Karnataka news paper

IPL Auction 2022- ಶಾರುಖ್‌ ಗೈರು: ಕೆಕೆಆರ್ ಬಿಡ್ಡಿಂಗ್‌ನಲ್ಲಿ ಭಾಗಿಯಾದ ಮಕ್ಕಳಾದ ಆರ್ಯನ್‌, ಸುಹಾನಾ ಖಾನ್‌


ಬೆಂಗಳೂರು: 2020ರ ಐಪಿಎಲ್‌ ಹರಾಜಿನ ವೇಳೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಟೇಬಲ್‌ನಲ್ಲಿ ಇದೇ ಮೊದಲ ಬಾರಿಗೆ ಮಾಲೀಕ ಶಾರುಖ್‌ ಖಾನ್‌ ಅವರ ಮಕ್ಕಳು ಕಾಣಿಸಿಕೊಂಡಿದ್ದಾರೆ. ಶಾರುಖ್‌ ಈ ಬಾರಿಯ ಹರಾಜಿನಲ್ಲಿ ಗೈರಾಗಿದ್ದು, ಅವರ ಇಬ್ಬರು ಮಕ್ಕಳು ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಕೆಕೆಆರ್‌ ತಂಡದ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿದ್ದಾರೆ.

ಶಾರುಖ್‌ ಪುತ್ರ ಅರ್ಯನ್‌ ಖಾನ್‌ ಹಾಗೂ ಸುಹಾನಾ ಖಾನ್‌ ತಂಡದ ಆಡಳಿತ ಮಂಡಳಿಯವರೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವವಹಿಸಿದ್ದಾರೆ.

IPL 2022 Auction: ಅತ್ಯಂತ ದುಬಾರಿ ಮೊತ್ತಕ್ಕೆ ಕೆಕೆಆರ್‌ ಪಾಲಾದ ಅಯ್ಯರ್‌!
23 ವರ್ಷದ ಆರ್ಯನ್ ಖಾನ್‌ ಕಳೆದ ವರ್ಷ ಡ್ರಗ್ಸ್‌ ಪ್ರಕರಣವೊಂದರಲ್ಲಿ, ಮಾದಕ ವಸ್ತು ನಿಯಂತ್ರಣ ದಳದಿಂದ ಬಂಧನಕ್ಕೆ ಒಳಗಾಗಿದ್ದರು. ಹಡಗೊಂದರಲ್ಲಿ ನಡೆದ ಡ್ರಗ್ಸ್‌ ಪಾರ್ಟಿ ಸಂಬಂಧ ಆರ್ಯನ್‌ ಖಾನ್‌ನನ್ನು ಬಂಧಿಸಲಾಗಿತ್ತು. ಸುಮಾರು ಮೂರು ವಾರಗಳ ಕಾಲ ಮುಂಬೈನ್‌ ಅರ್ಥರ್‌ ರೋಡ್‌ ಜೈಲಿನಲ್ಲಿ ವಿಚಾರಣೆ ಎದುರಿಸಿದ್ದ ಆರ್ಯನ್‌ ಸದ್ಯ ಜಾಮೀನು ಮೇಲೆ ಹೊರಗಡೆ ಇದ್ದಾರೆ.

ಜಾಮೀನು ಪಡೆದ ಆರ್ಯನ್‌ ಖಾನ್‌ ತನ್ನ ಸಹೋದರಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಶುಕ್ರವಾರ ನಡೆದ ಹರಾಜು ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಟೇಬಲ್‌ನಲ್ಲಿ ಶಾರುಖ್‌ ಮಕ್ಕಳು ಕಾಣಿಸಿಕೊಂಡಿದ್ದರು. ಈ ಫೋಟೋವನ್ನು ಐಪಿಎಲ್‌ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಇದು ಸೋಶಿಯಲ್‌ ಮಿಡಿಯಾಗಳಲ್ಲಿ ಭಾರೀ ವೈರಲ್‌ ಕೂಡ ಆಗಿತ್ತು.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಶಾರುಖ್‌ ಖಾನ್‌ ಗೈರಾಗಿದ್ದು, ಅವರ ಗೈರಿಗೆ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಈ ಹಿಂದೆ ಗಾನಕೋಗಿಲೆ ಲತಾ ಮಂಗೇಶ್ಕರ್‌ ಅವರ ನಿಧನದಲ್ಲಿ ಶಾರುಖ್‌ ಸಾರ್ವಜನಿಕವಾಗಿ ದರ್ಶನ ನೀಡಿದ್ದರು.

