“ನಾನು ಸಿನಿಮಾ ಮಾಡುವಾಗ ಬೇರೆಯವರ ನಿರೀಕ್ಷೆಗೆ ತಕ್ಕಂತೆ ನಾನು ಇರಬೇಕಿತ್ತು. ಅದು ನಿಜಕ್ಕೂ ನನಗೆ ಖುಷಿ ಕೊಡುವ ವಿಷಯ ಆಗಿರಲಿಲ್ಲ. ನಿಜಕ್ಕೂ ಅಕ್ಷಯ್ ಮದುವೆಯಾದ ಮೇಲೆ ಸ್ವಾತಂತ್ರ್ಯ ಸಿಕ್ಕಿತು ಎನ್ನಬಹುದು. ಮಗಳು ನಾಯ್ರಾ ಹೊಟ್ಟೆಯಲ್ಲಿದ್ದಾಗ ಒಂದು ಏಜೆನ್ಸಿ ಸೋಶಿಯಲ್ ಮೀಡಿಯಾಕ್ಕೆ ಬರುವಂತೆ ಹೇಳಿತು. ಸ್ಟಾರ್ ತಾಯಂದಿರ ಉದಾಹರಣೆಯನ್ನೂ ಅದು ನೀಡಿ ಸೆಕ್ಸಿ ಮದರ್, ಯೋಗ ಮಮ್ಮಿ ಇಮೇಜ್ ಸೃಷ್ಟಿ ಮಾಡಬೇಕು ಎಂದು ಹೇಳಿತು. ಫೋಟೋ ಸಮೇತ ನಿರ್ದಿಷ್ಟವಾದ ಜೀವನಶೈಲಿ ತೋರಿಸುವ ಮೂಲಕ ನಾನು ವಿಷಯವನ್ನು ಹೇಳಬೇಕು ಎಂದು ನನಗೆ ಹೇಳಲಾಗಿತ್ತು. ನಿಜ ಹೇಳಬೇಕೆಂದರೆ ನಾನು ಒಂದು ವಿಚಾರವನ್ನು ಮಾರಬೇಕಿತ್ತು” ಎಂದು ನಟಿ ಸಮೀರಾ ರೆಡ್ಡಿ ಹೇಳಿದ್ದಾರೆ.
ಸಮೀರಾ ರೆಡ್ಡಿ ದಪ್ಪಗಾಗಿದ್ದು ಹೇಗೆ?

“ನಾನು 10 ವರ್ಷ ಹಿಂದೆ ಅನುಭವಿಸಿದ ಯಾತನೆಯನ್ನು ಏಜೆನ್ಸಿ ನನ್ನ ಮೇಲೆ ಮತ್ತೆ ಹೇರಿತು ಎಂದು ಭಾವಿಸಿದೆ. ನನ್ನ ಹತ್ತಿರ ಸಾಧ್ಯವಿಲ್ಲ ಎಂದು ಅವರಿಗೆ ಹೇಳಿದೆ. ದಪ್ಪಗಾಗಿದ್ದೇನೆ, ನಾನು ನೋಡಲು ಚೆನ್ನಾಗಿ ಕಾಣಿಸುತ್ತಿಲ್ಲ. ಮಗುವಿಗೆ ಹಾಲುಣಿಸಬೇಕು, ರಾತ್ರಿ ನಿದ್ದೆ ಇಲ್ಲ, ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬಂದಿದೆ, ನನ್ನೊಳಗೆ ಖುಷಿಯ ಕೊರತೆ ಇದೆ ಎಂದು ಅವರಿಗೆ ಹೇಳಿದ್ದೆ” ಎಂದಿದ್ದಾರೆ ಸಮೀರಾ ರೆಡ್ಡಿ
“ನನಗೆ 2015ರಲ್ಲಿ ಮಗು ಬೇಕಿತ್ತು, ಆದರೆ ಮನಸ್ಸು ರೆಡಿ ಇರಲಿಲ್ಲ. ಒಂದು ಗೊಂದಲ ನನ್ನಲ್ಲಿ ಸೃಷ್ಟಿ ಆಗಿತ್ತು. ನಾನು ಆಗ 32 ಕೆಜಿ ದಪ್ಪಗಾಗಿದ್ದೆ. ಗರ್ಭಾವಸ್ಥೆಯಲ್ಲಿ ನನಗೆ ನೀಡುತ್ತಿದ್ದ ಇಂಜೆಕ್ಷನ್, ಹಾರ್ಮೋನಲ್ ಬದಲಾವಣೆಗಳು ನನ್ನನ್ನು ದಪ್ಪಗಾಗುವಂತೆ ಮಾಡಿತು. ನನ್ನನ್ನು ನೋಡಿಕೊಂಡರೆ ನನಗೆ ಭಯ ಆಗುತ್ತಿತ್ತು. ನನ್ನ ದೇಹದ ಶೇಪ್ ನಾಶವಾಗಿತ್ತು. ಹಾರ್ಮೋನಲ್ ಅಸಮತೋಲನ ಸದಾ ನಾನು ಅಳುವಂತೆ ಮಾಡುತ್ತಿತ್ತು” ಎಂದಿದ್ದಾರೆ ಸಮೀರಾ ರೆಡ್ಡಿ
ಮುದ್ದಾದ ಮಗ, ಒಳ್ಳೆಯ ಗಂಡ ಇದ್ದರೂ ಕೂಡ ‘ವರದನಾಯಕ’ ಸಿನಿಮಾ ನಟಿ ಸಮೀರಾ ರೆಡ್ಡಿಗ್ಯಾಕೆ ಈ ಚಿಂತೆ?
