ಚಿರಂಜೀವಿ ನೀಡಿದ್ದ ಉಡುಗಿರೆಗಳು
ಹೌದು, ‘ಪ್ರೇಮಿಗಳ ದಿನ’ ಹತ್ತಿರ ಬಂದಿದೆ. ‘ಡ್ಯಾನ್ಸ್ ಚಾಂಪಿಯನ್‌ಶಿಪ್ ಶೋ’ನಲ್ಲಿ ಕೂಡ ‘ಪ್ರೇಮಿಗಳ ದಿನ’ದ ಪ್ರಯುಕ್ತ ನಟಿ ಮೇಘನಾ ರಾಜ್‌ಗೆ ಉಡುಗೊರೆಯನ್ನು ನೀಡಿದ್ದಾರೆ. ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಮೇಘನಾ ರಾಜ್‌ಗೆ ಚಿರಂಜೀವಿ ಸರ್ಜಾ ನೀಡಿದ್ದ ನೆಕ್ಲೇಸ್, ಮೊದಲ ಬಾರಿಗೆ ಕೊಡಿಸಿದ್ದ ಡ್ರೆಸ್, ಆಟಗಾರ ಸಿನಿಮಾ ವೇಳೆ ತೆಗೆಸಿಕೊಂಡಿದ್ದ ಫೋಟೋ, ಮಾಸ್ಕ್ ಎಲ್ಲವನ್ನು ಮೇಘನಾಗೆ ತಿಳಿಯದಂತೆ ಅವರ ಮನೆಯಿಂದ ತೆಗೆದುಕೊಂಡು ಬಂದು ‘ಡ್ಯಾನ್ಸ್ ಚಾಂಪಿಯನ್‌ಶಿಪ್’ ತಂಡ ವೇದಿಕೆ ಮೇಲೆ ನೀಡಿದೆ. ಅವೆಲ್ಲವನ್ನು ಕಂಡು ಮೇಘನಾ ಹಳೆಯ ದಿನಗಳನ್ನು ಸ್ಮರಿಸಿದ್ದಾರೆ.
“ಕಳೆದ ಮೂರು ದಿನಗಳಿಂದ ನಾನು, ಚಿರಂಜೀವಿ ಜೊತೆಗೆ ಇದ್ದ ಫೋಟೋ ಪ್ರೇಮ್ ಕಾಣಿಸುತ್ತಿರಲಿಲ್ಲ. ಎಲ್ಲಿ ಹೋಯ್ತು ಅಂತ ತುಂಬ ಹುಡುಕಾಡ್ತಾ ಇದ್ದೆ. ನನ್ನ ಮಗ ಆ ಫೋಟೋ ಇಟ್ಟುಕೊಂಡು ಆಡ್ತಾನೆ, ಅವನು ಎಲ್ಲಿ ತಗೊಂಡು ಹೋಗಿ ಬಿಸಾಕಿರ್ತಾನೋ ಅಂತ ಹೆದರಿದ್ದೆ. ನನಗೆ ಈ ಉಡುಗೊರೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ಇದು ಕೇವಲ ವಸ್ತುಗಳಲ್ಲ, ಬೆಲೆಕಟ್ಟಲಾಗದ ನೆನಪುಗಳು” ಎಂದು ‘ಡ್ಯಾನ್ಸ್ ಚಾಂಪಿಯನ್‌ಶಿಪ್ ಶೋ’ನಲ್ಲಿ ಮೇಘನಾ ರಾಜ್ ಹೇಳಿದ್ದಾರೆ.
