Online Desk
ಲಾಹೋರ್: ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸದಸ್ಯ ಅಮೀರ್ ಲಿಯಾಕತ್ 18 ವರ್ಷದ ಯುವತಿಯನ್ನು ವಿವಾಹವಾಗಿದ್ದಾರೆ. ಅವರ ಹೊಸ ಪತ್ನಿ ಸೈಯದಾ ಡೇನಿಯಾ ಷಾ ಅವರಿಗೆ 31 ವರ್ಷ ಕಿರಿಯರು.
ತಮ್ಮ ಮೂರನೇ ಮದುವೆಯ ಫೋಟೋವನ್ನು ಸ್ವತಃ ಡಾ.ಲಿಯಾಖತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಲಿಯಾಕತ್ ತನ್ನ ಎರಡನೇ ಮದುವೆಯನ್ನು ಕೆಟ್ಟ ಸಮಯ ಎಂದು ಪರಿಗಣಿಸಿದ್ದಾರೆ. ಈ ಬಗ್ಗೆ ಬರೆದಿರುವ ಲಿಯಾಕತ್ ಕಳೆದ ರಾತ್ರಿ, 18 ವರ್ಷದ ಸೈಯದಾ ಡೇನಿಯಾ ಶಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ಅವರು ದಕ್ಷಿಣ ಪಂಜಾಬ್‌ನ ಲೋಧ್ರಾನ್‌ನ ಗೌರವಾನ್ವಿತ ನಜೀಬ್ ಉತ್ ತರೈನ್ “ಸಾದತ್” ಕುಟುಂಬಕ್ಕೆ ಸೇರಿದವರು. ದಯವಿಟ್ಟು ನಮಗಾಗಿ ಪ್ರಾರ್ಥಿಸಿ ಎಂದು ನನ್ನ ಎಲ್ಲಾ ಹಿತೈಷಿಗಳಲ್ಲಿ ನಾನು ವಿನಂತಿಸಲು ಬಯಸುತ್ತೇನೆ. ನಾನು ಕತ್ತಲೆಯ ಸುರಂಗವನ್ನು ದಾಟಿದ್ದೇನೆ, ಅದೊಂದು ದೊಡ್ಡ ತಪ್ಪಾಗಿತ್ತು ಎಂದಿದ್ದಾರೆ.
ಇದು ಅಮೀರ್ ಲಿಯಾಖತ್ ಅವರ ಮೂರನೇ ವಿವಾಹವಾಗಿದ್ದು, ಅವರ ಎರಡನೇ ಪತ್ನಿ ವಿಚ್ಛೇದನವನ್ನು ಘೋಷಿಸಿದ ದಿನವೇ ಇದು ನಡೆದಿದೆ.
ಇದನ್ನೂ ಓದಿ: ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡುವುದು ಬೇಡ: ಪಾಕ್ ಗೆ ಓವೈಸಿ ತಿರುಗೇಟು
ಡಾ. ಲಿಯಾಕತ್ ಅವರು ಸಂಸದರ ಜೊತೆಗೆ ಪಾಕಿಸ್ತಾನದಲ್ಲಿ ಜನಪ್ರಿಯ ಟಿವಿ ನಿರೂಪಕರಾಗಿದ್ದಾರೆ. ಡಾ. ಲಿಯಾಖತ್ ಅವರ ಎರಡನೇ ಪತ್ನಿ ಸೈಯದ್ ಟುಬಾ ಓರ್ವ ನಟಿ. ಆದರೆ, ಜಗಳದಿಂದಾಗಿ ಇಬ್ಬರೂ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇದನದ ಬಗ್ಗೆ ಟುಬಾ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾರೆ. ಅವರ ನಡುವಿನ ಸಮನ್ವಯದ ಎಲ್ಲಾ ಭರವಸೆ ಕಳೆದುಹೋಗಿದೆ ಎಂದು ಟುಬಾ ಒಪ್ಪಿಕೊಂಡಿದ್ದರು. ಆದ್ದರಿಂದ, ನ್ಯಾಯಾಲಯದಿಂದ, ಅವರು ಖುಲಾ ಅಂದರೆ ವಿಚ್ಛೇದನದ ಮಾರ್ಗವನ್ನು ಆರಿಸಿಕೊಂಡರು.
ಡಾ. ಲಿಯಾಖತ್ ಅವರ ಮೊದಲ ಪತ್ನಿ ಸಯೀದ್ ಬುಸ್ರಾ ಇಕ್ಬಾಲ್. ಡಾ.ಲಿಯಾಖತ್ ಅವರಿಗೆ ದೂರವಾಣಿಯಲ್ಲಿ ತ್ರಿವಳಿ ತಲಾಖ್ ಹೇಳಿದ್ದರು. ಡಾ. ಲಿಯಾಖತ್ ಅವರ ಈ ನಿರ್ಧಾರದಿಂದ ಬುಸ್ರಾ ಸಂತೋಷವಾಗಿರಲಿಲ್ಲ, ಮದುವೆ ಘೋಷಣೆಯಾದಾಗಿನಿಂದಲೂ ಪಾಕಿಸ್ತಾನಿಗಳು ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಈ ನವದಂಪತಿಗಳ ನಡುವಿನ ವಯಸ್ಸಿನ ವ್ಯತ್ಯಾಸವನ್ನು ತಮಾಷೆ ಮಾಡುತ್ತಿದ್ದಾರೆ.
Read more
[wpas_products keywords=”deal of the day”]