಹಿತಿ!


ಹೈಲೈಟ್ಸ್‌:

  • ಯಾವುದೇ ಹಣಕಾಸು ವ್ಯವಹಾರದಲ್ಲಿ ನಾಮಿನಿಯನ್ನು ನಮೂದಿಸುವುದು ಅವಶ್ಯ
  • ಇಪಿಎಫ್ ಖಾತೆದಾರರು ಕೂಡ ತಮ್ಮ ಖಾತೆಗೆ ಹತ್ತಿರದ ಸಂಬಂಧಿಯನ್ನು ನಾಮಿನಿ ಮಾಡಬೇಕು
  • ಆನ್‌ಲೈನ್‌ ಮೂಲಕ ನಾಮಿನಿಯನ್ನು ಬದಲಿಸುವುದು ಹೇಗೆಂಬ ಮಾಹಿತಿ ಇಲ್ಲಿದೆ

ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆದಾರರು ತಮ್ಮ ಖಾತೆಗೆ ಹತ್ತಿರದ ಸಂಬಂಧಿಯನ್ನು ನಾಮಿನಿ ಮಾಡುವುದು ಅವಶ್ಯಕ. ಇದರಿಂದಾಗಿ ಅವರ ಮರಣದ ಸಂದರ್ಭದಲ್ಲಿ ನಾಮಿನಿ ಸುಲಭವಾಗಿ ಹಣ ಪಡೆಯಬಹುದು.

ಈಗಾಗಲೇ ನಾಮಿನೇಷನ್‌ ಮಾಡಿದ್ದರೂ, ಕೆಲವೊಮ್ಮೆ ನಾಮಿಗಳ ಹೆಸರು ಬದಲಿಸಬೇಕಾದ ಸಂದರ್ಭ ಬರಬಹುದು. ಇದೀಗ ಇಪಿಎಫ್ ಸದಸ್ಯರು ಆನ್‌ಲೈನ್‌ನಲ್ಲಿಯೇ ಇಪಿಎಫ್ ನಾಮಿನೇಷನ್ ಬದಲಿಸಬಹುದು. ಅಲ್ಲದೆ ನಾಮಿನಿಯನ್ನು ಬದಲಿಸಲು ಇಪಿಎಫ್‌ ಸದಸ್ಯರು ತಮ್ಮ ಉದ್ಯೋಗದಾತರನ್ನು ಕೇಳಿಕೊಳ್ಳುವ ಅಗತ್ಯವಿಲ್ಲ. ನೇರವಾಗಿ EPFO UAN ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ನಾಮಿನಿಯನ್ನು ಬದಲಿಸಬಹುದು.

25 ಕೋಟಿ PF ಖಾತೆಗಳಿಗೆ 8.5% ಬಡ್ಡಿ ಮೊತ್ತ ಜಮಾ!..ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಭಾರತದಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ನೋಂದಾಯಿಸಲಾದ ಕಂಪನಿಗಳಲ್ಲಿ ಕೆಲಸ ಮಾಡುವ ಸಂಬಳದ ಉದ್ಯೋಗಿಗಳಿಗೆ ಉದ್ಯೋಗಿ ಭವಿಷ್ಯ ನಿಧಿಯು ಕಡ್ಡಾಯವಾದ ಕಡಿತವಾಗಿದೆ. ಪ್ರತಿಯೊಬ್ಬ ಸದಸ್ಯರು ಅವರು ಅಥವಾ ಅವಳು ಅಕಾಲಿಕವಾಗಿ ಮರಣಹೊಂದಿದರೆ ನಿಧಿಯ ಸ್ವತ್ತುಗಳನ್ನು ಸ್ವೀಕರಿಸಲು ಅಭ್ಯರ್ಥಿ ಅಥವಾ ನಾಮಿನಿಯನ್ನು ಹೆಸರಿಸಬೇಕು. ಹೀಗಾಗಿ, ಭವಿಷ್ಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಯಾವುದೇ ಕಾನೂನು ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ನಾಮನಿರ್ದೇಶನದ ವಿವರಗಳನ್ನು ನವೀಕೃತವಾಗಿರಿಸುವುದು ಅತ್ಯಗತ್ಯ.

ಹೀಗಾಗಿ ಆನ್‌ಲೈನ್‌ ಮೂಲಕ ಇಪಿಎಫ್‌ ನಾಮಿನಿ ಬದಲಿಸುವುದು ಹೇಗೆ? ಈ ಕುರಿತು ಹಂತಹಂತದ ಮಾಹಿತಿ ಇಲ್ಲಿದೆ.