ಪುರುಷ, ಮಹಿಳೆ ಫಾಲೋವರ್ಸ್ ನನಗೆ ಬೇಕಿತ್ತು: ಸಮೀರಾ ರೆಡ್ಡಿ

“ತೂಕ ಏರಿಕೆ, ಬಿಳಿ ಕೂದಲು, ಮಗುವಿಗೆ ಜನ್ಮ ನೀಡಿದ ನಂತರ ಬರುವ ಸಮಸ್ಯೆಗಳ ಬಗ್ಗೆ ನಾನು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಲು ಆರಂಭಿಸಿದೆ. ಸಹಜವಾಗಿ ಜನರು ಈ ರೀತಿ ಸಮಸ್ಯೆಗಳಿಂದ ಓಡಿ ಹೋಗುತ್ತಾರೆ. ನನ್ನ ಸಂಭಾಷಣೆಯಲ್ಲಿ ಖುಷಿ ಹುಡುಕುವ ಪುರುಷ, ಮಹಿಳೆ ಫಾಲೋವರ್ಸ್ ನನಗೆ ಬೇಕಿತ್ತು. ನಾನು ಯಾಕೆ ತೂಕ ಕಳೆದುಕೊಳ್ಳುತ್ತಿಲ್ಲ, ಬಿಳಿ ಕೂದಲಿಗೆ ಏನೂ ಮಾಡುತ್ತಿಲ್ಲ ಎಂದು ಜನರು ಕೇಳಿದ್ದಿದೆ. ಇನ್ನು ಟ್ರೋಲ್ಸ್ ನನಗೆ ಎಂದಿಗೂ ಸಮಸ್ಯೆ ಆಗಲೇ ಇಲ್ಲ. ಟ್ರೋಲ್ ಮಾಡೋದು ಅವರ ತಪ್ಪಲ್ಲ. ನಾನು ಫಾಲೋವರ್ಸ್ ಕಳೆದುಕೊಳ್ಳುತ್ತಿದ್ದೇನೆ ಎಂದು ಬೇಸರ ಮಾಡಿಕೊಂಡಿರಲೇ ಇಲ್ಲ. ನನ್ನನ್ನು ಸೋಶಿಯಲ್ ಮೀಡಿಯಾದಲ್ಲಿ ಅನ್‌ಫಾಲೋ ಮಾಡುತ್ತಿರುವವರು ಸಂಭಾಷಣೆಗೆ ರೆಡಿ ಇಲ್ಲ ಅನಿಸತ್ತೆ” ಎಂದಿದ್ದಾರೆ ಸಮೀರಾ ರೆಡ್ಡಿ
ಮಗಳು ಹುಟ್ಟಿದಮೇಲೆ ಮತ್ತೆ 10 ಕೆಜಿ ದಪ್ಪಗಾಗಿದ್ದ ಸಮೀರಾ

“ನನಗೆ ಬೆಂಬಲ ಕೊಡುವ ಬದಲು ಜನರು ಜಡ್ಜ್ ಮಾಡಲು ಆರಂಭಿಸಿದ್ದರು. ಕೆಲ ನಟಿಯರು ಮಗುವಿಗೆ ಜನ್ಮ ನೀಡಿ 3 ತಿಂಗಳೊಳಗೆ ಮತ್ತೆ ಮೊದಲಿನಂತೆ ಆದರು ಅಂತ ಕೇಳಿದ್ದೆ, ಆದರೆ ಅದು ಹೇಗೆ ಅಂತ ಗೊತ್ತಿರಲಿಲ್ಲ. ಮಾನಸಿಕ, ಬೌದ್ಧಿಕವಾಗಿ ನಾನು ಕುಸಿದು ಹೋಗಿದ್ದೆ. ಮತ್ತೆ ಮೊದಲಿನ ಸ್ಥಿತಿಗೆ ಬರಲು ಒಂದೂವರೆ ವರ್ಷ ಬೇಕಾಯ್ತು. ಮೊದಲ ಮಗು ಆದಮೇಲೆ ಸ್ವಲ್ಪ ತೂಕ ಕಳೆದುಕೊಂಡೆ, ಆಮೇಲೆ 2019ರಲ್ಲಿ ಮಗಳು ನಾಯ್ರಾ ಹುಟ್ಟುವಾಗ 10 ಕೆಜಿ ದಪ್ಪಗಾದೆ. ಈಗ ನಾಯ್ರಾಗೆ ಎರಡೂವರೆ ವರ್ಷ. ಈಗ ಮತ್ತೆ ನಾನು ತೂಕ ಕಳೆದುಕೊಳ್ಳುತ್ತಿದ್ದೇನೆ” ಎಂದಿದ್ದಾರೆ ಸಮೀರಾ ರೆಡ್ಡಿ
