ಹೌದು.. ಆಕೆಯ ಹೆಸರು ಚೈತ್ರಾ.. 26 ಹರೆಯದ ಈ ಯುವತಿಗೆ ಆಗತಾನೆ ಮದುವೆಯಾಗಿತ್ತು. ಮನೆಯಲ್ಲೆಲ್ಲ ಮದುವೆಯ ಗೌಜು ಗದ್ದಲಗಳು ನಡೆಯುತ್ತಿತ್ತು. ತನ್ನ ಮದುವೆಯ ಆರತಕ್ಷತೆ ದಿನ ಬೆಳಗ್ಗೆದ್ದು ಸಂಭ್ರಮದಿಂದಲೇ ಓಡಾಡಿದ್ದ ನವ ಮದುಮಗಳು ಚೈತ್ರಾ, ಆರತಕ್ಷತೆ ನಡೆಯುತ್ತಿದ್ದ ವೇಳೆಯೇ ಕುಸಿದು ಬಿದ್ದು ಇದ್ದಕ್ಕಿದ್ದ ಹಾಗೆ ಅಸ್ವಸ್ಥಳಾಗಿದ್ದಾಳೆ. ಪ್ರಜ್ಞೆ ತಪ್ಪಿದ್ದ ಚೈತ್ರಾಳನ್ನು ಕೂಡಲೇ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆಯ ಬ್ರೈನ್ ಡೆಡ್ ಆಗಿದೆ. ಇನ್ನು ಆಕೆ ಬದುಕುಳಿಯೋದು ಕಷ್ಟ ಅನ್ನೋದು ತಿಳಿದಾಗ ಮದುವೆಯ ಮನೆಯಲ್ಲಿ ಸೂತಕದ ವಾತಾವರಣ ಮನೆಮಾಡಿದೆ. ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಯುವತಿ ಚೈತ್ರಾ ಅವರು ತನ್ನ ಮದುವೆಯ ಆರತಕ್ಷತೆಯ ವೇಳೆಯೇ ಕುಸಿದುಬಿದ್ದು ಅಸ್ವಸ್ಥಗೊಂಡ ಯುವತಿ. ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಆಕೆಯನ್ನು ಪರೀಕ್ಷಿಸಿ ಬ್ರೈನ್ ಡೆಡ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಕುಟುಂಬಸ್ಥರ ಜೊತೆ ಮಾತನಾಡಿ ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಸಚಿವ ಡಾ.ಸುಧಾಕರ್ ಅವರು ತಮ್ಮ ಟ್ವೀಟ್‌ನಲ್ಲಿ ‘26 ವರ್ಷಗಳ ಚೈತ್ರಾ ಪಾಲಿಗೆ ಇದು ಒಂದು ಮಹತ್ವದ ದಿನವಾಗಿತ್ತು, ಆದರೆ ವಿಧಿಯಾಟವೇ ಬೇರೆ ಆಗಿತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮದುವೆಯ ಆರತಕ್ಷತೆ ವೇಳೆ ಕುಸಿದು ಬಿದ್ದರು. ನಂತರ ನಿಮ್ಹಾನ್ಸ್‌ನಲ್ಲಿ ಆಕೆಯ ಬ್ರೈನ್ ಡೆಡ್ ಆಗಿರುವ ಬಗ್ಗೆ ಘೋಷಿಸಲಾಯಿತು. ಹೃದಯವಿದ್ರಾವಕ ದುರಂತದ ನಡುವೆಯೂ ಆಕೆಯ ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ’ ಎಂದು ಹೇಳಿದ್ದಾರೆ.
Read more
[wpas_products keywords=”deal of the day sale today offer all”]