Karnataka news paper

IPL 2022 Auction Live updates: ಐಪಿಎಲ್‌ ಮೆಗಾ ಹರಾಜಿಗೆ ಕ್ಷಣಗಣನೆ!


ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಆಟಗಾರರ ಮೆಗಾ ಹರಾಜು ಇಂದು ಆರಂಭವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಮ್ಮ-ತಮ್ಮ ಬೇಡಿಕೆಗೆ ಅನುಗುಣವಾಗಿ ಆಟಗಾರರನ್ನು ಖರೀದಿಸಲಿವೆ. ಹರಾಜಿನಲ್ಲಿ ಗರಿಷ್ಠ ಬೆಲೆ 2 ಕೋಟಿ ರೂ. ಗಳಿದ್ದು, ಕನಿಷ್ಠ ಬೆಲೆ 20 ಲಕ್ಷ ರೂ. ಗಳನ್ನು ನಿಗದಿಪಡಿಸಲಾಗಿದೆ.

ಇದೀಗ ಎಲ್ಲಾ ಫ್ರಾಂಚೈಸಿಗಳ ಅಧಿಕಾರಿಗಳು ಮೆಗಾ ಹರಾಜಿಗೆ ಆಗಮಿಸಿದ್ದು, ತಮ್ಮದೇ ಆದ ಯೋಜನೆಗಳಿಗೆ ಅನುಗುಣವಾಗಿ ಆಟಗಾರರನ್ನು ಖರೀದಿಸಲು ಎದುರು ನೋಡುತ್ತಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ಎರಡು ಹೊಸ ತಂಡಗಳು ಭಾಗವಹಿಸಲಿದ್ದು, ಮೆಗಾ ಹರಾಜಿನಲ್ಲಿ ಸ್ಪರ್ಧೆ ಜಿದ್ದಾಜಿದ್ದಿನಿಂದ ಕೂಡಿರುತ್ತದೆ.

ಒಟ್ಟು 33 ಆಟಗಾರರು ಈಗಾಗಲೇ ಆಯಾ ತಂಡಗಳಲ್ಲಿ ಉಳಿದುಕೊಂಡಿದ್ದು, ಇನ್ನುಳಿದ ಸ್ಥಾನಗಳಿಗೆ ಫ್ರಾಂಚೈಸಿಗಳು ಇಂದು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲಿವೆ.

ಐಪಿಎಲ್‌ ಮೆಗಾ ಆಕ್ಷನ್‌ ಮುನ್ನ ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳಿವು!

ತಂಡಗಳ ಪರ್ಸ್‌ ಮೊತ್ತ ಹೀಗಿದೆ

  • ಸಿಎಸ್‌ಕೆ: ಪರ್ಸ್‌ ಮೊತ್ತ 48 ಕೋಟಿ ರೂ., ಒಟ್ಟು 21 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಡೆಲ್ಲಿ ಕ್ಯಾಪಿಟಲ್ಸ್‌: ಪರ್ಸ್‌ ಮೊತ್ತ 47.5 ಕೋಟಿ ರೂ., ಒಟ್ಟು 21 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಕೋಲ್ಕತಾ ನೈಟ್‌ ರೈಡರ್ಸ್‌: ಪರ್ಸ್‌ ಮೊತ್ತ 48 ಕೋಟಿ ರೂ., ಒಟ್ಟು 21 ಆಟಗಾರರನ್ನು ಖರೀದಿಸಬಹುದು, 6 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಲಖನೌ ಸೂಪರ್‌ ಜಯಂಟ್ಸ್‌: ಪರ್ಸ್‌ ಮೊತ್ತ 59 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಮುಂಬೈ ಇಂಡಿಯನ್ಸ್‌: ಪರ್ಸ್‌ ಮೊತ್ತ 48 ಕೋಟಿ ರೂ., ಒಟ್ಟು 21 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಪಂಜಾಬ್ ಕಿಂಗ್ಸ್‌: ಪರ್ಸ್‌ ಮೊತ್ತ 72 ಕೋಟಿ ರೂ., ಒಟ್ಟು 23 ಆಟಗಾರರನ್ನು ಖರೀದಿಸಬಹುದು, 8 ವಿದೇಶಿಗರನ್ನು ಖರೀದಿಸಲು ಅವಕಾಶ.
  • ರಾಜಸ್ಥಾನ್‌ ರಾಯಲ್ಸ್‌: ಪರ್ಸ್‌ ಮೊತ್ತ 62 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಆರ್‌ಸಿಬಿ: ಪರ್ಸ್‌ ಮೊತ್ತ 57 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಸನ್‌ರೈಸರ್ಸ್‌ ಹೈದರಾಬಾದ್‌: ಪರ್ಸ್‌ ಮೊತ್ತ 68 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಅಹ್ಮದಾಬಾದ್ ತಂಡ: ಪರ್ಸ್‌ ಮೊತ್ತ 52 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.