ಕೆಟ್ಟದಾಗಿ ಕಾಮೆಂಟ್ ಮಾಡೋರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ – ನಟಿ ಸಮೀರಾ ರೆಡ್ಡಿ
ನನ್ನ ಎದೆ ಬಗ್ಗೆ ಕೂಡ ಕಾಮೆಂಟ್ ಮಾಡಲಾಯ್ತು: ಸಮೀರಾ ರೆಡ್ಡಿ

ನೀವು ಸೌಂದರ್ಯವನ್ನು ಯಾಕೆ ಅಪ್ರತಿನಿಧಿಸುತ್ತಿದ್ದೀರಿ ಎಂದು ಮಹಿಳೆಯೊಬ್ಬಳು ನನಗೆ ಪ್ರಶ್ನೆ ಮಾಡಿದ್ದರು. ಅದೇ ನನ್ನ ವ್ಯಾಖ್ಯಾನವಾಗಿತ್ತು. ನಾನು ಸ್ಟ್ರೆಚ್ ಮಾರ್ಕ್ಸ್, ವಾಸ್ತವದ ಬಗ್ಗೆ ಮಾತನಾಡಿದರೆ ಕೆಲವರು ಬೇಸರ ಮಾಡಿಕೊಳ್ಳಬಹುದು. ಆದರೆ ಅದೆಲ್ಲವೂ ಅಸ್ತಿತ್ವದಲ್ಲಿದೆ” ಎಂದಿದ್ದಾರೆ ಸಮೀರಾ ರೆಡ್ಡಿ
“ನಾನು ಎತ್ತರ ಹಾಗೂ ಸಹಜವಾಗಿ ದಪ್ಪಗಿರುವ ಹುಡುಗಿ. ಕೆಲವರ ಮಧ್ಯೆ ನಾನು ನನ್ನ ತೂಕವನ್ನು ಮರೆಮಾಚಬೇಕಾಗುತ್ತದೆ. 10 ದಿನ ನಾನು ಕ್ರೇಜಿಯಾಗಿ ವರ್ಕೌಟ್ ಮಾಡುತ್ತಿದ್ದೆ, ಡಯೆಟ್ ಫಾಲೋ ಮಾಡುತ್ತಿದ್ದೆ. ಅದೆಲ್ಲವೂ ಮಾನಸಿಕವಾಗಿ ನನಗೆ ಹಿಂಸೆ ನೀಡುತ್ತಿತ್ತು. ಅಯ್ಯೋ ಇವಳು ದಪ್ಪಗಾದಳು. ಅವಳು ಆ ಸಿನಿಮಾ ಅವಕಾಶ ಕಳೆದುಕೊಂಡಳು, ನಾವು ಅವಳು ದಪ್ಪ ಅಂದುಕೊಂಡಿದ್ವಿ, ಆದರೆ ಎದೆ ಮಾತ್ರ ದಪ್ಪ ಇದೆ ಎನ್ನುವ ಕಾಮೆಂಟ್‌ಗಳು ನನ್ನನ್ನು ಮಾನಸಿಕವಾಗಿ ಕುಗ್ಗಿಸಿತು. ನಾನು ಹೇಗೆ ಕಾಣುತ್ತಿದ್ದೇನೆ ಎಂಬುದರ ಬಗ್ಗೆ ನನಗೆ ಗೊಂದಲ ಆಯ್ತು. ನಮ್ಮ ಬಗ್ಗೆ ನಾವೇ ಅಸಹ್ಯ ಪಟ್ಟುಕೊಳ್ಳುವುದು ಕೊಳಕು ಎಂದು ಭಾವಿಸುವೆ” ಎಂದಿದ್ದಾರೆ ಸಮೀರಾ ರೆಡ್ಡಿ
Read more
[wpas_products keywords=”deal of the day party wear dress for women stylish indian”]