ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ಮುಸಲ್ಮಾನರ ವಿರುದ್ಧ ನೀನು ಮೆರೆದಾಡ ಬೇಡ. ನಿನ್ನನ್ನು ಹೇಗೆ ನಿಯಂತ್ರಿಸಬೇಕು ಗೊತ್ತಿದೆ ಅಂತ ಕೆಲ ನಂಬರ್ ಗಳಿಂದ ನಿರಂತರ ಫೋನ್ ಕರೆ ಬರುತ್ತಿವೆ. ದುಷ್ಕರ್ಮಿಗಳು ಕೊಲೆ ಮಾಡುವುದಾಗಿಯೂ ಶಾಸಕ ರಘುಪತಿ ಭಟ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸದ್ಯ ಶಾಸಕರು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.
ಯಾವ ಬೆದರಿಕೆಗೂ ಹೆದರಲ್ಲ ಎಂದ ಶಾಸಕ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್, ಇಂತಹ ಹಲವು ಬೆದರಿಕೆಗಳನ್ನು ನಾವು ತುಂಬಾ ನೋಡಿದ್ದೇವೆ. ಉಡುಪಿ, ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ. ಬಾಲ್ಯದಿಂದಲೇ ಇಂಥ ಹಲವು ಬೆದರಿಕೆಗಳು ನಾನು ನೋಡಿದ್ದೇನೆ. ಉಡುಪಿಯ ಮುಸ್ಲಿಂ ಒಕ್ಕೂಟ, ಖಾಜಿಗಳು ನನಗೆ ಬೆಂಬಲ ನೀಡಿದ್ದಾರೆ. ಉಡುಪಿ ಶಾಸಕರ ನಿಲುವು ಸರಿ ಇದೆ ಎಂದು ಸಪೋರ್ಟ್ ಮಾಡಿದರೆ ಅಂತ ತಿಳಿಸಿದರು.
ಹಿಜಾಬ್ V/S ಕೇಸರಿ : ಮಕ್ಕಳಲ್ಲಿ ಗೊಂದಲ ಸೃಷ್ಟಿಸುವುದು ಬೇಡ; ಬಸವರಾಜ ಬೊಮ್ಮಾಯಿ ಮನವಿ
ನನಗೆ ದೇವರಿದ್ದಾರೆ, ಅವರೇ ನನ್ನ ಭದ್ರತೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಫೋನ್ ಮಾಡಿದ್ದಾರೆ. ಉಡುಪಿ ಕ್ಷೇತ್ರದ ಜನರೇ ನನಗೆ ಸೆಕ್ಯುರಿಟಿ ಗಾರ್ಡ್. ಯಾವುದೇ ಒಬ್ಬ ವ್ಯಕ್ತಿ ಒಂದು ಸಂಘಟನೆಯಿಂದ ಬೆದರಿಕೆ ಬಂದಿಲ್ಲ. ಹೈದರಾಬಾದ್ನಿಂದ ಫೋನ್ ಕರೆ ಮಾಡಿ ಒಬ್ಬ ಹುಚ್ಚ ಮಾತನಾಡಿದ್ದಾನೆ. ಅವನಿಗೆ ಇಪ್ಪತ್ತು ನಿಮಿಷಗಳ ಕಾಲ ಉತ್ತರ ಕೊಟ್ಟಿದ್ದೇನೆ. ಮುಸ್ಲಿಂರಿಗೆ ಸಮಸ್ಯೆಯಿಲ್ಲ. ಆರು ಮಕ್ಕಳ ತಲೆ ಹಾಳುಮಾಡಿದ್ದಾರೆ ಅಂತ ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣಗಳು ಸೇರಿದಂತೆ ಇಂಟರ್ನೆಟ್ ಕಾಲ್ ಮೂಲಕ ಕರೆಗಳು ಬಂದಿದೆ. ಇದಕ್ಕೆ ಹೆದರಿ ಕೂರುವ ವ್ಯಕ್ತಿ ನಾನಲ್ಲ. ನನ್ನ ಜೊತೆ ಕೂಡ ಸಾಕಷ್ಟು ಜನ ಇದ್ದಾರೆ. ನನ್ನ ಹತ್ತಿರ ಯಾವ ಗನ್ ಮ್ಯಾನ್ ಕೂಡ ಇಲ್ಲ. ಮನೆಗೆ ಸೆಕ್ಯುರಿಟಿ ಕೂಡ ಇಲ್ಲ. ಎಲ್ಲ ಬೆದರಿಕೆಗೆ ಹೆದರುವ ಮಾತೇ ಇಲ್ಲ. ಈಗಷ್ಟೇ ಪೊಲೀಸ್ ವರಿಷ್ಠಾಧಿಕಾರಿ ಅವರು ಗನ್ ಮ್ಯಾನ್ ಕಳುಹಿಸಿದ್ದಾರೆ. ಅವರ ಮುಂಜಾಗ್ರಕತೆ ದೃಷ್ಟಿಯಿಂದ ಕಳುಹಿಸಿದ್ದಾರೆ. ಆದರೆ ನನಗೆ ಭದ್ರತೆಯ ಅವಶ್ಯಕತೆ ಇಲ್ಲ. ಭದ್ರತಾ ಸಿಬ್ಬಂದಿಯನ್ನು ನಿರಾಕರಿಸುವುದಿಲ್ಲ ಅಂತ ರಘುಪತಿ ಭಟ್ ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]