IPL 2022 Auction: ವೇದಿಕೆ ಮೇಲೆ ಹಠಾತ್‌ ಕುಸಿದು ಬಿದ್ದ ಹರಾಜು ನಿರೂಪಕ!
ಸುಹಾನಾಾ ಖಾನ್‌ ಇದೇ ಮೊದಲ ಬಾರಿಗೆ ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಯನ್‌ ಖಾನ್‌ ಈ ಹಿಂದಿನ ಹರಾಜಿನಲ್ಲೂ ಹಾಜರಿದ್ದರು.

ಶಾರುಖ್‌ ಖಾನ್‌ ಹಾಗೂ ಜೂಹಿ ಚಾವ್ಲಾ ಒಡೆತನದ ಕೋಲ್ಕತಾ ನೈಟ್‌ ರೈಡರ್ಸ್‌, ಈಗಾಗಲೇ ಎರಡು ಬಾರಿ ಚಾಂಪಿಯನ್‌ ಟ್ರೋಫಿಗೆ ಮುತ್ತಿಕ್ಕಿದೆ. ಈ ಎರಡೂ ಬಾರಿಯೂ ಗೌತಮ್‌ ಗಂಭೀರ್‌ ಅವರು ತಂಡವನ್ನು ಮುನ್ನಡೆಸಿದ್ದರು.

ಅಂದಹಾಗೆ ಕಳೆದ ಬಾರಿಯ ಐಪಿಎಲ್‌ ಹರಾಜಿನಲ್ಲಿ ಜೂಹಿ ಚಾವ್ಲಾ ಅವರ ಪುತ್ರಿ 19 ವರ್ಷದ ಜಾಹ್ನವಿ ಮೆಹ್ತಾ ಅವರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಆ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅತೀ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದರು.

IPL 2022 Auction: 8.75 ಕೋಟಿ ರೂ. ಬೆಲೆಗೆ ಲಖನೌ ಪಾಲಾದ ಹೋಲ್ಡರ್‌, ಟ್ರೋಲಾದ ರಾಯಲ್ಸ್‌!
12.5 ಕೋಟಿ ಕೊಟ್ಟು ಶ್ರೇಯಸ್‌ ಅಯ್ಯರ್‌ರನ್ನು ಖರೀದಿ ಮಾಡಿದ ಕೆಕೆಆರ್‌

ಕ್ಯಾಪ್ಟನ್‌ ಹುಡುಕಾಟದಲ್ಲಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಾಜಿ ಕಪ್ತಾನ ಶ್ರೇಯಸ್‌ ಅಯ್ಯರ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಂಡಿಯನ್ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಡೆಲ್ಲಿ ತಂಡವನ್ನು ಎರಡು ಬಾರಿ ನಾಕ್‌ಔಟ್‌ ಹಂತಕ್ಕೇರಿಸಿದ ಅನುಭವ ಹೊಂದಿರುವ ಶ್ರೇಯಸ್‌ ಅಯ್ಯರ್‌ ಸಲುವಾಗಿ ಬಿಡ್ಡಿಂಗ್‌ ವಾರ್‌ ನಡೆಸಿದ ಕೆಕೆಆರ್‌ ತಂಡ, ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಗುಜರಾತ್‌ ಟೈಟಮ್ಸ್‌ ಮತ್ತು ಲಖನೌ ಸೂಪರ್‌ ಜಯಂಟ್ಸ್‌ ತಂಡಗಳನ್ನು ಹಿಂದಿಕ್ಕಿ ಬರೋಬ್ಬರಿ 12.25 ಕೋಟಿ ರೂ. ಬೆಲೆಗೆ ಅಯ್ಯರ್‌ ಸೇವೆಯನ್ನು ತನ್ನದಾಗಿಸಿಕೊಂಡಿತು.



Read more

[wpas_products keywords=”deal of the day sale today offer all”]