ಮೆಗಾ ಆಕ್ಷನ್‌ನಲ್ಲಿ ಪಾಲ್ಗೊಳ್ಳಲಿರುವ 590 ಆಟಗಾರರ ಅಂತಿಮ ಪಟ್ಟಿ ಬಿಡುಗಡೆ!
10 ತಂಡಗಳಲ್ಲಿ ಈಗಾಗಲೇ ಇರುವ ಆಟಗಾರರು

  1. ಅಹ್ಮದಾಬಾದ್‌ ಫ್ರಾಂಚೈಸಿ: ಹಾರ್ದಿಕ್‌ ಪಾಂಡ್ಯ, ಶುಭಮನ್ ಗಿಲ್, ರಶೀದ್‌ ಖಾನ್‌
  2. ಚೆನ್ನೈ ಸೂಪರ್‌ ಕಿಂಗ್ಸ್‌: ರವೀಂದ್ರ ಜಡೇಜಾ, ಎಂಎಸ್‌ ಧೋನಿ, ಮೊಯೀನ್‌ ಅಲಿ, ಋತುರಾಜ್‌ ಗಾಯಕ್ವಾಡ್‌
  3. ಡೆಲ್ಲಿ ಕ್ಯಾಪಿಟಲ್ಸ್‌: ರಿಷಭ್ ಪಂತ್‌, ಪೃಥ್ವಿ ಶಾ, ಅಕ್ಷರ್‌ ಪಟೇಲ್‌, ಎನ್ರಿಕ್‌ ನೊರ್ಕಿಯ
  4. ಕೋಲ್ಕತಾ ನೈಟ್‌ ರೈಡರ್ಸ್‌: ಸುನಿಲ್‌ ನರೈನ್‌, ಆಂಡ್ರೆ ರೆಸಲ್‌, ವರುಣ್‌ ಚಕ್ರವರ್ತಿ, ವೆಂಕಟೇಶ್‌ ಅಯ್ಯರ್‌
  5. ಲಖನೌ ಸೂಪರ್‌ ಜಯಂಟ್ಸ್‌: ಕೆಎಲ್‌ ರಾಹುಲ್‌, ಮಾರ್ಕಸ್‌ ಸ್ಟೋಯ್ನಿಸ್‌, ರವಿ ಬಿಷ್ಣೋಯ್‌
  6. ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ಕೈರೊನ್‌ ಪೊಲಾರ್ಡ್‌
  7. ಪಂಜಾಬ್‌ ಕಿಂಗ್ಸ್‌: ಮಯಾಂಕ್‌ ಅಗರ್ವಾಲ್‌, ಅರ್ಷದೀಪ್‌ ಸಿಂಗ್‌
  8. ರಾಜಸ್ಥಾನ್‌ ರಾಯಲ್ಸ್‌: ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌, ಯಶಸ್ವಿ ಜೈಸ್ವಾಲ್‌
  9. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಹಮ್ಮದ್‌ ಸಿರಾಜ್‌
  10. ಸನ್‌ರೈಸರ್ಸ್‌ ಹೈದರಾಬಾದ್: ಕೇನ್‌ ವಿಲಿಯಮ್ಸನ್‌, ಅಬ್ದುಲ್‌ ಸಮದ್‌, ಉಮ್ರಾನ್‌ ಮಲಿಕ್‌

* ಇನ್ನು ಹರಾಜಿನಲ್ಲಿ ಆಟಗಾರರಿಗೆ ಗರಿಷ್ಠ 2 ಕೋಟಿ ರೂ. ಮತ್ತು ಕನಿಷ್ಠ 20 ಲಕ್ಷ ರೂ. ಬೆಲೆ ನಿಗದಿ ಪಡಿಸಲಾಗಿದೆ.



Read more

[wpas_products keywords=”deal of the day gym”]