  • ಇಪಿಎಫ್‌ಒ ವೆಬ್‌ಸೈಟ್‌ (epfindia.gov.in)ಗೆ ಲಾಗಿನ್‌ ಆಗಿ
  • ‘ಸರ್ವೀಸ್‌’ ಟ್ಯಾಬ್‌ ಕೆಳಗಿನ ‘ಫಾರ್‌ ಎಂಪ್ಲಾಯೀಸ್‌’ (For Employees) ಬಟನ್‌ ಒತ್ತುವ ಮೂಲಕ ಡ್ರಾಪ್‌ ಡೌನ್‌ ಮೆನುವಿಗೆ ಹೋಗಿ
  • ನಿಮ್ಮ ಯುಎಎನ್‌ ಮತ್ತು ಪಾಸ್‌ವರ್ಡ್‌ ಹಾಗೂ ಕ್ಯಾಪ್ಚಾ ಕೋಡ್‌ ಮೂಲಕ ಲಾಗಿನ್‌ ಆಗಿ
  • ಮ್ಯಾನೇಜ್‌ ಟ್ಯಾಬ್‌ ಕೆಳಗಿರುವ ಇ-ನಾಮಿನೇಷನ್‌ ಬಟನ್‌ ಕ್ಲಿಕ್‌ ಮಾಡಿ

UAN ಜತೆ ಆಧಾರ್‌ ಲಿಂಕ್‌ ಮಾಡಲು ಆಗಸ್ಟ್‌ 31 ಕಡೆಯ ದಿನ, ಲಿಂಕ್‌ ಮಾಡುವುದು ಹೇಗೆ?

ವಿಶೇಷ ಸೂಚನೆ: ನೀವು ಹೊಸ ನಾಮಿನಿಯನ್ನು ಸೇರಿಸುವುದು ಅಥವಾ ನಾಮಿನಿ ಹೆಸರನ್ನು ಬದಲಿಸುವ ಮುನ್ನ ನಿಮ್ಮ ಇತ್ತೀಚಿನ ಪ್ರೊಫೈಲ್‌ ಫೋಟೋವನ್ನು ಅಪ್ಡೇಟ್‌ ಮಾಡಬೇಕು. ಪ್ರೊಫೈಲ್‌ ಫೋಟೋ ಅಪ್ಡೇಟ್‌ ಆಗಿದ್ದರೆ ಮಾತ್ರವೇ ನಾಮಿನಿ ಬದಲಿಸಲು ಸಾಧ್ಯವಾಗುತ್ತದೆ.

  • ವಿಳಾಸದ ಪುಟವನ್ನು ಅಪ್ಡೇಟ್‌ ಮಾಡಿಲ್ಲದಿದ್ದರೆ, ಅಪ್ಡೇಟ್‌ ಮಾಡಿ.
  • ಫ್ಯಾಮಿಲಿ ಡಿಕ್ಲೆರೇಷನ್‌ ಬದಲಿಸಲು ‘Yes’ ಬಟನ್‌ ಆಯ್ಕೆ ಮಾಡಿ
  • ನಾಮಿಯ ಎಲ್ಲ ಮಾಹಿತಿಯನ್ನು ನಮೂದಿಸಿ
  • ನೀವು ಮತ್ತೊಬ್ಬ ನಾಮಿನಿಯ ಮಾಹಿತಿಯನ್ನೂ ನಮೂದಿಸಿ ಸೇವ್‌ ಮಾಡಬಹುದು. ಆದರೆ, ಇದು ನಿಮ್ಮ ಇಚ್ಛೆಗೆ ಬಿಟ್ಟಿದ್ದು.
  • ನಾಮಿನಿಗಳ ಪೈಕಿ ಯಾರಿಗೆ ಎಷ್ಟು ಪಾಲು ಸಿಗಬೇಕು ಎಂಬುದನ್ನು ತಿಳಿಸಿ.
  • ಇಪಿಎಫ್‌ ನಾಮಿನೇಷನ್‌ ಅನ್ನು ಸೇವ್‌ ಮಾಡಿ.
  • ಇಪಿಎಫ್‌ ನಾಮಿನೇಷನ್‌ ಸೇವ್‌ ಆದ ಕೂಡಲೇ ಒಂದು ಮೆಸೇಜ್‌ ಗೋಚರಿಸುತ್ತದೆ. ಅದಲ್ಲಿ ಎಲ್ಲ ಮಾಹಿತಿಯೂ ಸರಿ ಇದೆಯೇ ನೋಡಿ.
  • ಇ-ಸೈನ್‌ ಐಕಾನ್‌ ಅನ್ನು ಕ್ಲಿಕ್‌ ಮಾಡಿ ಮತ್ತು ಪಾಪ್‌-ಅಪ್‌ ಮೆಸೇಜ್ ಪಡೆಯಿರಿ
  • ವರ್ಚುವಲ್‌ ಐಡಿಯನ್ನು ಜನರೇಟ್‌ ಮಾಡಿ
  • ಆಧಾರ್‌ ನಂಬರ್ ಅಥವಾ ವರ್ಚುವಲ್‌ ಐಡಿಯನ್ನು ಎಂಟರ್‌ ಮಾಡಿ
  • ಒಟಿಪಿಯನ್ನು ಎಂಟರ್‌ ಮಾಡಿ ಸಬ್ಮಿಟ್‌ ಮಾಡಿ

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.



Read more