Karnataka news paper

ಹಿಜಾಬ್​ ವಿವಾದ: 2023ರ ಚುನಾವಣೆಗೆ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುತ್ತಿವೆ- ಮಾಜಿ ಪ್ರಧಾನಿ ದೇವೇಗೌಡ


ಬೆಂಗಳೂರು: ಕೆಲ ಶಕ್ತಿಗಳು ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನು ತಪ್ಪು ಹಾದಿಗೆಳೆಯುತ್ತಿದ್ದು, ಹಿಜಾಬ್ ವಿವಾದದಿಂದ  2023ರ ಚುನಾವಣೆಗೆ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುತ್ತಿವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆಗೋಸ್ಕರ ಹಿಜಾಬ್​ ವಿವಾದವನ್ನ ವಿವಿಧ ರಾಜಕೀಯ ಪಕ್ಷಗಳು ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಈ ಪ್ರಕರಣದಲ್ಲಿ ಕೆಲವೊಂದು ದುಷ್ಟ ಹಿತಾಸಕ್ತಿಗಳ ಕೈವಾಡವಿದ್ದು, ವಿದ್ಯಾರ್ಥಿಗಳು ಹಾಗೂ ರಾಜಕೀಯ ಪಕ್ಷಗಳನ್ನ ತಪ್ಪು ದಾರಿಗೆ ತೆಗೆದುಕೊಂಡು ಹೋಗುತ್ತಿವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ನಿಲ್ಲಿಸಲು ನಮ್ಮದು ಪಾಕಿಸ್ತಾನವಲ್ಲ, ಸೌಜನ್ಯತೆಯ ಆಧಾರದ ಮೇಲೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ: ಸಚಿವ ಬಿಸಿ ನಾಗೇಶ್

ಕರಾವಳಿಯಲ್ಲಿ ಕಾಣಿಸಿಕೊಂಡಿದ್ದ ಈ ವಿವಾದಕ್ಕೆ ಅಲ್ಲಿನ ರಾಜಕೀಯ ಸಂಘಟನೆವೊಂದು ವಿವಾದದ ಕಿಡಿ ಹೊತ್ತಿಸಿದ್ದು, ಇದೀಗ ವಿವಿಧ ಪಕ್ಷಗಳು ಇದರ ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ವಿವಾದವನ್ನ ತಕ್ಷಣವೇ ಹತ್ತಿಕ್ಕಬೇಕು ಎಂದು ತಿಳಿಸಿದ್ದಾರೆ.





Read more

[wpas_products keywords=”deal of the day”]