Karnataka news paper

ನೆಗೆಟಿವ್ ಕಾಮೆಂಟ್‌ಗಳಿಗೆ ತುತ್ತಾದ 130 ಕೋಟಿ ರೂ. ಬಜೆಟ್‌ನ ‘ನಾಗಿನ್ 6’ ಧಾರಾವಾಹಿ; ತೇಜಸ್ವಿ ಪ್ರಕಾಶ್‌ಗೂ ಇದರ ಸೂಚನೆ ಇತ್ತು!


ಬಹುನಿರೀಕ್ಷಿತ ಏಕ್ತಾ ಕಪೂರ್ ನಿರ್ಮಾಣದ ‘ನಾಗಿನ್’ ಹೊಸ ಸೀಸನ್‌ನೊಂದಿಗೆ ವೀಕ್ಷಕರ ಮುಂದೆ ಬರಲು ತಯಾರಾಗಿದೆ. ಈಗಾಗಲೇ ‘ನಾಗಿನ್ 6‘ ಪ್ರೋಮೋ ಕೂಡ ಹೊರಬಂದಿದೆ. ಆದರೆ ಬಹಳ ಕಡಿಮೆ ಸಮಯದಲ್ಲಿ ‘ನಾಗಿನ್’ ಟ್ರೋಲ್‌ಗಳಿಗೆ ಗುರಿಯಾಗಿದೆ. ನಾನು ಟ್ರೋಲ್ ಆಗ್ತೀನಿ ಅಂತ ಮೊದಲೇ ಗೊತ್ತಿತ್ತು ಎಂದು ಕೂಡ ನಾಗಿನ್ ಪಾತ್ರಧಾರಿ ತೇಜಸ್ವಿ ಪ್ರಕಾಶ್ ಹೇಳಿರೋದು ಆಶ್ಚರ್ಯ ಮೂಡಿಸಿದೆ.

ಈ ಬಾರಿಯ ನಾಗಿನ್ 6 ಕಥೆ ಏನು?

“ನಾಗಿನ್ ಇಷ್ಟುದಿನ ಪ್ರೀತಿಗಾಗಿ ಪ್ರತೀಕಾರ ತೀರಿಸಿಕೊಳ್ಳಲು ಹೋರಾಡಿದ್ದಳು. ಆದರೆ ಈ ಬಾರಿ ದೇಶಕ್ಕಾಗಿ ಹೋರಾಡುತ್ತಾಳೆ” ಎಂದು ತೇಜಸ್ವಿ ಪ್ರಕಾಶ್ ಹೇಳುವ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋ ನೋಡಿದವರು ತೇಜಸ್ವಿ ಪ್ರಕಾಶ್‌ರನ್ನು ಟ್ರೋಲ್ ಮಾಡಿದ್ದಾರೆ. ಡೈಲಾಗ್ ಹೇಳುವಾಗ ತೇಜಸ್ವಿ ಹಾವಭಾವ ಚೆನ್ನಾಗಿಲ್ಲ, ಡೈಲಾಗ್‌ನಲ್ಲಿ ಧಮ್‌ ಇಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ನೆಟ್ಟಿಗರು ಕಾಮೆಂಟ್ ಏನು?

“ಟಿಪಿ ನೋಡಿಕೊಂಡು ಡೈಲಾಗ್ ಹೇಳುವುದಲ್ಲ, ಎಕ್ಸ್‌ಪ್ರೆಶನ್ ಕೂಡ ಕೊಡಬೇಕು. ಈ ಶೋ ನೀರಿನಲ್ಲಿ ಬಿತ್ತು. ಮೌನಿ ರಾಯ್‌ನಷ್ಟು ತೇಜಸ್ವಿ ಪ್ರಕಾಶ್ ಚೆನ್ನಾಗಿ ನಟಿಸಲ್ಲ. ಇದು ರಿಯಾಲಿಟಿ ಶೋ ಅಲ್ಲ, ನಾಗಿನ್ ಸಿರೀಸ್, ನಟಿಸಬೇಕು” ಎಂದು ತೇಜಸ್ವಿ ಪ್ರಕಾಶ್ ಬಗ್ಗೆ ಪ್ರೇಕ್ಷಕರು ನೆಗೆಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲರಿಗೂ ‘ಚೈಲ್ಡ್’, ‘ಕಾಮಿಡಿ ಪೀಸ್’ ಆಗಿದ್ದ ತೇಜಸ್ವಿ ಪ್ರಕಾಶ್ ಇಂದು ಬಿಗ್ ಬಾಸ್ 15 ವಿಜೇತೆ, 130 ಕೋಟಿ ರೂ ಧಾರಾವಾಹಿ ನಾಯಕಿ!

ತೇಜಸ್ವಿಯನ್ನೇ ‘ನಾಗಿನ್ 6’ಗೆ ಆಯ್ಕೆ ಮಾಡಿಕೊಂಡಿದ್ದೇಕೆ?


