Karnataka news paper

ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ : ಸಿಎಂ ಪುಷ್ಕರ್ ಸಿಂಗ್ ಧಾಮಿ


ಡೆಹ್ರಾಡೂನ್ :ಹಿಜಾಬ್ ವಿವಾದ ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲೂ ಸದ್ದು ಮಾಡುತ್ತಿದೆ. ಈಗಾಗಲೇ ರಾಜಸ್ತಾನದ ಜೈಪುರದಲ್ಲಿರುವ ಕಾಲೇಜಿನ ಹಿಜಾಬ್ ಧರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಹಿಜಾಬ್ ಚರ್ಚೆ ಜೋರು ಇರುವಾಗಲೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಸದ್ದು ಜೋರಾಗಿದೆ.

ಭಾರತದ ಎಲ್ಲ ಧರ್ಮದ ನಾಗರಿಕರಿಗೆ ಒಂದೇ ನಿಯಮ ಎಂದು ಹೇಳುವ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಇದೀಗ ವಿಧಾನ ಸಭೆ ಚುನಾವಣೆಗೆ ಸಜ್ಜುಗೊಂಡಿರುವ ಉತ್ತರಾಖಂಡದಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದೆ. ಹೌದು, ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದಾಗಿ ಸಿಎಂ ಪುಷ್ಕರ್ ಸಿಂಗ್ ಧಾಮಿ ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯ ಹೊಸ ಕರಡು ತಯಾರಿಸಲು ಸಮಿತಿಯನ್ನು ರಚಿಸಲಿದೆ. ಈ ಏಕರೂಪ ನಾಗರಿಕ ಸಂಹಿತೆಯು ಎಲ್ಲಾ ಜನರಿಗೆ ಅವರ ನಂಬಿಕೆಯನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಭೂಮಿ-ಆಸ್ತಿ ಮತ್ತು ಉತ್ತರಾಧಿಕಾರದ ಬಗ್ಗೆ ಒಂದೇ ರೀತಿಯ ಕಾನೂನು ಇರಲಿದೆ ಎಂದು ಧಾಮಿ ತಿಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಭಾರತ ಪಕ್ವವಾಗಿದೆಯೇ? ಒಂದು ಅವಲೋಕನ

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವುದರಿಂದ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಹಕ್ಕು ಸಿಗಲಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಧಾಮಿ, ಶೀಘ್ರದಲ್ಲೇ ಇದನ್ನು ಜಾರಿ ಮಾಡುತ್ತೇವೆ ಎಂದಿದ್ದಾರೆ. ಇದು ಸಾಮಾಜಿಕ ಸಾಮರಸ್ಯ, ಲಿಂಗ ನ್ಯಾಯವನ್ನು ಹೆಚ್ಚಿಸುತ್ತದೆ, ಮಹಿಳಾ ಸಬಲೀಕರಣವನ್ನು ಬಲಪಡಿಸುತ್ತದೆ ಮತ್ತು ರಾಜ್ಯದ ಅಸಾಮಾನ್ಯ ಸಾಂಸ್ಕೃತಿಕ-ಆಧ್ಯಾತ್ಮಿಕ ಗುರುತನ್ನು ಇದು ಕಾಪಾಡಲಿದೆ ಎಂದು ಸಿಎಂ ತಿಳಿಸಿದ್ದಾರೆ. ಇದೇ ತಿಂಗಳ ೧೪ರಿಂದ ಉತ್ತರಾಖಂಡದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

ಗಿರಿರಾಜ್ ಸಿಂಗ್ ಹೇಳಿಕೆ!
ಭಾರತೀಯ ಜನತಾ ಪಕ್ಷದ ಫೈರ್‌ಬ್ರಾಂಡ್ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶುಕ್ರವಾರ ಏಕರೂಪ ನಾಗರಿಕ ಸಂಹಿತೆ ಈಗೀನ ಸಮಯಕ್ಕೆ ಅಗತ್ಯವಿದೆ ಎಂದು ಹೇಳಿದ್ದಾರೆ. ದೇಶಕ್ಕೆ ಎಲ್ಲ ಸಮುದಾಯಗಳಿಗೂ ಅನ್ವಯವಾಗುವ ಒಂದೇ ಕಾನೂನು ಅಗತ್ಯವಿದೆ ಎಂದಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಇಂದಿನ ಅಗತ್ಯವಾಗಿದೆ, ದೇಶ ಒಂದೇ ಆದ್ದರಿಂದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದರು. ಯುಸಿಸಿಯನ್ನು ಈ “ಸಮಯದ ಅಗತ್ಯ” ಎಂದು ಕರೆದಿರುವ ಗಿರಿರಾಜ್ ಸಿಂಗ್, “ಧರ್ಮ ಮತ್ತು ಪ್ರದೇಶದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಹೇಳಿದರು.

ಏಕರೂಪ ನಾಗರಿಕ ಸಂಹಿತೆ ಜಾರಿ ಯಾವಾಗ..? ಶೀಘ್ರದಲ್ಲೇ ನೂತನ ಕಾನೂನು ಆಯೋಗ ಪರಾಮರ್ಶೆ..?



Read more

[wpas_products keywords=”deal of the day sale today offer all”]