Karnataka news paper

ಬೆದರಿಕೆ ಕರೆ ಮಾಡುವವರು ಹೇಡಿಗಳು: ಸಚಿವ ಈಶ್ವರಪ್ಪ


ಚಿಕ್ಕಮಗಳೂರು: ‘ಬೆದರಿಕೆ ಕರೆ ಮಾಡುವವರು ಹೇಡಿಗಳು. ತಾಕತ್ತು ಇದ್ದರೆ ಎದುರು ಮಾತನಾಡಬೇಕು. ಹೇಡಿಗಳಿಗೆ ಹೆದರಲ್ಲ’ ಎಂದು ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದರು. 

ಬೆದರಿಕೆ ಕರೆಗಳು ಬಂದಿರುವುದಾಗಿ ಉಡುಪಿ ಶಾಸಕ ರಘುಪತಿ ಭಟ್‌ ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ‘ಬೆದರಿಕೆ ಕರೆಗಳು ನನಗೂ ಬಹಳ ಬಂದಿದ್ದವು. ಈ ಫೀಲ್ಡಿಗೆ ಇಳಿಯುವ ಸಂದರ್ಭದಲ್ಲಿ ಇದೆಲ್ಲವನ್ನು ಎದುರಿಸಲು ಸಿದ್ಧರಿರಬೇಕು. ಪೊಲೀಸ್‌ ಇಲಾಖೆ, ಸಮಾಜ ನಮ್ಮೊಂದಿಗೆ ಇದೆ. ಆ ಧೈರ್ಯದಲ್ಲೇ ಸಾಗುತ್ತಿದ್ದೇವೆ’ ಎಂದರು. 



Read more from source

[wpas_products keywords=”deal of the day sale today kitchen”]