‘ಚಿರು ನನಗಾಗಿ ಒಂದು ಕುಟುಂಬ ಕಟ್ಟಿಕೊಟ್ಟಿದ್ದಾರೆ’- ‘ಗೋಲ್ಡನ್ ಗ್ಯಾಂಗ್’ನಲ್ಲಿ ಮೇಘನಾ ರಾಜ್ & ಫ್ರೆಂಡ್ಸ್
“ಹಾಯ್ ಮೇಘನಾ, ಇದು ನನಗೆ ನಿಜಕ್ಕೂ ವಿಶೇಷ ಅನಿಸ್ತಾ ಇದೆ. ನಾನು ನಿನ್ನ ಜೊತೆ ಸದಾ ಕಿತ್ತಾಡುತ್ತಿರುತ್ತೇನೆ. ದೇವರು ನಿನಗೆ ಅದೃಷ್ಟು, ಖುಷಿ, ಮನಃಶಾಂತಿ ಎಲ್ಲ ಕರುಣಿಸಲಿ, ಲವ್ ಯು” ಎಂದು ಹೇಳುವ ಚಿರಂಜೀವಿ ಸರ್ಜಾ ಅವರ ಈ ಹಿಂದಿನ ವಾಯ್ಸ್ ನೋಟ್‌ನ್ನು ಕೇಳಿ ಮೇಘನಾ ರಾಜ್ ಅತ್ತಿದ್ದಾರೆ. ಚಿರು ಮತ್ತೆ ಬರಲಿ ಎಂದು ಆಶಿಸುವೆ ಎಂದಿದ್ದಾರೆ ಅವರು. “ಇನ್ನು ಈ ವಾಯ್ಸ್ ನೋಟ್ ಕೇಳಿ ಚಿರಂಜೀವಿ ಬಂದರು ಅಂತ ಅನಿಸಿತು. ಆದರೆ ಇದು ಸಾಧ್ಯವಿಲ್ಲ. ನಿಮ್ಮ ಈ ಪ್ರಯತ್ನಕ್ಕೆ ಡ್ಯಾನ್ಸ್ ಚಾಂಪಿಯನ್‌ಶಿಪ್ ಶೋಗೆ ಧನ್ಯವಾದಗಳು” ಎಂದು ಮೇಘನಾ ಕಣ್ಣೀರಿಡುತ್ತಲೇ ಹೇಳಿದ್ದಾರೆ.
ಸಾಂಟಾ ಕ್ಲಾಸ್ ಕಡೆಯಿಂದ ಮೇಘನಾ ರಾಜ್ ಬಯಸುತ್ತಿರುವುದು ‘ಇದೊಂದೇ’ ಗಿಫ್ಟ್!
ಮೇಘನಾ ರಾಜ್ ಸರ್ಜಾ ಅವರಿಗೆ ರಾಯನ್ ರಾಜ್ ಸರ್ಜಾ ಎಂಬ ಮಗನಿದ್ದಾನೆ. ಕೆಲ ತಿಂಗಳುಗಳ ಹಿಂದೆ ಫಾರೆಸ್ಟ್ ಥೀಮ್‌ನಲ್ಲಿ ಮಗನ ಮೊದಲ ವರ್ಷದ ಬರ್ತ್‌ಡೇಯನ್ನು ಮೇಘನಾ ಅದ್ದೂರಿಯಾಗಿ ಆಚರಿಸಿದ್ದರು. ಮಗನ ಜೊತೆಗಿನ ಫೋಟೋವನ್ನು ಮೇಘನಾ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ‘ಡ್ಯಾನ್ಸ್ ಚಾಂಪಿಯನ್‌ಶಿಪ್’ ಮೂಲಕ ಅವರು ವರ್ಷಗಳ ಬಳಿಕ ಕಿರುತೆರೆಗೆ ಆಗಮಿಸಿದ್ದಾರೆ. ಈ ಶೋನ ಪರ್ಮ್‌ನೆಂಟ್ ಜಡ್ಜ್ ಆಗಿರುವ ಅವರು ಸ್ಪರ್ಧಿಗಳ ಡ್ಯಾನ್ಸ್‌ನ್ನು ಎಂಜಾಯ್ ಮಾಡುತ್ತಿದ್ದಾರೆ.
Read more
[wpas_products keywords=”deal of the day sale today offer all”]