Sharmila B | Vijaya Karnataka | Updated: Dec 11, 2021, 3:20 PM
ಅತ್ಯಂತ ಕನಿಷ್ಠ ಗೌರವಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರಕಾರಗಳ ವಿವಿಧ ಯೋಜನೆಗಳ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ನಮಗೆ ಕನಿಷ್ಠ ವೇತನವಿಲ್ಲ. ಪಿಂಚಣಿ, ಭವಿಷ್ಯನಿಧಿ, ಗ್ರಾಚುಟಿ ಸೇರಿ ಯಾವುದೇ ಸಾಮಾಜಿಕ ಭದ್ರತಾ ಯೋಜನೆಗಳ ಫಲ ಸಿಗುತ್ತಿಲ್ಲವೆಂದು ಆಗ್ರಹಿಸಿ ಸರಕಾರದ ಗಮನ ಸೆಳೆಯಲು ಡಿ.17ರಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದಿಂದ ಬೆಳಗಾವಿ ಚಲೊ ಹಮ್ಮಿಕೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ
ಹೈಲೈಟ್ಸ್:
- ಡಿ.17ರಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದಿಂದ ಬೆಳಗಾವಿ ಚಲೊ
- ಎಲ್‌ಕೆಜಿ, ಯುಕೆಜಿ ತರಗಳತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲೇ ಆರಂಭಿಸಬೇಕು, ಅಂಗನವಾಡಿಯಲ್ಲಿ ಶಿಶು ಪಾಲನಾ ಕೇಂದ್ರ ನಡೆಸುವ ನಿರ್ಧಾರ ಹಿಂಪಡೆಯಬೇಕು
- ನಿವೃತ್ತ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕೂಡಲೆ ಹಣ ಬಿಡುಗಡೆ ಮಾಡಬೇಕು, ಮರಣ ಹಾಗೂ ವೈದ್ಯಕೀಯ ಪರಿಹಾರಧನ ಬಿಡುಗಡೆ ಮಾಡಬೇಕು
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅತ್ಯಂತ ಕನಿಷ್ಠ ಗೌರವಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರಕಾರಗಳ ವಿವಿಧ ಯೋಜನೆಗಳ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ನಮಗೆ ಕನಿಷ್ಠ ವೇತನವಿಲ್ಲ. ಪಿಂಚಣಿ, ಭವಿಷ್ಯನಿಧಿ, ಗ್ರಾಚುಟಿ ಸೇರಿ ಯಾವುದೇ ಸಾಮಾಜಿಕ ಭದ್ರತಾ ಯೋಜನೆಗಳ ಫಲ ಸಿಗುತ್ತಿಲ್ಲ. ಇತ್ತೀಚೆಗೆ ಇಲಾಖೆ ಕೆಲಸಗಳ ಜತೆ ಯೋಜನೇತರ ಕೆಲಸಗಳ ಒತ್ತಡ ಹೆಚ್ಚಾಗಿದೆ. ನಮ್ಮ ಈ ಎಲ್ಲಾ ಸಮಸ್ಯೆ ಈಡೇರಿಸಲು ಆಗ್ರಹಿಸಿ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನೂರಾರು ಬಾರಿ ಪ್ರತಿಭಟನೆ ನಡೆಸಿದರೂ ಸರಕಾರ ಗಮನ ಹರಿಸುತ್ತಿಲ್ಲ. ಇದನ್ನು ವಿರೋಧಿಸಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಎನ್.ಶಿವಣ್ಣ, ಖಜಾಂಚಿ ಎಂ.ಬಿ.ಶಾರದಮ್ಮ, ರಾಜ್ಯ ಸಂಚಾಲಕ ಆವರಗೆರೆ ಚಂದ್ರು, ಜಿಲ್ಲಾಪ್ರಧಾನ ಕಾರ್ಯದರ್ಶಿ ಮಲ್ಲಮ್ಮ, ರಾಜ್ಯ ಕಾರ್ಯದರ್ಶಿ ವಿಶಾಲಾಕ್ಷಿ ಗೋಷ್ಠಿಯಲ್ಲಿ ಇದ್ದರು.
ಬೇಡಿಕೆಗಳು
ಎಲ್‌ಕೆಜಿ, ಯುಕೆಜಿ ತರಗಳತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲೇ ಆರಂಭಿಸಬೇಕು, ಅಂಗನವಾಡಿಯಲ್ಲಿ ಶಿಶು ಪಾಲನಾ ಕೇಂದ್ರ ನಡೆಸುವ ನಿರ್ಧಾರ ಹಿಂಪಡೆಯಬೇಕು, ನಿವೃತ್ತ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕೂಡಲೆ ಹಣ ಬಿಡುಗಡೆ ಮಾಡಬೇಕು, ಮರಣ ಹಾಗೂ ವೈದ್ಯಕೀಯ ಪರಿಹಾರಧನ ಬಿಡುಗಡೆ, ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ, ಮುದ್ರಿತ ಸೀರೆ ಬದಲು ಸಮವಸ್ತ್ರ ವಿತರಿಸಬೇಕು, ಮಿನಿ ಅಂಗನವಾಡಿ ಕೇಂದ್ರಗಳಿಗೆ ಕೂಡಲೆ ಸಹಾಯಕಿಯರ ನೇಮಕ, ತೀವ್ರ ಅನಾರೋಗ್ಯದಿಂದ ಬಳಲುವ ಕಾರ್ಯಕರ್ತೆಯರಿಗೆ ಪರಿಹಾರ ನೀಡಿ ಸೇವೆಯಿಂದ ಬಿಡುಗಡೆ ಮಾಡುವುದು, ಉತ್ತಮ ಗುಣಮಟ್ಟದ ಮೊಬೈಲ್ ಫೋನ್ ನೀಡುವುದೂ ಸೇರಿ ವಿವಿಧ ಬೇಕೆಗಳನ್ನು ಈಡೇರಿಸುವಂತೆ ಬೆಳಗಾವಿಯಲ್ಲಿಆಗ್ರಹಿಸುವುದಾಗಿ ಜಯಮ್ಮ ತಿಳಿಸಿದರು.
ಸಮೀಪದ ನಗರಗಳ ಸುದ್ದಿ
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ರಿಪೋರ್ಟ್ ಕಳಿಸಿ
ಕೀವರ್ಡ್ಸ್
Kannada News from Vijaya Karnataka, TIL Network