The New Indian Express
ಬೆಂಗಳೂರು: ಮಹಿಳೆಯೊಬ್ಬರು ನನಗೆ ಎರಡು ಕೋಟಿ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಶಾಸಕ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದರ ಬೆನ್ನಲ್ಲೇ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಮಿಷನರ್ ಕಚೇರಿಯಲ್ಲಿ ಮಹಿಳೆ ದೂರು ಸಲ್ಲಿಸಿ, ನಂತರ ಸುದ್ದಿಗೋಷ್ಠಿ ನಡೆಸಿ ಶಾಸಕರು ಮತ್ತು ಪೊಲೀಸರ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಮಹಿಳೆಯು ಹೆಚ್ಚುವರಿ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ಹೆಚ್ಚುವರಿ ಪೊಲೀಸ್ ಕಮಿಷನರ್ ಬಳಿ ದೂರು ನೀಡಿದ್ಧಾರೆ. ದೂರಿನಲ್ಲಿ ರಾಜಕುಮಾರ್ ಪಾಟೀಲ್ರಿಂದ ನನಗೆ ಅನ್ಯಾಯ ಆಗಿದೆ, ನನಗೂ ನನ್ನ ಮಗನಿಗೂ ನ್ಯಾಯ ಕೊಡಿಸಿ ಎಂದು ದೂರು ನೀಡಿದ್ದಾರೆ.
ರಾಜಕುಮಾರ್ ಪಾಟೀಲ್ ಹಾಗೂ ನಾನು ಒಂದೇ ಹಳ್ಳಿಯವರು. 16 ವರ್ಷವಿದ್ದಾಗಲೇ ನನ್ನ ಮತ್ತು ಅವರ ಮಧ್ಯೆ ಸಂಬಂಧವಿತ್ತು. ನಾನು ಶಾಸಕರಿಗೆ ಯಾವುದೇ ರೀತಿಯಲ್ಲೂ ಬ್ಲಾಕ್‌ಮೇಲ್ ಮಾಡುತ್ತಿಲ್ಲ. ನಾನು ಬ್ಯೂಟಿಪಾರ್ಲರ್ ನಡೆಸುತ್ತಿದ್ದೇನೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಕಡೇ ಪಕ್ಷ ಮಗುವಿನ ಪೋಷಣೆಗಾದರೂ ಜೀವನಾಂಶ ಕೊಡಿ ಎಂದು ನೊಂದ ಮಹಿಳೆ ಸೇಡಂ ಶಾಸಕರೂ ಆಗಿರುವ ರಾಜ್‌ಕುಮಾರ್ ತೇಲ್ಕರ್ ಅವರಿಗೆ ಅವರಿಗೆ ಒತ್ತಾಯಿಸಿದ್ದಾರೆ. ನನ್ನ ಜೊತೆ ಸಂಬಂಧ ಇಟ್ಟುಕೊಂಡಿರುವುದು ಅವರ ಪತ್ನಿಗೆ ಗೊತ್ತಾಗಿ ವಿಷಯ ರಂಪಾಟವಾಗಬಾರದು ಎಂದು ಖಾಸಗಿ ಹೋಟೆಲ್‌ನಲ್ಲಿ ಮಾತುಕತೆಗೆ ಬಂದಿದ್ದರು ಎಂದು ಆರೋಪಿಸಿದ್ದಾರೆ.
ಪೊಲೀಸರು ಯಾವುದೇ ಸೂಚನೆ ನೀಡದೆ ಬಂಧಿಸಿ ಇಲ್ಲಿಗೆ ಕರೆತಂದಿದ್ದಾರೆ. ಬೆಂಗಳೂರು ವಿಧಾನಸೌಧ ಪೊಲೀಸರು ಬೆಳಗ್ಗೆ ಮನೆಯಿಂದ ಕರೆತಂದು ರಾತ್ರಿ 9 ಗಂಟೆವರೆಗೆ ಸ್ಟೇಷನ್ ನಲ್ಲಿ ಕೂಡಿ ಹಾಕಿದ್ದಾರೆ. ಪೊಲೀಸರು ನನ್ನನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದರು. ನೋಟಿಸ್, ವಾರಂಟ್ ಏನೂ ನೀಡದೇ ನನ್ನ ಕರೆದೊಯ್ದರು. ಠಾಣೆಯಲ್ಲಿ ಕೂರಿಸಿ ನನಗೆ ಬೆದರಿಕೆ ಹಾಕಿ ಒತ್ತಡ ಹಾಕಿದ್ರು. ಯಾವ ಕಾರಣಕ್ಕೂ ಮಾಧ್ಯಮದ ಮುಂದೆ ಹೋಗಬಾರದು. ಕೇಸ್ ವಿಚಾರ ಇಲ್ಲಿಗೆ ಬಿಡಬೇಕು ಎಂದು ಎಚ್ಚರಿಕೆ ನೀಡಿದ್ರು ಎಂದು ಹೇಳಿದ್ದಾರೆ.
ಮಹಿಳೆಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ತೆಲ್ಕೂರ್, ನಾನು ಯಾವುದೇ ತಪ್ಪು ಮಾಡಿಲ್ಲ, ಎಂತಹ ತನಿಖೆಗೂ ಸಿದ್ಧನಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸರಕಾರ ಯಾವುದೇ ರೀತಿಯ ತನಿಖೆ ಬೇಕಾದರೂ ನಡೆಸಬಹುದು. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಿ, ನಾನು ಯಾರ ಮಾನಕ್ಕೂ ಧಕ್ಕೆ ತರುವ ಕೆಲಸ ಮಾಡಿಲ್ಲ, ಪಕ್ಷಕ್ಕೆ ಹಾಗೂ ಮತದಾರರಿಗೆ ಮುಜುಗರ ತರುವ ಕೆಲಸ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ ಎಂದು ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ. ಮಹಿಳೆಯಿಂದ ನನಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ನಡಿಯುತ್ತಿದೆ. ಹೀಗಾಗಿ ಪೋಲೀಸ್ ದೂರು ನೀಡಿದ್ದೇನೆ. ಹೀಗಾಗಿ ವಿಧಾನಸೌಧ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಾನು ಕಾನೂನು ರೀತಿಯಲ್ಲಿ ಇದನ್ನು ಎದರಿಸಲು ಸಿದ್ದನಿದ್ದೇನೆ ಎಂದು ತೇಲ್ಕೂರ್ ಹೇಳಿದ್ದಾರೆ
Read more
[wpas_products keywords=”deal of the day”]