ಏಕ್ತಾ ಕಪೂರ್ ಅವರು ತೇಜಸ್ವಿ ಪ್ರಕಾಶ್‌ರನ್ನು ‘ನಾಗಿನ್ 6’ಗೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಕೆಲ ಆರೋಪಗಳನ್ನು ಎದುರಿಸಬೇಕಾಗಿ ಬಂತು. ಅದಕ್ಕೆ ಏಕ್ತಾ ಕಪೂರ್ ಕೂಡ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದು, “ನಾಗಿನ್ 6ಗೆ ನನಗೆ ಈ ಹುಡುಗಿ ಬೇಕು ಅಂತ ವಾಹಿನಿಗೆ ಹೇಳುವ ಧೈರ್ಯ ಇದೆ ಅಂತ ನಾನು ಭಾವಿಸಲ್ಲ. ನನಗೆ ತೇಜಸ್ವಿ ತುಂಬ ಮುದ್ದಾಗಿದ್ದಾಳೆ ಅನಿಸಿತು. ಇನ್ನು ವೀಕ್ಷಕರು ಕೂಡ ಅವಳನ್ನು ಇಷ್ಟಪಡುತ್ತಾರೆ. ಮೊದಲ ಬಾರಿಗೆ ಅವಳನ್ನು ನೋಡಿದಾಗಲೇ ನನಗೆ ಇಷ್ಟವಾದಳು. ಪಾಪ, ಬಿಗ್ ಬಾಸ್‌ನಲ್ಲಿ ಪ್ರತಿಬಾರಿ ಅವಳು ಅವಳನ್ನು ಸಮರ್ಥಿಸಿಕೊಳ್ಳುತ್ತಿದ್ದಳು” ಎಂದು ಹೇಳಿದ್ದಾರೆ.

‘ಕರಿಯರ ಜೀವವೂ ಮುಖ್ಯ; ಆದರೆ ನಮಗೆ ಬಿಳಿ ಸೊಸೆಯೇ ಬೇಕು’! ಕಿರುತೆರೆ ನಟಿ ಖಡಕ್‌ ತಿರುಗೇಟು

ತೇಜಸ್ವಿ ಗೆಲ್ತಾಳೆ ಅಂತ ಗೊತ್ತಿತ್ತು ಎಂದ ಏಕ್ತಾ ಕಪೂರ್
“ತೇಜಸ್ವಿ ಕಣ್ಣಲ್ಲಿ ಏನೋ ಇದೆ. ಅದನ್ನು ನೋಡಿ ನಾಗಿನ್ 6ಗೆ ಆಯ್ಕೆ ಮಾಡಿಕೊಳ್ಳಲೇ ಬೇಕು ಅನಿಸಿತು. ಬಿಗ್ ಬಾಸ್‌ಗೂ ಮೊದಲು ನಾನು ಅವಳನ್ನು ಭೇಟಿ ಮಾಡಿಯೇ ಇಲ್ಲ. ನಾನು ಅವಳನ್ನು ಭೇಟಿಯಾಗಿ ಕಥೆ ಹೇಳಿದಾಗ ನನಗೆ ತೇಜಸ್ವಿ ಬಿಗ್ ಬಾಸ್‌ ಗೆಲ್ಲುತ್ತಾಳೆ ಅಂತ ಅನಿಸಿತ್ತು. ನಾನು ತೇಜಸ್ವಿಗಾಗಿ ಏನೂ ಮಾಡಿಲ್ಲ, ಅವಳ ಕಡೆ ಸ್ವಲ್ಪ ಅದೃಷ್ಟ ಇದೆ ಅಂತ ಅಂದುಕೊಳ್ತೀನಿ” ಎಂದು ಹೇಳಿದ್ದಾರೆ.

ಬಿಗ್ ಬಾಸ್‌ ಶೋನಲ್ಲಿಯೇ ತೇಜಸ್ವಿ ಪ್ರಕಾಶ್ ಅವರು ನಾಗಿನ್ 6 ನಾಯಕಿ ಅಂತ ಘೋಷಣೆ ಮಾಡಲಾಯ್ತು. 130 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸೀಸನ್ ಬಹಳ ಅದ್ದೂರಿಯಾಗಿ ಮೂಡಿಬರಲಿದೆಯಂತೆ. ವಿಶೇಷ ಎಫೆಕ್ಟ್ ಜೊತೆಗೆ ಈ ಧಾರಾವಾಹಿ ಪ್ರಸಾರ ಆಗುತ್ತಿದೆ. ಹೀಗಾಗಿಯೇ ಇಷ್ಟು ದುಬಾರಿ ಬಜೆಟ್‌ ಬೇಕು. ಆದರೆ ಈ ಬಜೆಟ್‌ನಲ್ಲಿ ಸಿನಿಮಾವನ್ನು ಮಾಡಬಹುದು ಎಂದು ನಿರ್ಮಾಪಕರಿಗೆ ಕೆಲವರು ಸಲಹೆ ಕೂಡ ನೀಡಿದ್ದಾರಂತೆ.



Read more

[wpas_products keywords=”deal of the day sale today offer all”]