ಈ ಘಟನೆ ನಡೆದ ಬಳಿಕ ಮೊದಲನೇ ದಿನದ ಭೋಜನ ವಿರಾಮವನ್ನು ತೆಗೆದುಕೊಳ್ಳಲಾಗಿದೆ. ಇದೀಗ ಹರಾಜು ನಿರೂಪಕ ಹ್ಯೂಗ್ ಎಡ್ಮೀಡ್ಸ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಐಪಿಎಲ್ ಮೆಗಾ ಹರಾಜಿನ ಅಧಿಕೃತ ಪ್ರಸಾರಕರು ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಚಾರು ಶರ್ಮಾ ಅವರು ಹರಾಜು ಪ್ರಕ್ರಿಯೆಯನ್ನು ಮುಂದುವರಿಸಲಿದ್ದಾರೆ.
IPL 2022 Auction Live updates: ಮೆಗಾ ಹರಾಜು ನೇರ ಪ್ರಸಾರದ ವಿವರ!
“ಹ್ಯೂಗ್ ಎಡ್ಮೀಡ್ಸ್ ಮೆಗಾ ಹರಾಜು ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರು ಕುಸಿದ ಬಿದ್ದ ತಕ್ಷಣ ವೈದ್ಯಕೀಯ ಸಿಬ್ಬಂದಿ ಅವರನ್ನು ತಪಾಸಣೆ ನಡೆಸಿದ್ದು, ಸೂಕ್ತ ಚಿಕಿತ್ಸೆ ನೀಡಿದ್ದಾರೆ ಹಾಗೂ ಇದೀಗ ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ. ಮೆಗಾ ಹರಾಜು 3: 30 ರಿಂದ ಮುಂದುವರಿಯಲಿದೆ,” ಎಂದು ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ.
ಕಳೆದ 2008ರ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಿಂದಲೂ ರಿಚರ್ಡ್ ಮ್ಯಾಡ್ಲೀ ಹರಾಜು ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಕಳೆದ 2018ರ ಆವೃತ್ತಿಯ ಹರಾಜಿನ ವೇಳೆ ಮ್ಯಾಡ್ಲೀ ಅವರ ಸ್ಥಾನವನ್ನು ಹ್ಯೂಗ್ ಎಡ್ಮೀಡ್ ತುಂಬಿದ್ದರು. ಅದರಂತೆ ಮೂರು ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ನಿರೂಪಕರಾಗಿ ಯಶಸ್ವಿಯಾಗಿದ್ದರು.
ಇನ್ನು ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು 12.25 ಕೋಟಿ ರೂ. ಗಳಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಖರೀದಿಸಿದೆ. ಇಲ್ಲಿಯವರೆಗೂ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಜೇಬಿಗಳಿಸಿಕೊಂಡ ಆಟಗಾರ ಎಂಬ ಕೀರ್ತಿಗೆ ಶ್ರೇಯಸ್ ಅಯ್ಯರ್ ಭಾಜನರಾಗಿದ್ದಾರೆ.
ಕಳೆದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯುತ್ತಮ ಬೌಲ್ ಮಾಡಿ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ಹರ್ಷಲ್ ಪಟೇಲ್ ಹರಾಜಿನಲ್ಲಿ ಮತ್ತೆ ಆರ್‌ಸಿಬಿ ಕುಟುಂಬಕ್ಕೆ ಸೇರ್ಪಡೆಯಾಗಿದ್ದಾರೆ. ವೇಗದ ಬೌಲಿಂಗ್ ಆಲ್‌ರೌಂಡರ್‌ಗೆ ಬೆಂಗಳೂರು ಫ್ರಾಂಚೈಸಿ 10.75 ಕೋಟಿ ರೂ. ನೀಡಿ ಖರೀದಿಸಿದೆ.
ಕೆಕೆಆರ್‌ಗೆ ಮರಳಿದ ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾ ತಂಡದ ವೇಗಿ ಪ್ಯಾಟ್ ಕಮಿನ್ಸ್ ಅವರು ಮತ್ತೆ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ಪರ ಆಡಿದ್ದ ಕಮಿನ್ಸ್ ಈ ಬಾರಿಯೂ ಅವರನ್ನು ಕೋಲ್ಕತಾ ಫ್ರಾಂಚೈಸಿ ಹರಾಜಿನಲ್ಲಿ 7.25 ಕೋಟಿ ರೂ.ಗಳಿಗೆ ಖರೀದಿಸಿದೆ.
Read more
[wpas_products keywords=”deal of the day gym”]